Advertisement

67ನೇ ಅಖೀಲ ಭಾರತ ಸಹಕಾರ ಸಪ್ತಾಹ

05:11 PM Nov 16, 2020 | Suhan S |

ಮುಳಬಾಗಿಲು: ಈ ವರ್ಷದ 67ನೇ ಅಖೀಲ ಭಾರತ ಸಹಕಾರ ಸಪ್ತಾಹದ ಧ್ಯೇಯ ಕೋವಿಡ್ ಸೋಂಕು-ಆತ್ಮನಿರ್ಭರ ಭಾರತ-ಸಹಕಾರ ಸಂಸ್ಥೆಗಳು ಎಂಬುದಾಗಿದೆ ಎಂದು ಕೋಚಿಮುಲ್‌ ನಿರ್ದೇಶಕಕಾಡೇನಹಳ್ಳಿ ನಾಗರಾಜ್‌ ತಿಳಿಸಿದರು.

Advertisement

ಭಾನುವಾರನಗರದ ಕೋಲಾರ-ಚಿಕ್ಕಬಳ್ಳಾಪುರಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಶಿಬಿರ ಕಚೇರಿ (ಎಪಿಎಂಸಿ ಯಾರ್ಡ್‌)ನಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ನಿಯಮಿತ ಬೆಂಗಳೂರು, ಕೋಲಾರ ಜಿಲ್ಲಾ ಸಹಕಾರ ಒಕ್ಕೂಟ ನಿಗಮ ಕೋಲಾರ, ಕೋಲಾರ ಮತ್ತು ಚಿಕ Rಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ನಿ, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾ.ಉ.ಸ.ಸಂಘಗಳ ಒಕ್ಕೂಟದ ಉಪಕಚೇರಿ ಮುಳಬಾಗಿಲು, ಸಹಕಾರ ಇಲಾಖೆ ಕೋಲಾರ, ಮುಳಬಾಗಿಲು  ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಮುಳಬಾಗಿಲು ತಾಲೂಕಿನ ಎಲ್ಲಾ ಸಹಕಾರ ಸಂಘಗಳ ಸಂಯುಕ್ತಾಶ್ರಯಲ್ಲಿ ಏರ್ಪಡಿಸಲಾಗಿದ್ದ 67ನೇ ಅಖೀಲ ಭಾರತ ಸಹಕಾರ ಸಪ್ತಾಹ-2020 ಕಾರ್ಯಕ್ರಮ ಉದ್ಘಾಟಿಸಿ

ಮಾತನಾಡಿದರು. ಈ ಬಾರಿಯ67ನೇ ಅಖೀಲ ಭಾರತ ಸಹಕಾರ ಸಪ್ತಾಹ ದುಗುಡ, ಆತಂಕ, ನಿರಾಸೆಯ ಕಾರ್ಮೋಡಗಳ ಹಿನ್ನೆಲೆ ಯಲ್ಲಿ ಆಚರಿಸಲ್ಪಡುತ್ತಿದೆ. ಕಳೆದ 8 ತಿಂಗಳುಗಳಿಂದ ವಿಶ್ವದಾದ್ಯಂತ ಹಬ್ಬಿರುವ ಕೋವಿಡ್ ಸೋಂಕು ಮಾನವ ಜನಾಂಗವನ್ನೇ ಕಾಡುತ್ತಿದೆ. ಸೋಂಕಿನ ನೋವು, ಅರ್ಥ ವ್ಯವಸ್ಥೆಯ ಹಿನ್ನಡೆಯಲ್ಲಿ ಬದುಕು ಜರ್ಜರಿತವಾಗಿದೆ. ಇದರ ಜೊತೆಗೆ 2-3 ತಿಂಗಳಿನಿಂದ ರಾಜ್ಯದ ಕೆಲವು ಜಿಲ್ಲೆಗಳುಭೀಕರ ಪ್ರವಾಹದಿಂದಜಲಾವೃತವಾಗಿವೆ. ಸಾವು ನೋವುಗಳು ತಲ್ಲಣಗೊಳಿಸಿವೆ. ಆದರೂ ಜೀವನರಥ ಸಾಗಬೇಕಲ್ಲವೆ?ಕುಂಟುತ್ತಾ ಎಡವುತ್ತಾ ಸಾಗುತ್ತಿದೆ.

ಇದರ ಜೊತೆಯಲ್ಲಿ 67ನೇ ಅಖೀಲ ಭಾರತ ಸಹಕಾರ ಸಪ್ತಾಹಆಚರಣೆಪ್ರತಿವರ್ಷದಂತೆಈವರ್ಷವೂನ.14ರಿಂದ 20ರವರೆಗೆ ರಾಜ್ಯದಾದ್ಯಂತ ನಡೆಯಲಿದೆ. ಈ ಬಾರಿಯ ಸಪ್ತಾಹದಾಚರಣೆ ಸರಳವಾಗಿರಲಿದೆ ಆದರೂ ಅರ್ಥಪೂರ್ಣವಾಗಿರಲಿದೆ ಎಂದರು.

ಸಹಕಾರ ಸಪ್ತಾಹದ ಆಚರಣೆ ನ.14 ರಂದು ಆರಂಭವಾಗುತ್ತದೆ. ಇದೊಂದು ವಿಶೇಷ ಎನಿಸಿದೆ. ನವೆಂಬರ್‌ 14, ಭಾರತದ ಪ್ರಥಮ ಪ್ರಧಾನಿ ಪಂಡಿತ್‌ ಜವಹರಲಾಲ್‌ ನೆಹರು ಅವರ ಹುಟ್ಟು ಹಬ್ಬ, ಭಾರತದ ಸಹಕಾರ ವ್ಯವಸ್ಥೆಯ ಬೆಳವಣಿಗೆಗೆ ವಿಶೇಷ ಪ್ರೋತ್ಸಾಹ, ಸ್ಫೂರ್ತಿ ನೀಡಿದ ನೆಹರೂ ಅವರನ್ನು ಸ್ಮರಿಸಿಕೊಂಡು ಅವರಿಗೆ ಕೃತಜ್ಞತೆ ಅರ್ಪಿಸಲು ಅವರ ಹುಟ್ಟು ಹಬ್ಬದಂದು ಸಪ್ತಾಹದ ಆಚರಣೆಗೆ ಚಾಲನೆ ನೀಡಲಾಗುತ್ತದೆ ಎಂದರು.

Advertisement

ಮುಳಬಾಗಿಲು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿ.ಅಧ್ಯಕ್ಷ ಆಲಂಗೂರು ಆರ್‌.ಶಿವಶಂಕರ್‌, ಕೋಲಾರ ಜಿಲ್ಲಾ ಸಹಕಾರ ಒಕ್ಕೂಟ ನಿ.ನಿರ್ದೇಶಕ ವಿ.ರಘುಪತಿರೆಡ್ಡಿ, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಉಪಕಚೇರಿ ಉಪವ್ಯವಸ್ಥಾಪಕ ಶ್ರೀಧರಮೂರ್ತಿ, ಕೋಲಾರ ಜಿಲ್ಲಾ ಸಹಕಾರ ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕಿ ಆರ್‌.ಅರುಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next