ದೇವನಹಳ್ಳಿ: ಸರ್ಕಾರ ಲಾಕ್‌ಡೌನ್ ಸಡಿಲಗೊಳಿಸಿ ಬಸ್‌ಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ಪ್ರಯಾಣಿಕರು ಉತ್ಸಾಹ ದಿಂದ ಪ್ರಯಾಣಿಸಲು ಮುಂದಾದರು. ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ಬಸ್ ಡಿಪೋ ವ್ಯಾಪ್ತಿಗೆ 5 ಡಿಪೋ ಬರುವುದರಿಂದ ಅದರಲ್ಲಿ 67 ಬಸ್ ಸಂಚರಿಸಿವೆ. ಅದರಲ್ಲಿ ಚಿಕ್ಕಬಳ್ಳಾಪುರದಿಂದ ಬೆಂಗಳೂರು ನಗರಕ್ಕೆ 47 ಬಸ್ ಹಾಗೂ ದೊಡ್ಡಬಳ್ಳಾಪುರಕ್ಕೆ 7 ಬಸ್, ತುಮಕೂರು ನಗರಕ್ಕೆ 1 ಬಸ್ ಸಂಚರಿಸಿವೆ.
ಮಂಗಳವಾರ ಬೆಳಗ್ಗೆ 7 ಗಂಟೆಯಿಂದ 9.30ರ ವರೆಗೆ ಬಸ್ ನಿಲ್ದಾಣಗಳಲ್ಲಿ ಹೆಚ್ಚಿನ ಪ್ರಯಾಣಿಕರು ಸಂಚರಿಸಿದರು. 9.30ರ ನಂತರ ಪ್ರಯಾಣಿಕರ ಸಂಖ್ಯೆ ತೀರ ಇಳಿಕೆ ಕಂಡುಬಂದಿದೆ. ಎಲ್ಲಾ ಬಸ್‌ಗೆ ಸ್ಯಾನಿಟೈಸರ್ , ಸಾಮಾಜಿಕ ಅಂತರ ಕಾಯ್ದುಕೊ ಳ್ಳಲು ಪೇಂಟ್ ಮೂಲಕ ಮಾರ್ಕಿಂಗ್ ಮಾಡಲಾಗಿದೆ. ಎಲ್ಲಾ ಚಾಲಕರು ಮತ್ತು ನಿರ್ವಾಹಕರ ಕೈಗೆ ಗ್ಲೌಸ್ ಮತ್ತು ಮಾಸ್ಕ್ ಧರಿಸಲು ಇಲಾಖೆಯಿಂದ ಸೂಚಿಸಿದ್ದು, ಥರ್ಮಾ ಮೀಟರ್ ಬಳಸಿ ಪ್ರಯಾಣಿಕರ ತಪಾಸಣೆಗೊಳಿಸಿ ಬಸ್ ಹತ್ತಿಸಲಾಗುತ್ತಿದೆ.
ಇನ್ನು ಪ್ರಯಾಣಿಕರ ಸಂಪೂರ್ಣ ಮಾಹಿತಿ ಯನ್ನು ನಿರ್ವಾಹಕರು ಬರೆದುಕೊಳ್ಳುವಂತೆ ಆದೇಶಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹೇಳುತ್ತಾರೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಿಗೆ ಬರುವ ಪ್ರಯಾ ಣಿಕರನ್ನು ಲಾಕ್‌ಡೌನ್ ಮುಗಿದ ನಂತರ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿರುವುದರಿಂದ ಪ್ರತಿ ಪ್ರಯಾಣಿಕರನ್ನು ಸ್ವಾಗತಿಸಿ ಅವರಿಗೆ ಕೊರೊನಾ ಸಂಬಂಧಿಸಿದಂತೆ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ.
ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣ ಇಲ್ಲದಿರುವುದರಿಂದ ಬಸ್ ಸಂಚಾರ, ಟ್ಯಾಕ್ಸಿ, ಆಟೋ ಸಂಚಾರ ಪ್ರಾರಂಭಗೊಂಡಿದೆ. ದೇವನಹಳ್ಳಿ ನಗರದಿಂದ ಬೆಂಗಳೂರು ನಗರಕ್ಕೆ ಬಿಎಂಟಿಸಿ ಸ್ ಪ್ರಾರಂಭಿಸಿದೆ. ಬಸ್ ಸಂಚಾರ ಪ್ರಾರಂಭಗೊಂಡ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ನಗರದ ಬಸ್‌ಸ್ಟಾಪ್‌ನಲ್ಲಿ ಕಾದು ಕುಳಿತು ಬಸ್ ಬರುತ್ತಿದ್ದಂತೆ ಬಿಎಂಟಿಸಿ ಬಸ್‌ಗೆ ಮುಗಿಬಿದ್ದರು. ಒಂದು ಬಸ್‌ಗೆ 30 ಜನ ಅವಕಾಶ ವಿದ್ದು, ಹೆಚ್ಚುವರಿ ಪ್ರಯಾಣಿಕರು ಬಸ್ ಹತ್ತಿದ್ದು, ಅಂತಹವ ರನ್ನು ಬಸ್ ನಿರ್ವಾಹಕರು ಕೆಳಗೆ ಇಳಿಸಿದರು.
ಇನ್ನು ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಮಾಸ್ಕ್ ಇಲ್ಲದಿದ್ದರೆ ಅಂತಹವರನ್ನು ಕೆಳಗೆ ಇಳಿಯುವಂತೆ ಒತ್ತಾಯ ಮಾಡುತ್ತಿದ್ದ ದೃಶ್ಯ ಕಂಡುಬಂದವು. ಪ್ರಯಾಣಿಕರಿಗೆ ಸ್ಯಾನಿಟೈಸರ್ ನೀಡಿ ಸುರಕ್ಷತೆ ಅನುಸರಿಸುವ ಜೊತೆಗೆ ಬಿಎಂಟಿಸಿ ಬಸ್‌ಗಳಲ್ಲಿ ಟಿಕೆಟ್ ನೀಡುವ ವ್ಯವಸ್ಥೆ ರದ್ದುಗೊಳಿಸಿ, ದಿನ ಹಾಗೂ ತಿಂಗಳ ಪಾಸ್‌ಗಳನ್ನು ಪ್ರಯಾಣಿಕರಿಗೆ ವಿತರಿಸಲಾಗುತ್ತಿದೆ. ಪ್ರಯಾಣಿ ಕರ ಆರೋಗ್ಯದ ದೃಷ್ಟಿಯಿಂದ ಥರ್ಮಲ್ ಪರೀಕ್ಷೆ ಮಾಡುವಂತೆ ಸರ್ಕಾರದ ಆದೇಶವಿದೆ. ಆದರೆ ಥರ್ಮಲ್ ಉಪಕರಣ ವಿಲ್ಲದೆ. ಬಸ್‌ಗೆ ಹಾಗೆಯೇ ಹತ್ತಿಸಿಕೊಳ್ಳಲಾಗುತ್ತಿತ್ತು.
ಸರ್ಕಾರದ ಆದೇಶದಂತೆ, ಕೆಎಸ್‌ಆರ್‌ಟಿಸಿ ಬಸ್ ಚಿಕ್ಕಬಳ್ಳಾಪುರ ಡಿಪೋದಿಂದ ಇತರೆ ಕಡೆಗೆ ಹೋಗಲು ಕ್ರಮ ಕೈಗೊಳ್ಳಲಾಗಿದೆ. ಒಂದು ಬಸ್‌ಗೆ 30 ಪ್ರಯಾಣಿಕರನ್ನು ಮಾತ್ರ ಕರೆದೊಯ್ಯುವಂತೆ ಮಾಡಲಾಗಿದೆ. ಯಾವುದೇ ಆರೋಗ್ಯ ಸಮಸ್ಯೆ ಆಗದಂತೆ ಎಚ್ಚರ ವಹಿಸಲಾಗಿದೆ.
-ಬಸವರಾಜ್, ಕೆಎಸ್‌ಆರ್‌ಟಿಸಿ ಬಸ್ ಡಿಪೋ ಡೀಸಿ, ಚಿಕ್ಕಬಳ್ಳಾಪುರ
* ಎಸ್.ಮಹೇಶ್