Advertisement

66709 ಮಕ್ಕಳಿಗೆ ಪೋಲಿಯೋ ಲಸಿಕೆ

03:30 PM Jan 30, 2021 | Team Udayavani |

ಜಮಖಂಡಿ: ಎರಡು ತಾಲೂಕಿನ 96806 ಮನೆಗಳಿಗೆ ತೆರಳಿ ಒಂದು ವರ್ಷದಿಂದ 5 ವರ್ಷದ ಒಳಗಿನ ಒಟ್ಟು 66709 ಮಕ್ಕಳಿಗೆ ಪೋಲಿಯೋ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಉಪವಿಭಾಗಾ ಧಿಕಾರಿ ಡಾ| ಸಿದ್ದು ಹುಲ್ಲೊಳ್ಳಿ ಹೇಳಿದರು. ನಗರದ ಮಿನಿ ವಿಧಾನಸೌಧದ ಉಪವಿಭಾಗಾಧಿಕಾರಿ ಕಚೇರಿ ಸಭಾಭವನದಲ್ಲಿ ಶುಕ್ರವಾರ ರಾಷ್ಟ್ರೀಯಪಲ್ಸ್‌ ಪೋಲಿಯೋ ಲಸಿಕಾ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಪ್ರಚಾರ ಸಾಮಗ್ರಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

Advertisement

ಶಿಕ್ಷಣ ಇಲಾಖೆ, ಜಮಖಂಡಿ, ತೇರದಾಳ, ರಬಕವಿ-ಬನಹಟ್ಟಿ ನಗರಸಭೆ, ಸಾರಿಗೆ ಇಲಾಖೆ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು, ಹೆಸ್ಕಾಂ, ಆರೋಗ್ಯಇಲಾಖೆ ಸಹಿತ ವಿವಿಧ ಇಲಾಖೆಗಳಿಗೆ ನೀಡಲಾಗಿರುವ ನಿರ್ದೇಶನದ ಆದೇಶಗಳನ್ನುಕಡ್ಡಾಯವಾಗಿ ಪಾಲಿಸುವ ಮೂಲಕ ಪೋಲಿಯೋ ಲಸಿಕೆ ವಿತರಣೆ ಯಶಸ್ವಿಗೊಳಿಸಬೇಕು. 205 ವಾರ್ಡ್‌  ಗಳನ್ನು ಹೈರಿಸ್ಕ್ ಗುರುತಿಸಲಾಗಿದೆ. ನಗರಪ್ರದೇಶದಲ್ಲಿ 31 ವಾರ್ಡ್‌ಗಳಲ್ಲಿ ನಗರಸಭೆ ಸದಸ್ಯರು ಚಾಲನೆ ನೀಡಲು ಪೌರಾಯುಕ್ತ ನಿರ್ದೇಶನ ನೀಡಿದರು.

ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ| ಗೈಬುಸಾಬ ಗಲಗಲಿ ಮಾತನಾಡಿ, ಕೋವಿಡ್ ಸೋಂಕಿತ ವ್ಯಕ್ತಿಗಳ ಮನೆಗಳನ್ನು ಸೂಚನೆ ನೀಡಲಾಗಿದೆ. ಮಕ್ಕಳ ಪಾಲಕರು, ಪೋಷಕರು ಮನೆಯಿಂದ ಹೊರಗಡೆ ಬಂದುಲಸಿಕೆ ಹಾಕಿಸಿಕೊಳ್ಳಬೇಕು. ಮಕ್ಕಳ ಬಾಯಿಯನ್ನು  ಕೂಡ ಪಾಲಕರೇ ತೆರೆ‌ಯಲು ಅಂಗನವಾಡಿ-ಆಶಾ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ ಎಂದರು.

ಇದನ್ನೂ ಓದಿ:ಸಂವಿಧಾನ ಭಾರತದ ತಾಯಿ ಬೇರು…

ನಾಡೋಜ ಪ್ರಶಸ್ತಿ ಪುರಸ್ಕೃತ ಹೃದಯರೋಗ ತಜ್  ಡಾ| ಎಚ್‌.ಡಿ.ದಡ್ಡಿ ಮಾತನಾಡಿದರು. ತಹಶೀಲ್ದಾರ್‌ ಎಸ್‌.ಬಿ.ಇಂಗಳೆ, ಹೆಸ್ಕಾಂ ಎಇಇ ಸಂಜು ಆಲಬಾಳ, ರಬಕವಿ-ಬನಹಟ್ಟಿ ತಾಪಂ. ಅ ಧಿಕಾರಿ ಸಂಜಯ ಹಿಪ್ಪರಗಿ, ಸಿಡಿಪಿಒ ಅನುರಾಧಾ ಹಾದಿಮನಿ, ರಾಮತೀರ್ಥರೋಟರಿ ಅಧ್ಯಕ್ಷ ಮಲ್ಲಪ್ಪ ಚಾಮೋಜಿ,ಸಾರಿಗೆ ಅ ಧಿಕಾರಿ ಬಿ.ಕೆ.ಮಲಾಬದಿ, ಎಂ.ಎಂ.ಮುಗಳಖೋಡ, ರೋಟರಿ  ಅಧ್ಯಕ್ಷ ಡಾ| ಎ.ಆರ್‌.ದೇವರಡ್ಡಿ, ಸಂಜಯಕುಮಾರ, ಮಂಜುನಾಥ ಹಡಪದ, ಬಿ.ವಿ. ಪಾಟೀಲ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next