Advertisement

24 ಗಂಟೆಯಲ್ಲಿ 68,898 ಜನರಿಗೆ ಕೋವಿಡ್ ಸೋಂಕು ದೃಢ: 983 ಸೋಂಕಿತರು ಸಾವು

02:56 PM Aug 21, 2020 | keerthan |

ಹೊಸದಿಲ್ಲಿ: ದೇಶದ ಕೋವಿಡ್ -19 ಸೋಂಕಿತರ ಸಂಖ್ಯೆ 30 ಲಕ್ಷದ ಸನಿಹ ತಲುಪಿದೆ. ಗುರುವಾರ ಒಂದೇ ದಿನ ದೇಶದಲ್ಲಿ 68,898 ಜನರಿಗೆ ಕೋವಿಡ್-19 ಸೋಂಕು ದೃಢವಾಗಿದ್ದು, 983 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Advertisement

68,898 ಹೊಸ ಕೋವಿಡ್ ಪ್ರಕರಣಗಳಿಂದ ದೇಶದ ಒಟ್ಟು ಸೋಂಕಿತರ ಸಂಖ್ಯೆ 29,05,823ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 54849ಕ್ಕೆ ಏರಿಕೆ ಕಂಡಿದೆ.

ಇದೇ ವೇಳೆ ಗುರುವಾರ 62,282 ಮಂದಿ ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದರಿಂದ 21,58,946 ಮಂದಿ ಸೋಂಕಿತರು ಇದುವರೆಗೆ ಗುಣಮುಖರಾದಂತಾಗಿದೆ.

ಗುರುವಾರ ದೇಶದಲ್ಲಿ 8,05,985 ಕೋವಿಡ್ ಪರೀಕ್ಷೆ ಮಾಡಲಾಗಿದೆ. ಇದುವರೆಗೆ ಒಟ್ಟು 3,34,67,237 ಮಾದರಿಯ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಅದರಲ್ಲಿ 29,05,823 ಜನರಿಗೆ ಪಾಸಿಟಿವ್ ಆಗಿದೆ.

ಇದನ್ನೂ ಓದಿ: Detailed: ಜೂನ್ 8ರಂದು ಸುಶಾಂತ್ ಮನೆ ತೊರೆದ ದಿನ ರಿಯಾ, ಮಹೇಶ್ ಭಟ್ ನಡುವೆ ವಾಟ್ಸಪ್ ಚಾಟ್

Advertisement

ಕರ್ನಾಟಕ ರಾಜ್ಯದಲ್ಲಿ ಗುರುವಾರ 7385 ಜನರಿಗೆ ಕೋವಿಡ್ ಸೋಂಕು ದೃಢವಾಗಿದೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 2,56,975 ಕ್ಕೆ ಏರಿಕೆಯಾಗಿದೆ. ಸದ್ಯ 82,149 ಸಕ್ರಿಯ ಪ್ರಕರಣಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next