Advertisement

ಸ್ಪರ್ಧೆ ಇದೆ ಜೋರು, 6ನೇ ಹಂತದಲ್ಲಿ ಗೆಲ್ಲೋರು ಯಾರು?

10:06 AM May 12, 2019 | keerthan |

ಇಂದು ದೇಶದ 7 ರಾಜ್ಯಗಳ 59 ಸಂಸದೀಯ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಈ 59ರ‌ಲ್ಲಿ 45 ಕ್ಷೇತ್ರಗಳಲ್ಲಿ ಗೆಲುವು ಪಡೆದಿತ್ತು. ಈ ಬಾರಿಯೂ ಇಲ್ಲಿ ಖ್ಯಾತನಾಮ ಅಭ್ಯರ್ಥಿಗಳು ಇದ್ದಾರೆ. ಕಣದಲ್ಲಿರುವ ಪ್ರಮುಖರು ಯಾರು, ಅವರ ಎದುರಾಳಿ ಯಾರು ಎನ್ನುವ ಕಿರು ಮಾಹಿತಿ ಇಲ್ಲಿದೆ.

Advertisement

ಒಟ್ಟು ಮತದಾರರು: 101,782,472
ಪುರುಷ ಮತದಾರರು: 54,260,965
ಮಹಿಳಾ ಮತದಾರರು: 47,518,226
ತೃತೀಯ ಲಿಂಗಿ ಮತದಾರರು: 3,281

ಈಶಾನ್ಯ(ದೆಹಲಿ)
* ಈ ಬಾರಿಯ ಅಭ್ಯರ್ಥಿ: ಮನೋಜ್‌ ತಿವಾರಿ(ಬಿಜೆಪಿ)
* ಎದುರಾಳಿ ಅಭ್ಯರ್ಥಿ: ಶೀಲಾ ದೀಕ್ಷಿತ್‌ (ಕಾಂಗ್ರೆಸ್‌), ದಿಲೀಪ್‌ ಪಾಂಡೆ(ಆಪ್‌)
*2014ರಲ್ಲಿ : ಬಿಜೆಪಿಯ ಮನೋಜ್‌ ತಿವಾರಿ ಆಪ್‌ನ ಆನಂದ್‌ ಕುಮಾರ್‌ ಅವರನ್ನು 1,44,084 ಮತಗಳ ಅಂತರದಿಂದ ಸೋಲಿಸಿದ್ದರು.

ಪೂರ್ವ(ದೆಹಲಿ)


*ಈ ಬಾರಿಯ ಅಭ್ಯರ್ಥಿ: ಗೌತಮ್‌ ಗಂಭೀರ್‌(ಬಿಜೆಪಿ)
* ಎದುರಾಳಿ ಅಭ್ಯರ್ಥಿ: ಆತಿಶಿ (ಆಪ್‌),  ಅರವಿಂದರ್‌ ಲವ್ಲಿ(ಕಾಂಗ್ರೆಸ್‌)
*2014ರಲ್ಲಿ: ಬಿಜೆಪಿಯ ಮಹೇಶ್‌ ಗಿರಿ ಆಪ್‌ನ ರಾಜ್‌ಮೋಹನ್‌ ಗಾಂಧಿಯನ್ನು 1,90, 463 ಮತಗಳ ಅಂತರದಿಂದ ಸೋಲಿಸಿದ್ದರು.

ಗುಣಾ(ಬಿಹಾರ)
*ಈ ಬಾರಿಯ ಅಭ್ಯರ್ಥಿ: ಜ್ಯೋತಿರಾದಿತ್ಯ ಸಿಂಧಿಯಾ (ಕಾಂಗ್ರೆಸ್‌)
*ಎದುರಾಳಿ ಅಭ್ಯರ್ಥಿ: ಡಾ. ಕೆ.ಪಿ. ಯಾದವ್‌ (ಬಿಜೆಪಿ)
*2014ರಲ್ಲಿ: ಕಾಂಗ್ರೆಸ್‌ನ ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿಯ ಜೈ ಭಾನ್‌ಸಿಂಗ್‌ರನ್ನು 1,20,792 ಮತಗಳ ಅಂತರದಿಂದ ಸೋಲಿಸಿದ್ದರು.

Advertisement

ಘಾಟಲ್‌ (ಪ.ಬಂಗಾಲ)
*ಈ ಬಾರಿಯ ಅಭ್ಯರ್ಥಿ: ದೀಪಕ್‌ ಅಧಿಕಾರಿ (ಟಿಎಂಸಿ)
*ಎದುರಾಳಿ ಅಭ್ಯರ್ಥಿ: ಭಾರತೀ ಘೋಷ್‌ (ಬಿಜೆಪಿ)
*2014ರಲ್ಲಿ: ಟಿಎಂಸಿಯ ದೀಪಕ್‌ ಅಧಿಕಾರಿ ಸಿಪಿಐಎಂನ ಸಂತೋಷ್‌ರಾಣಾರನ್ನು 2,50,891 ಮತಗಳ ಅಂತರದಿಂದ ಸೋಲಿಸಿದ್ದರು.

