ತೋಟದಲ್ಲಿ ರೈತ ಭೀಮಪ್ಪ ರುದ್ರನ್ನವರ ಏಳು ಕೆಜಿ ಗೆಣಸು ಬೆಳೆದು ಅಚ್ಚರಿ ಮೂಡಿಸಿದ್ದಾರೆ.
Advertisement
10 ಗುಂಟೆ ಜಾಗದಲ್ಲಿ 16 ಕ್ವಿಂಟಲ್ ಗೆಣಸು ಬೆಳೆದಿದ್ದಾರೆ. ಸಾಮಾನ್ಯವಾಗಿ ಪ್ರತಿ ಗೆಣಸುಗಳು 250 ಗ್ರಾಂನಿಂದ 500 ಗ್ರಾಂ ತೂಕಹೊಂದಿರುತ್ತವೆ. ಆದರೆ, ರೈತ ಭೀಮಪ್ಪ ಬೆಳೆದ ಗೆಣಸು ಏಳು ಕೆಜಿ ತೂಕ ಹೊಂದಿದೆ. ಸಾವಯವ ಪದ್ಧತಿ ಮೂಲಕ ಬೆಳೆ ಬೆಳೆದಿರುವ ಇವರು ತಾವೇ ಸ್ವತಃ ಸಂತೆಗಳಿಗೆ ತೆರಳಿ ಮಾರಾಟ ಮಾಡುವ ಮೂಲಕ ಅದರಲ್ಲಿಯೇ ಸುಮಾರು 50 ಸಾವಿರಕಿಂತ ಹೆಚ್ಚು ಲಾಭ ಗಳಿಸಿದ್ದಾರೆ.