ಹೊಸದಿಲ್ಲಿ: ದಿನಗಳೆದಂತೆ ದೇಶದ ಕೋವಿಡ್-19 ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಬುಧವಾರ ಒಂದೇ ದಿನ ದೇಶದಲ್ಲಿ 69,652 ಮಂದಿಗೆ ಕೋವಿಡ್ ಸೋಂಕು ದೃಢವಾಗಿದೆ. ಇದರೊಂದಿಗೆ 24 ಗಂಟೆಯಲ್ಲಿ 977 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.
ದೇಶದ ಒಟ್ಟು ಸೋಂಕಿತರ ಸಂಖ್ಯೆ 28,36,926ಕ್ಕೆ ಏರಿಕೆಯಾಗಿದೆ. ಇವರಲ್ಲಿ 53,866 ಮಂದಿ ಸಾವನ್ನಪ್ಪಿದ್ದು, ಇನ್ನೂ 6,86,395 ಸಕ್ರಿಯ ಪ್ರಕರಣಗಳಿವೆ.
ಭಾರತದಲ್ಲಿ ಕಳೆದ 24 ಗಂಟೆಯಲ್ಲಿ ಒಂಬತ್ತು ಲಕ್ಷಕ್ಕೂ ಅಧಿಕ ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ ಎಂದು ವರದಿ ತಿಳಿಸಿದೆ. ಇದು ದೇಶದಲ್ಲಿ ದಿನವೊಂದರಲ್ಲಿ ನಡೆಸಿದ ಅತೀ ಹೆಚ್ಚು ಕೋವಿಡ್ ಪರೀಕ್ಷೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಪಾಸಿಟಿವ್ ಪ್ರಕರಣಗಳು ಶೇಕಡಾ 8ಕ್ಕಿಂತ ಕೆಳಕ್ಕಿಳಿದಿದೆ ಎನ್ನಲಾಗಿದೆ.
ಇದನ್ನೂ ಓದಿ: ಕೋವಿಡ್ ಗಣಪತಿ: ಚಾಕಲೇಟ್ ನಲ್ಲಿ ಗಣಪತಿಯನ್ನು ನಿರ್ಮಿಸಿದ ಇಂಧೋರ್ ನ ಮಹಿಳೆ
ರಾಜ್ಯದಲ್ಲಿ ಬುಧವಾರ 8,642 ಕೋವಿಡ್ ಪ್ರಕರಣಗಳು ದೃಢವಾಗಿದೆ. 24 ಗಂಟೆಯಲ್ಲಿ 7201 ಮಂದಿ ಗುಣಮುಖರಾಗಿದ್ದು, 126 ಮಂದಿ ಸಾವನ್ನಪ್ಪಿದ್ದಾರೆ.
ರಾಜ್ಯದ ಒಟ್ಟು ಸೋಂಕಿತರ ಸಾವಿನ ಸಂಖ್ಯೆ 2,49,590ಕ್ಕೆ ಏರಿಕೆಯಾಗಿದೆ. ಇದರಲ್ಲಿ 164,150 ಮಂದಿ ಗುಣಮುಖರಾಗಿದ್ದು, 4327 ಮಂದಿ ಸಾವನ್ನಪ್ಪಿದ್ದಾರೆ.