Advertisement

ಜಪಾನ್‌ ಜತೆ 6 ಒಪ್ಪಂದ

08:11 AM Oct 30, 2018 | Harsha Rao |

ಟೋಕಿಯೋ: ಪ್ರಧಾನಿ ನರೇಂದ್ರ ಮೋದಿ ಅವರ 2 ದಿನಗಳ ಜಪಾನ್‌ ಪ್ರವಾಸವು ಫ‌ಲಪ್ರದವಾಗಿದ್ದು, ಮಹತ್ವಾ ಕಾಂಕ್ಷೆಯ ಬುಲೆಟ್‌ ರೈಲು ಯೋಜನೆ, ನೌಕಾ ಸಹಕಾರ ಸೇರಿ ದಂತೆ 6 ಒಪ್ಪಂದಗಳಿಗೆ ಎರಡೂ ದೇಶಗಳು ಸಹಿ ಹಾಕಿವೆ. ಅಲ್ಲದೆ, ಜಪಾನ್‌ ಪ್ರಧಾನಿ ಶಿಂಜೋ ಅಬೆ ಜತೆ ಪ್ರಧಾನಿ ಮೋದಿ ಅವರು ವಿಸ್ತೃತವಾದ ದ್ವಿಪಕ್ಷೀಯ ಮಾತು ಕತೆ ನಡೆಸಿದ್ದು, ಎರಡೂ ದೇಶಗಳ ಹಿತಾಸಕ್ತಿಗೆ ಸಂಬಂಧಿಸಿದ ವಿಚಾರಗಳು, ಭಯೋತ್ಪಾದನೆಯಿಂದ ಎದುರಾಗಿರುವ ಸಮಸ್ಯೆಗಳು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಿದ್ದಾರೆ.

Advertisement

ಅಮೆರಿಕದ ಮಾದರಿಯಲ್ಲೇ ಭಾರತ ಮತ್ತು ಜಪಾನ್‌ನ ವಿದೇಶಾಂಗ ಮತ್ತು ರಕ್ಷಣಾ ಸಚಿವರ ಮಟ್ಟದ 2+2 ಮಾತು ಕತೆ ನಡೆಸುವ ಕುರಿತೂ ಉಭಯ ದೇಶಗಳು ನಿರ್ಧಾರ ಕೈಗೊಂಡಿರುವುದು ಮೋದಿ ಜಪಾನ್‌ ಭೇಟಿಯ ಮತ್ತೂಂದು ಯಶಸ್ಸು ಎಂದು ಹೇಳಲಾಗಿದೆ. ಅಬೆ ಜತೆಗಿನ ಮಾತು ಕತೆ ಬಳಿಕ ಮಾತನಾಡಿದ ಪ್ರಧಾನಿ ಮೋದಿ, “ಡಿಜಿಟಲ್‌ ಪಾಲು ದಾರಿಕೆಯಿಂದ ಸೈಬರ್‌ ಸ್ಪೇಸ್‌ವರೆಗೆ, ಆರೋಗ್ಯ ದಿಂದ ರಕ್ಷಣೆ ವರೆಗೆ, ಸಮುದ್ರದಿಂದ ಬಾಹ್ಯಾಕಾಶ ದವರೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತ ಮತ್ತು ಜಪಾನ್‌ ನಡುವಿನ ಸಹಭಾಗಿತ್ವವನ್ನು ಇನ್ನಷ್ಟು ಗಟ್ಟಿಗೊಳಿ ಸಲಿದ್ದೇವೆ’ ಎಂದರು.

ಭಾರತ-ಜಪಾನ್‌ ಸಹಭಾಗಿತ್ವದ ಪ್ರಮುಖ ಸಂಕೇತವಾಗಿ ರುವ ಮುಂಬೈ-ಅಹಮದಾಬಾದ್‌ ಹೈಸ್ಪೀಡ್‌ ರೈಲು ಯೋಜನೆ (ಬುಲೆಟ್‌ ರೈಲು)ಯ ಪ್ರಗತಿ ಬಗ್ಗೆಯೂ ಉಭಯ ನಾಯಕರು ಪರಿಶೀಲನೆ ನಡೆಸಿದರು.

ಕರೆನ್ಸಿ ವಿನಿಮಯ: ಸುಮಾರು 75 ಶತಕೋಟಿ ಡಾಲರ್‌ ಮೊತ್ತದ ದ್ವಿಪಕ್ಷೀಯ ಕರೆನ್ಸಿ ವಿನಿಮಯ ಒಪ್ಪಂದಕ್ಕೂ ಭಾರತ-ಜಪಾನ್‌ ಸಹಿ ಹಾಕಿದೆ. ವಿದೇಶ ವಿನಿಮಯ ಮತ್ತು ಬಂಡವಾಳ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ಇದು ನೆರವಾಗಲಿದೆ. 

