Advertisement

ಕನ್ನಡ ನಾಡಿನ ಹಿರಿಮೆ ಅಪಾರ: ಮುರಾರ್ಜಿ

07:27 PM Nov 02, 2020 | Suhan S |

ಮೊಳಕಾಲ್ಮೂರು: ಕರ್ನಾಟಕದ ಸಮಸ್ತ ಕನ್ನಡದ ಮನಸ್ಸುಗಳನ್ನು ಏಕೀಕರಣದ ಚಳವಳಿಗೆ ಧುಮಕಲು ಹೋರಾಟಗಾರರು, ಸಾಹಿತಿಗಳು ಹಾಗೂ ಹಲವಾರು ಮಹನೀಯರು ಪ್ರೇರಣೆಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಅಧ್ಯಕ್ಷ ಡಿ.ಒ. ಮುರಾರ್ಜಿ ಮಾತನಾಡಿದರು.

Advertisement

ಪಟ್ಟಣದ ಕನ್ನಡ ಭವನದ ಆವರಣದಲ್ಲಿ ಕನ್ನಡಸಾಹಿತ್ಯ ಪರಿಷತ್‌ ಹಾಗೂ ಕನ್ನಡ ರಕ್ಷಣಾ ವೇದಿಕೆಯಸಹಯೋಗದೊಂದಿಗೆ ಹಮ್ಮಿಕೊಂಡಿದ್ದ 65ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಹಲವಾರು ದಾರ್ಶನಿಕರು, ಸಾಹಿತಿಗಳು, ಸಂತರು, ಕವಿಗಳು, ಕಲಾವಿದರು ಸೇರಿದಂತೆ ಮೊದಲಾದವರು ಕನ್ನಡ ಭಾಷೆಯ ಸಂಸ್ಕೃತಿ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿ ನಾಡಿನ ಕನ್ನಡ ಭಾಷೆಯನ್ನು ಉತ್ತುಂಗ ಶಿಖರಕ್ಕೆ ಕೊಂಡೊಯ್ದಿದ್ದಾರೆ. ರಾಷ್ಟ್ರ ಕವಿ ಕುವೆಂಪುರವರು ಕನ್ನಡ ನಾಡಿಗೆ ನಾಡಗೀತೆ ರಚನೆಯಲ್ಲಿ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಇಲ್ಲಿ ಎಲ್ಲಾ ಧರ್ಮಗಳು, ಜಾತಿಗಳ ಸಮುದಾಯಗಳು ಸಹೋರತ್ವ ಭಾವನೆಯಿಂದ ಭಾಳುತ್ತಿದ್ದಾರೆಂದು ಬಣ್ಣಿಸಿದ್ದಾರೆ. ಕನ್ನಡಾಂಬೆಯು ಭಾರತ ಮಾತೆಗೆ ಹಿರಿಯ ಮಗಳಾಗಿ ಮೇರು ಶಿಖರಕ್ಕೇರಲಾಗಿದೆ.

ಕರ್ನಾಟಕದ 8 ಜನ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿ ಪಡೆದು ನಾಡಿಗೆ ಕೀರ್ತಿ ಗಳಿಸಿದ್ದಾರೆ. ಅಲ್ಲಲ್ಲಿ ಪ್ರತ್ಯೇಕತೆಯ ಕೂಗು ಕೇಳಿ ಬಂದರೂ ಅಖಂಡ ಕರ್ನಾಟಕದೊಂದಿಗೆ ಮುಂದುವರೆಯಲಿದೆ. ಮಾತೃಭಾಷೆಯಾದ ಕನ್ನಡವನ್ನು ಆಡಳಿತ ಭಾಷೆಯಾಗಿ ಕನ್ನಡವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿ ಕನ್ನಡ ಭಾಷೆ, ಕಲೆ ಸಾಹಿತ್ಯ, ಸಂಸ್ಕೃತಿಯನ್ನು ರಕ್ಷಿಸಿ ಉಳಿಸಿ ಬೆಳೆಸಬೇಕೆಂದರು.ಕಸಾಪ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಎಂ.ಡಿ.  ಲತೀಪ್‌ ಸಾಬ್‌ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಪಂ ಸದಸ್ಯೆ ಶುಭಾ ಡಿಶ್‌ ರಾಜ್‌, ಕರವೇ ಅದ್ಯಕ್ಷ ಸೂರಮ್ಮನಹಳ್ಳಿ ನಾಗರಾಜ್‌, ಕಸಾಪ ಕೋಶಾಧ್ಯಕ್ಷ ಕೆ. ಶಾಂತವೀರಣ್ಣ, ತಾಲೂಕು ಪ್ರಧಾನ ಕಾರ್ಯದರ್ಶಿ ನೀಲರಾಜ್‌, ಸದಸ್ಯರಾದ ವನಿತಾ ಗಿರೀಶ್‌, ಸಂಗೀತ ಶಿಕ್ಷಕಿ ಸ್ನೇಹಾ ರಾಘವೇಂದ್ರ, ಭರತನಾಟ್ಯ ಕಲಾವಿದೆ ಜ್ಯೋತಿ ನಾಗೇಶ್‌, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸರ್ವಮಂಗಳ ಮೊದಲಾದವರ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next