Advertisement

67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿ ಇಲ್ಲಿದೆ ನೋಡಿ

07:04 PM Mar 22, 2021 | Team Udayavani |

ನವದೆಹಲಿ: ಇಂದು 2019ರ ಸಾಲಿನ 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ. ಕನ್ನಡದ ಅಕ್ಷಿ ಹಾಗೂ ಅವನೇ ಶ್ರೀಮನ್ನಾರಾಯಣ ಚಿತ್ರಗಳು ಪ್ರಶಸ್ತಿ ಬಾಚಿಕೊಂಡಿವೆ. ಬಾಲಿವುಟ್ ನಟ ಮನೋಜ್ ಬಾಜಪೇಯ್ ಹಾಗೂ ತಮಿಳು ನಟ ಧನುಷ್ ಅವರಿಗೆ ಜಂಟಿಯಾಗಿ ಅತ್ಯುತ್ತಮ ನಟ ಪ್ರಶಸ್ತಿ ಒಲಿದಿದೆ. ನೇರ ನುಡಿಗಳಿಂದ ಖ್ಯಾತಿ ಪಡೆದಿರುವ ಬಾಲಿವುಡ್ ನಟಿ ಕಂಗನಾ ರನೌತ್ ಅತ್ಯುತ್ತಮ ನಟಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

Advertisement

67ನೇ ರಾಷ್ಟ್ರೀಯ ಪ್ರಶಸ್ತಿಯ ಪಟ್ಟಿ  :

ಅತ್ಯುತ್ತಮ ಚಿತ್ರ : ಮರಕ್ಕರ್​ ( ಮಲಯಾಳಂ)

ಅತ್ಯುತ್ತಮ ನಟ: ಅಸುರನ್​ ಸಿನಿಮಾಗಾಗಿ ಧನುಷ್​, ಭೋನ್ಸಲೆ ಚಿತ್ರಕ್ಕಾಗಿ ಮನೋಜ್​ ಬಾಜಪೇಯ್

ಅತ್ಯುತ್ತಮ ನಟಿ: ಕಂಗನಾ ರನೌತ್ (ಪಂಗಾ ಮತ್ತು ಮಣಿಕರ್ಣಿಕಾ ಸಿನಿಮಾ)

Advertisement

ಅತ್ಯುತ್ತಮ ಸಹಾಯಕ ನಟ: ನಟ ವಿಜಯ್​ ಸೇತುಪತಿ (ಸೂಪರ್​ ಡಿಲಕ್ಸ್​ ಚಿತ್ರ)

ಅತ್ಯುತ್ತಮ ಸಹಾಯಕ ನಟಿ: ನಟಿ ಪಲ್ಲವಿ ಜೋಷಿ (ದಿ ತಷ್ಕೆಂಟ್​ ಫೈಲ್ಸ್ )

ಅತ್ಯುತ್ತಮ ನಿರ್ದೇಶಕ:  ಸಂಜಯ್​ ಪುರಾನ್ ಸಿಂಗ್​ ಚೌಹನ್ (ಬಹಟ್ಟರ್​ ಹುರೈನ್​ ಚಿತ್ರ)

ಅತ್ಯುತ್ತಮ ಕನ್ನಡ ಚಿತ್ರ : ಅಕ್ಷಿ

ಅತ್ಯುತ್ತಮ ಹಿಂದಿ ಚಿತ್ರ : ಚಿಚೋರೆ

ಅತ್ಯುತ್ತಮ ಬೆಂಗಾಲಿ ಚಿತ್ರ: ಗುಮ್ನಾಮಿ

ಅತ್ಯುತ್ತಮ ತುಳು ಚಿತ್ರ: ಪಿಂಗಾರ

ಅತ್ಯುತ್ತಮ ತೆಲುಗು ಚಿತ್ರ: ಜೆರ್ಸಿ

ಅತ್ಯುತ್ತಮ ತಮಿಳು ಚಿತ್ರ: ಅಸುರನ್

​ಅತ್ಯುತ್ತಮ ಮಲಯಾಳಂ ಚಿತ್ರ: ಸಕಲ್ಲ ನೊಟ್ಟಂ

ಅತ್ಯುತ್ತಮ ಸಾಹಸ ನಿರ್ದೇಶನ : ಅವನ್ನೇ ಶ್ರೀಮನ್ನಾರಾಯಣ

ಅತ್ಯುತ್ತಮ ಸಾಹಸ ನಿರ್ದೇಶನ ತೆಲುಗು: ಮಹರ್ಷಿ

ಅತ್ಯುತ್ತಮ ನಿರ್ದೇಶಕ : ತಮಿಳಿನ ವೆಟ್ರಿಮಾರನ್ ಚಿತ್ರದ ನಿರ್ದೇಶಕ ಅಸುರನ್

ಅತ್ಯತ್ತಮ ಸಾಮಾಜಿಕ ಕಳಕಳಿ ಚಿತ್ರ: ಆನಂದಿ ಗೋಪಾಲ್

​ಅತ್ಯುತ್ತಮ ಸಂಗೀತ ನಿರ್ದೇಶ: ವಿಶ್ವಾಸಂ ಚಿತ್ರಕ್ಕಾಗಿ ಡಿ ಇಮಾನ್​ನಾನ್​

ಅತ್ಯುತ್ತಮ ಚಿತ್ರ ಸ್ನೇಹಿ ರಾಜ್ಯ ( ಸಿಕ್ಕಿಂ)

ಫೀಚರ್​ ಫಿಲ್ಮ್​ ವಿಭಾಗದಲ್ಲಿ ಅತ್ಯುತ್ತಮ ನಿರೂಪಣೆಗಾಗಿ ಸರ್​ ಡೇವಿಡ್​ ಅಟೆನ್​ಬರೋ​ ಅವರ ವೈಲ್ಡ್​ ಕರ್ನಾಟಕ ಚಿತ್ರ ಪ್ರಶಸ್ತಿ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next