ಪರಮಾಣು ಭಯೋತ್ಪಾದನೆ ನಿರ್ಮೂಲನೆಗೆ ಪಣ: ಜಗತ್ತಿನಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆಯನ್ನು ಖಂಡಿಸಿದ ಮೋದಿ ಹಾಗೂ ಅಬೆ, ಉಗ್ರರ ಸುರಕ್ಷಿತ ತಾಣಗಳನ್ನು ನಿರ್ಮೂ ಲನೆ ಮಾಡುವ ನಿಟ್ಟಿನಲ್ಲಿ ಎಲ್ಲ ದೇಶಗಳೂ ಒಂದಾಗಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಜತೆಗೆ, ಅಣ್ವಸ್ತ್ರಗಳ ಸಂಪೂರ್ಣ ನಿರ್ಮೂಲನೆ ಹಾಗೂ ಪರ ಮಾಣು ಭಯೋತ್ಪಾದನೆಯನ್ನು ಬುಡದಿಂದಲೇ ಕಿತ್ತು ಹಾಕು ವಲ್ಲಿ ಅಂತಾರಾಷ್ಟ್ರೀಯ ಸಹಕಾರಕ್ಕೆ ಬದ್ಧ ಎಂದೂ ಉಭಯ ನಾಯಕರು ಹೇಳಿದರು. ಇದೇ ವೇಳೆ, ಮುಂಬೈ ಮತ್ತು ಪಠಾಣ್‌ಕೋಟ್‌ ದಾಳಿಯ ತಪ್ಪಿತಸ್ಥರಿಗೆ ಆದಷ್ಟು ಬೇಗ ಶಿಕ್ಷೆಯಾಗುವಂತೆ ಮಾಡಿ ಎಂದು ಮೋದಿ ಹಾಗೂ ಅಬೆ ಅವರು ಪಾಕಿಸ್ಥಾನಕ್ಕೆ ಆಗ್ರಹಿಸಿದರು.

Advertisement

ತಂಪು ಪಾನೀಯಕ್ಕಿಂತ 1ಜಿಬಿ ಡೇಟಾ ಅಗ್ಗ
13ನೇ ಭಾರತ-ಜಪಾನ್‌ ಶೃಂಗದಲ್ಲಿ ಪಾಲ್ಗೊಳ್ಳುವ ಮುನ್ನ ಪ್ರಧಾನಿ ಮೋದಿ ಜಪಾನ್‌ನ ವಿದೇಶಾಂಗ ಸಚಿವರೂ ಸೇರಿದಂತೆ ಪ್ರಮುಖ ನಾಯಕರೊಂದಿಗೆ ಸರಣಿ ಸಭೆಗಳನ್ನು ನಡೆಸಿದರು. ಅಲ್ಲದೆ, ಇಲ್ಲಿರುವ ಭಾರತೀಯ ಸಮುದಾಯವನ್ನು ಉದ್ದೇಶಿಸಿಯೂ ಮಾತನಾಡಿದರು. ಈ ವೇಳೆ, ಭಾರತದ ಡಿಜಿಟಲ್‌ ಮೂಲಸೌಕರ್ಯದಲ್ಲಾದ ಪ್ರಗತಿಯನ್ನು ಉಲ್ಲೇಖೀಸಿದ ಅವರು, “ಭಾರತದಲ್ಲಿ ಈಗ ಒಂದು ಬಾಟಲಿ ತಂಪು ಪಾನೀಯಕ್ಕಿಂತಲೂ ಕಡಿಮೆ ದರದಲ್ಲಿ 1ಜಿಬಿ ಡೇಟಾ ಸಿಗುತ್ತಿದೆ. ಬ್ರಾಡ್‌ಬ್ಯಾಂಡ್‌ ಕನೆಕ್ಟಿವಿಟಿಯು ದೇಶದ ಗ್ರಾಮ ಗ್ರಾಮಗಳಿಗೂ ತಲುಪುತ್ತಿದೆ. ಸುಮಾರು 100 ಕೋಟಿ ಮೊಬೈಲ್‌ ಫೋನ್‌ಗಳು ಭಾರತದಲ್ಲಿ ಬಳಕೆಯಲ್ಲಿವೆ’ ಎಂದು ಹೇಳಿದರು. ಜತೆಗೆ, ಭಾರತವು ಭಾರೀ ಪ್ರಮಾಣದ ಬದಲಾವಣೆಯನ್ನು ಕಾಣುತ್ತಿದೆ. ಮುಂದಿನ ದಶಕದಲ್ಲಿ ನಮ್ಮ ದೇಶವೇ ಜಾಗತಿಕ ಆರ್ಥಿಕತೆಯ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಅಂತಾರಾಷ್ಟ್ರೀಯ ಸಂಸ್ಥೆಗಳೇ ಅಭಿಪ್ರಾಯಪಟ್ಟಿವೆ. ಹೀಗಾಗಿ ನವಭಾರತ ನಿರ್ಮಾಣದಲ್ಲಿ ಜಪಾನ್‌ನಲ್ಲಿರುವ ಭಾರತೀಯ ಸಮುದಾಯವೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದೂ ಮೋದಿ ಕರೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next