Advertisement
ಡಿ.5ರಂದು ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಕಾಳುಮೆಣಸು ಧಾರಣೆ ಕೆ.ಜಿ.ಗೆ 640 ರೂ. ಇದ್ದರೆ, ಹೊರ ಮಾರುಕಟ್ಟೆಯಲ್ಲಿ 650 ರೂ. ತನಕ ಬೇಡಿಕೆ ಇತ್ತು. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ನ.25ರಂದು 610 ರೂ., ನ.26ಕ್ಕೆ 615 ರೂ., ನ.30ರಂದು 620 ರೂ., ಡಿ.3ರಂದು 625 ರೂ., ಡಿ.4ರಂದು 630 ರೂ., ಡಿ.5ರಂದು 640 ರೂ.ಗೆ ತಲುಪಿತು. ಕಳೆದ ಮೂರು ದಿನಗಳಿಂದ ಧಾರಣೆ ಏರಿಕೆಯತ್ತ ಸಾಗುತ್ತಿದೆ.
ನಿರಾಶದಾಯಕ ಪ್ರದರ್ಶನ ನೀಡುತ್ತಿದ್ದ ರಬ್ಬರ್ ಧಾರಣೆ ಕೊಂಚ ಏರಿಕೆ ಕಂಡಿದೆ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಡಿ.5ರಂದು ರಬ್ಬರ್ ಗ್ರೇಡ್‌ಗೆ 195 ರೂ., ಸ್ಕ್ಯಾಪ್‌ಗೆ 128 ರೂ. ದಾಖಲಾಗಿತ್ತು. ನ.27ರಂದು ಕ್ಯಾಂಪ್ಕೋದಲ್ಲಿ ರಬ್ಬರ್ ಗ್ರೇಡ್‌ಗೆ 186 ರೂ., ಸ್ಕ್ಯಾಪ್‌ಗೆ 121 ರೂ. ಧಾರಣೆ ಇತ್ತು. ಸಿಂಗಲ್ ಚೋಲ್‌ಗೆ ಮತ್ತಷ್ಟು ಬೇಡಿಕೆ
ಅಡಿಕೆ ಹೊರ ಮಾರುಕಟ್ಟೆಯಲ್ಲಿ ಸಿಂಗಲ್ ಚೋಲ್‌ಗೆ ಮತ್ತಷ್ಟು ಬೇಡಿಕೆ ಬಂದಿದೆ.ಸಿಂಗಲ್ ಚೋಲ್ ಇದ್ದರೆ ತನ್ನಿ ಎಂದು ವ್ಯಾಪಾರಿಗಳು ದುಂಬಾಲು ಬೀಳುತ್ತಿರುವುದು ಕಂಡು ಬಂದಿದೆ. ಅಂದರೆ ಸಿಂಗಲ್ ಚೋಲ್ ಧಾರಣೆ ಸದ್ಯದಲ್ಲೇ 475 ರೂ. ಗಡಿ ದಾಟುವ ಸಾಧ್ಯತೆ ಇದೆ ಎನ್ನುತ್ತಿವೆ ಮಾರುಕಟ್ಟೆ ಮೂಲಗಳು. ಡಿ.5ರಂದು ಹೊರ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 458 ರೂ. ತನಕ ಖರೀದಿಯಾಗಿದೆ. ಹೊಸ ಅಡಿಕೆ ಸ್ಥಿರವಾಗಿದ್ದರೆ, ಡಬ್ಬಲ್ ಚೋಲ್ ಧಾರಣೆ 500 ರೂ.ಗೆ ಇಳಿದಿದೆ. ತೆಂಗಿನ ಕಾಯಿ ಧಾರಣೆ ಕೆ.ಜಿ.ಗೆ 47 ರೂ. ಇದ್ದರೆ, ಕೊಬ್ಬರಿ-1ಕ್ಕೆ 140 ರೂಪಾಯಿ ಧಾರಣೆ ಇತ್ತು.
Related Articles
Advertisement