Advertisement

CBI ತನಿಖೆಕೈಗೊಂಡ 6,900 ಪ್ರಕರಣ ಅತಂತ್ರ! ಕೇಂದ್ರ ಸರಕಾರದ ವರದಿಯಲ್ಲೇ ಉಲ್ಲೇಖ

12:31 AM Sep 03, 2024 | Team Udayavani |

ಹೊಸದಿಲ್ಲಿ: ಸಿಬಿಐ ತನಿಖೆ ನಡೆಸಿರು ವ ಬರೋ ಬ್ಬರಿ 6,903 ಭ್ರಷ್ಟಾಚಾರ ಪ್ರಕರಣಗಳು ವಿವಿಧ ಕೋರ್ಟ್‌ ಗಳಲ್ಲಿ ಇನ್ನೂ ವಿಚಾರಣೆಯ ಹಂತ ದಲ್ಲೇ ಇವೆ. ಈ ಪೈಕಿ 361 ಪ್ರಕರಣಗಳು 20 ವರ್ಷಗಳಿಂದ ಇತ್ಯರ್ಥ ಗೊಂಡಿಲ್ಲ ಎಂದು ಕೇಂದ್ರ ವಿಚ ಕ್ಷ ಣ ದಳ(ಸಿವಿಸಿ)ದ 2023ರ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Advertisement

2023ರ ವರೆಗೆ ಇತ್ಯರ್ಥ ವಾಗದೆ ಬಾಕಿ ಉಳಿದರುವ 6,903 ಭ್ರಷ್ಟಾಚಾರ ಪ್ರಕರಣಗಳ ಪೈಕಿ 1,379 ಪ್ರಕರಣಗಳು ಮೂರು ವರ್ಷಗಳಿಂದ ಕೋರ್ಟ್‌ನಲ್ಲಿ ವಿಚಾರಣೆಯ ಹಂತ ದಲ್ಲಿವೆ. 875 ಪ್ರಕರಣಗಳು 3 ವರ್ಷ ಗಳಿಗಿಂತ ಹೆಚ್ಚು ಕಾಲದಿಂದ ವಿಚಾರಣ ಹಂತದಲ್ಲಿವೆ. 2,188 ಪ್ರಕರಣಗಳು 5 ವರ್ಷ ಮತ್ತು 2,100 ಪ್ರಕರಣ ಗಳು 10 ವರ್ಷಗಳಿಗಿಂತ ಹೆಚ್ಚು ಸಮಯದಿಂದ ಇತ್ಯರ್ಥಗೊಳ್ಳದೆ ಬಾಕಿ ಉಳಿದಿವೆ ಎಂದು ವರದಿ ತಿಳಿಸಿದೆ.

ಅಲ್ಲದೆ ಆರೋಪಿಗಳು ಮತ್ತು ಸಿಬಿಐ ಯಿಂದ ಸಲ್ಲಿಸಲಾಗಿರುವ 12,773 ಮೇಲ್ಮನವಿ ಅರ್ಜಿಗಳು ಕೂಡ ವಿವಿಧ ಕೋರ್ಟ್‌ ಗಳಲ್ಲಿ ಇತ್ಯರ್ಥವಾಗದೆ ಬಾಕಿ ಉಳಿದಿವೆ. ಇದರೊಂದಿಗೆ 658 ಕೇಸುಗಳ ತನಿಖೆಯನ್ನು ಸಿಬಿಐ ಇನ್ನೂ ಪೂರ್ಣಗೊಳಿಸಿಯೇ ಇಲ್ಲ ಎಂದೂ ವರದಿಯಲ್ಲಿ ತಿಳಿದುಬಂದಿದೆ.

2023ರಲ್ಲಿ ಸಿಬಿಐ 876 ಪ್ರಕರಣ ಗಳನ್ನು ದಾಖಲಿಸಿದೆ. ಈ ಪೈಕಿ 552 ಭ್ರಷ್ಟಾಚಾರ ಪ್ರಕರಣಗಳ ಎಂದು ಸಿವಿಸಿ ವರದಿ ಬಹಿರಂಗಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.