Advertisement
ಮೇ 17ರಂದು ದೇಶದಲ್ಲಿ 4,987 ಪ್ರಕರಣ ದೃಢಪಟ್ಟರೆ, 18ರಂದು 5,242, 20ರಂದು 5,611, 22ರಂದು 6,088 ಹಾಗೂ 23ರಂದು 6,654 ಮಂದಿಗೆ ಸೋಂಕು ತಗುಲಿದೆ. ಹೀಗೆ, ಮೇ 19 (4,970) ಮತ್ತು 21 (5,609) ಹೊರತುಪಡಿಸಿದರೆ ಉಳಿದ 5 ದಿನಗಳಲ್ಲಿ ಪ್ರತಿದಿನದ ಸೋಂಕಿತರ ಸಂಖ್ಯೆಯಲ್ಲಿ ದಾಖಲೆ ಸೃಷ್ಟಿಯಾಗಿದೆ. ಮಹಾರಾಷ್ಟ್ರವೊಂದರಲ್ಲೇ ಶುಕ್ರವಾರ ಬೆಳಗ್ಗೆ 8ರಿಂದ ಶನಿವಾರ ಬೆಳಗ್ಗೆ 8ರವರೆಗೆ 6,654 ಮಂದಿಗೆ ಸೋಂಕು ದೃಢಪಟ್ಟಿದೆ. ಇನ್ನು ತಮಿಳುನಾಡಿನಲ್ಲೂ ಸೋಂಕು ವ್ಯಾಪಕವಾಗಿ ಹಬ್ಬುತ್ತಿದ್ದು, ಒಂದೇ ದಿನ 5 ಮಂದಿ ಮೃತಪಟ್ಟು, 710 ಹೊಸ ಪ್ರಕರಣ ಪತ್ತೆಯಾಗಿದೆ.
Advertisement
ಒಂದೇ ದಿನ 6,654 ಕೇಸ್; ದೇಶದಲ್ಲಿ ಸೋಂಕಿತರ ಹೊಸ ದಾಖಲೆ ಸೃಷ್ಟಿ
12:04 AM May 24, 2020 | Sriram |
Advertisement
Udayavani is now on Telegram. Click here to join our channel and stay updated with the latest news.