ಭೋಪಾಲ್‌(ಮಧ್ಯಪ್ರದೇಶ)


*ಈ ಬಾರಿಯ ಅಭ್ಯರ್ಥಿ: ಸಾಧ್ವಿ ಪ್ರಜ್ಞಾ ಸಿಂಗ್‌ (ಬಿಜೆಪಿ)
* ಎದುರಾಳಿ ಅಭ್ಯರ್ಥಿ: ದಿಗ್ವಿಜಯ್‌ ಸಿಂಗ್‌ (ಕಾಂಗ್ರೆಸ್‌)
* 2014ರಲ್ಲಿ: ಬಿಜೆಪಿ ಅಲೋಕ್‌ ಸಂಜಾರ್‌ ಕಾಂಗ್ರೆಸ್‌ನ ಪಿ.ಸಿ ಶರ್ಮಾರನ್ನು 3,70,696 ಮತಗಳ ಅಂತರದಿಂದ ಸೋಲಿಸಿದ್ದರು.

ಸುಲ್ತಾನ್‌ಪುರ(ಉತ್ತರಪ್ರದೇಶ)
*ಈ ಬಾರಿಯ ಅಭ್ಯರ್ಥಿ: ಮನೇಕಾ ಗಾಂಧಿ (ಬಿಜೆಪಿ)
*ಎದುರಾಳಿ ಅಭ್ಯರ್ಥಿ: ಸಂಜಯ್‌ ಸಿಂಗ್‌(ಕಾಂಗ್ರೆಸ್‌), ಚಂದ್ರಭದ್ರ ಸಿಂಗ್‌(ಬಿಎಸ್‌ಪಿ)
* 2014ರಲ್ಲಿ: ಬಿಜೆಪಿಯ ವರುಣ್‌ ಗಾಂಧಿಯವರು ಬಿಎಸ್‌ಪಿಯ ಪವನ್‌ ಪಾಂಡೇರನ್ನು 1,78,902 ಮತಗಳ ಅಂತರದಿಂದ ಸೋಲಿಸಿದ್ದರು.

ಆಜಂಗಢ(ಉತ್ತರಪ್ರದೇಶ)


*ಈ ಬಾರಿಯ ಅಭ್ಯರ್ಥಿ: ಅಖೀಲೇಶ್‌ ಯಾದವ್‌(ಎಸ್‌ಪಿ)
*ಎದುರಾಳಿ ಅಭ್ಯರ್ಥಿ: ದಿನೇಶ್‌ಲಾಲ್‌ ಯಾದವ್‌(ಬಿಜೆಪಿ)
*2014ರಲ್ಲಿ: ಎಸ್‌ಪಿಯ ಮುಲಾಯಂ ಸಿಂಗ್‌ ಯಾದವ್‌ ಅವರು ಬಿಜೆಪಿಯ ರಮಾಕಾಂತ್‌ ಯಾದವ್‌ರನ್ನು 3,13, 204 ಮತಗಳ ಅಂತರದಿಂದ ಸೋಲಿಸಿದ್ದರು.

ಪೂರ್ವ ಚಂಪಾರಣ್‌(ಬಿಹಾರ)
*ಈ ಬಾರಿಯ ಅಭ್ಯರ್ಥಿ: ರಾಧಾ ಮೋಹನ್‌ ಸಿಂಗ್‌(ಬಿಜೆಪಿ)
*ಎದುರಾಳಿ ಅಭ್ಯರ್ಥಿ: ಆಕಾಶ್‌ ಕುಮಾರ್‌ ಸಿಂಗ್‌ (ಆರ್‌ಎಲ್‌ಎಲ್‌ಪಿ)
*2014ರಲ್ಲಿ: ಬಿಜೆಪಿಯ ರಾಧಾಮೋಹನ್‌ ಸಿಂಗ್‌ ಆರ್‌ಜೆಡಿಯ ವಿನೋದ್‌ ಕುಮಾರ್‌ರನ್ನು 1,92,163 ಮತಗಳ ಅಂತರದಿಂದ ಸೋಲಿಸಿದ್ದರು.

ಹೊಸದಿಲ್ಲಿ
*ಈ ಬಾರಿಯ ಅಭ್ಯರ್ಥಿ: ಮೀನಾಕ್ಷಿ ಲೇಖೀ (ಬಿಜೆಪಿ)
*ಎದುರಾಳಿ ಅಭ್ಯರ್ಥಿ: ಅಜಯ್‌ ಮಕೇನ್‌(ಕಾಂಗ್ರೆಸ್‌), ಬೃಜೇಶ್‌ ಗೋಯಲ್‌ (ಆಪ್‌)
* 2014ರಲ್ಲಿ: ಬಿಜೆಪಿಯ ಮೀನಾಕ್ಷಿ ಲೇಖೀ ಆಪ್‌ನ ಆಶಿಶ್‌ ಖೇತನ್‌ ಅವರನ್ನು 1,62,708 ಮತಗಳ ಅಂತರದಿಂದ ಸೋಲಿಸಿದ್ದರು.

ಧನಬಾದ್‌ (ಜಾರ್ಖಂಡ್‌)
*ಈ ಬಾರಿಯ ಅಭ್ಯರ್ಥಿ: ಪಶುಪತಿ ನಾಥ್‌ ಸಿಂಗ್‌(ಬಿಜೆಪಿ)
* ಎದುರಾಳಿ ಅಭ್ಯರ್ಥಿ: ಕೀರ್ತಿ ಆಜಾದ್‌(ಕಾಂಗ್ರೆಸ್‌)
*2014: ಬಿಜೆಪಿಯ ಪುಶುಪತಿನಾಥ್‌ ಸಿಂಗ್‌, ಕಾಂಗ್ರೆಸ್‌ನ ಅಜಯ್‌ ಕುಮಾರ್‌ ದುಬೆ ಅವರನ್ನು 2,92,954 ಮತಗಳ ಅಂತರದಿಂದ ಸೋಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next