Advertisement

ಜ್ಯೋತಿ ಕ್ರೆಡಿಟ್‌ ಸೊಸೈಟಿಯ 6ನೇ ಶಾಖೆ ಪುಣೆಯಲ್ಲಿ ಲೋಕಾರ್ಪಣೆ

04:27 PM Nov 13, 2018 | Team Udayavani |

ಪುಣೆ: ಕುಲಾಲ ಸಂಘ ಮುಂಬಯಿ ಸಂಚಾಲಕತ್ವದ ಪ್ರತಿಷ್ಠಿತ ಜ್ಯೋತಿ ಕೋ. ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ 6 ನೇ ನೂತನ ಶಾಖೆಯು ಕಾತ್ರಜ್‌ನ ದತ್ತನಗರದಲ್ಲಿ ನ. 1ರಂದು ಲೋಕಾರ್ಪಣೆಗೊಂಡಿತು.

Advertisement

ಜ್ಯೋತಿ ಕೋ. ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್‌ ಬಿ. ಸಾಲ್ಯಾನ್‌ ಅವರು ನೂತನ ಶಾಖೆಗೆ ಚಾಲನೆ ನೀಡಿದರು. ಕುಲಾಲ ಸಂಘ ಮುಂಬಯಿ ಅಧ್ಯಕ್ಷ ದೇವದಾಸ್‌ ಎಲ್‌. ಕುಲಾಲ್‌ ಅವರ ಉಪಸ್ಥಿತಿಯಲ್ಲಿ ನಡೆದ ಸಮಾರಂಭದಲ್ಲಿ ಸೊಸೈಟಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಕುಲಾಲ ಸಂಘ ಪುಣೆ ಹಾಗೂ ಕುಲಾಲ ಸಂಘ ಪಿಂಪ್ರಿ-ಚಿಂಚಾÌಡ್‌ನ‌ ಪದಾಧಿಕಾರಿ ಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿತು. ಕಾರ್ಯಕ್ರಮದಲ್ಲಿ ಕುಲಾಲ ಸಂಘ ಮುಂಬಯಿ ಅಧ್ಯಕ್ಷ, ಸೊಸೈಟಿಯ ಗೌರವ ಪ್ರಧಾನ ಕಾರ್ಯದರ್ಶಿ ದೇವದಾಸ್‌ ಎಲ್‌. ಕುಲಾಲ್‌ ಅವರು ಸ್ವಾಗತಿಸಿದರು. ಸೊಸೈಟಿಯ ಕಾರ್ಯಾ ಧ್ಯಕ್ಷ ಗಿರೀಶ್‌ ಬಿ. ಸಾಲ್ಯಾನ್‌ ಹಾಗೂ ಅತಿಥಿಗಳಾಗಿ ಆಗಮಿಸಿದ ಪುಣೆಯ ಉದ್ಯಮಿಗಳಾದ ಹರೀಶ್‌ ಕುಲಾಲ್‌, ವಿಶ್ವನಾಥ ಉಡುಪಿ, ನ್ಯಾಯವಾದಿ ಅಪ್ಪು ಮೂಲ್ಯ, ಲಕ್ಷ್ಮಣ್‌ ಬಿ. ಸಾಲ್ಯಾನ್‌, ವಿಶ್ವನಾಥ ಮೂಲ್ಯ, ಸಂಜೀವ ಮೂಲ್ಯ, ಮನೋಜ್‌ ಉರ್ವ, ಮುಂಬಯಿ ಕಾರ್ಯಕಾರಿ ಮಂಡಳಿಯ ಉಪಕಾರ್ಯಾಧ್ಯಕ್ಷರಾದ ಪಿ. ಶೇಖರ ಮೂಲ್ಯ, ಗಣೇಶ್‌ ಬಿ. ಸಾಲ್ಯಾನ್‌ ಅವರು ಉಪಸ್ಥಿತರಿದ್ದರು. 

ಸೊಸೈಟಿಯ ನಿರ್ದೇಶಕರಾದ ಡಿ.ಐ. ಮೂಲ್ಯ, ಎಚ್‌. ಎಂ. ಥೋರಟ್‌, ನ್ಯಾಯವಾದಿ ಉಮಾ ನಾಥ್‌ ಮೂಲ್ಯ ಶುಭಹಾರೈಸಿದರು.

ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್‌ ಬಿ. ಸಾಲ್ಯಾನ್‌ ಅವರು, ಪುಣೆ ಮಹಾನಗರದ ಸಮಾಜ ಬಾಂಧವರು ಹಾಗೂ ಇತರ ತುಳು-ಕನ್ನಡಿಗರು ಈ ಶಾಖೆಯ ಅಭಿವೃದ್ಧಿಗೆ ಸಹಕರಿಸಬೇಕು. ಕಳೆದ 37 ವರ್ಷಗಳ ಇತಿಹಾಸವನ್ನು ಹೊಂದಿರುವ ಈ ಸೊಸೈಟಿ ತನ್ನ ಐದು ಶಾಖೆಗಳನ್ನು ಮುಂಬಯಿ, ನವಿಮುಂಬಯಿ ಹಾಗೂ ಥಾಣೆ ಮಹಾನಗರಗಳಲ್ಲಿ ಹೊಂದಿಕೊಂಡು, ಪ್ರಸ್ತುತ 6ನೇ ಶಾಖೆಯನ್ನು ಪುಣೆಯ ಕಾತ್ರಾಜ್‌ನಲ್ಲಿ ಪ್ರಾರಂಭಿಸಿದೆ. ಒಟ್ಟು 40 ಕೋ. ರೂ. ಗಳಿಗಿಂತಲೂ ಹೆಚ್ಚಿನ ವ್ಯವಹಾರವನ್ನು ಹೊಂದಿದ್ದು, 5500 ಸದಸ್ಯತನ ಹೊಂದಿದ ಸುದೃಢ ಸೊಸೈಟಿ ಇದಾಗಿದೆ.  ಮುಂದಿನ ದಿನಗಳಲ್ಲಿ ಸೊಸೈಟಿಯನ್ನು ಬ್ಯಾಂಕಾಗಿ ಪರಿವರ್ತಿಸುವ ಉದ್ದೇಶ ನಮ್ಮದಾಗಿದೆ ಎಂದರು.

Advertisement

ಕುಲಾಲ ಸಂಘ ಮುಂಬಯಿ ಅಧ್ಯಕ್ಷ, ಸೊಸೈಟಿಯ ಗೌರವ ಪ್ರಧಾನ ಕಾರ್ಯದರ್ಶಿ ದೇವದಾಸ್‌ ಎಲ್‌. ಕುಲಾಲ್‌ ಮಾತನಾಡಿ, ಆದಷ್ಟು ಬೇಗ 500 ಸದಸ್ಯರು ಹಾಗೂ 1.50 ಕೋ. ರೂ. ಗಳ ವ್ಯವಹಾರವನ್ನು ಹೊಂದುವ ವಿಶ್ವಾಸವನ್ನಿಟ್ಟು ಶಾಖೆಯನ್ನು ಪ್ರಾರಂಭಿಸಲಾಗಿದೆ. ನಮಗೆ ಡೈಲಿ ಡೆಪೋಸಿಟ್‌ ಏಜೆಂಟರ ಆವಶ್ಯಕತೆಯಿದೆ. ಅಲ್ಲದೆ ಶಾಖೆಗೆ ಸಿಬಂದಿಗಳ ಆವಶ್ಯಕತೆಯಿದ್ದು, ಸೊಸೈಟಿಯಲ್ಲಿರುವ ಎಸ್‌ಬಿ ಅಕೌಂಟ್‌, ಫಿಕ್ಸ್‌ಡ್‌ ಡೆಪೋಸಿಟ್‌ ಅಕೌಂಟ್‌, ರಿಕವರಿಂಗ್‌ ಅಕೌಂಟ್‌, ಲಕ್‌ಪತಿ ಡೆಪೋಸಿಟ್‌ ಸ್ಕೀಮ್‌, ಜ್ಯೋತಿ ಡೈಲಿ ಡೆಪೋಸಿಟ್‌ ಸ್ಕೀಮ್‌ಗಳಲ್ಲಿ ಗ್ರಾಹಕರು ತಮ್ಮ ಹಣವನ್ನು ಹೂಡಿ ಹೆಚ್ಚಿನ ಲಾಭವನ್ನು ಪಡೆಯಬಹುದು. ಸೊಸೈಟಿ ಮುಖಾಂತರ ಕೊಡಮಾಡುವ ತತ್‌ಕಾಲಿಕ ಸಾಲ, ವೈಯಕ್ತಿಕ ಸಾಲ, ಶಿಕ್ಷಣ, ಗೃಹ ಸಾಲ, ಸೆಕ್ಯೂರ್‌x ಲೋನ್‌, ಗೋಲ್ಡ್‌ ಲೋನ್‌ ಇನ್ನಿತರ ಸಾಲ ಯೋಜನೆಗಳನ್ನು ಗ್ರಾಹಕರು ಪಡೆದುಕೊಳ್ಳಬಹುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next