Advertisement

64,371 ಮಂದಿಗೆ ಅಡುಗೆ ಅನಿಲ ಸಂಪರ್ಕ

11:14 AM Jan 03, 2019 | |

ಮಂಡ್ಯ: ಬಡ ಮಹಿಳೆಯರ ಆರೋಗ್ಯ ಕಾಪಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಉಜ್ವಲ ಯೋಜನೆಯನ್ನು ಜಾರಿಗೊಳಿಸಿದ್ದು, ದೇಶಾದ್ಯಂತ 3 ಕೋಟಿ ಅಡುಗೆ ಅನಿಲ ಸಂಪರ್ಕ ಗುರಿ ಹೊಂದಲಾಗಿದೆ. ಅದರಂತೆ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 64,371 ಮಂದಿ ಬಿಪಿಎಲ್‌ ಫಲಾನು ಭವಿಗಳಿಗೆ ಅಡುಗೆ ಅನಿಲ ಸಂಪರ್ಕವನ್ನು ಒದಗಿಸಲಾಗಿದೆ.

Advertisement

ಜಿಲ್ಲೆಯಲ್ಲಿ ಎಚ್‌ಪಿಸಿಎಲ್‌ ಕಂಪನಿ ಕಳೆದ ಡಿಸೆಂಬರ್‌ ಅಂತ್ಯದವರೆಗೆ 1.57 ಕೋಟಿ ಸಂಪರ್ಕವನ್ನು ನೀಡಲಾಗಿದ್ದು, ಈ ಪೈಕಿ ಪ್ರಸಕ್ತ ಸಾಲಿನಲ್ಲೇ 64,371 ಹೊಸ ಸಂಪರ್ಕಗಳನ್ನು ನೀಡಲಾಗಿದೆ. ಐಒಸಿ ಕಂಪನಿ ವತಿಯಿಂದ 18,459, ಬಿಪಿಸಿ ವತಿಯಿಂದ 14,163 ಹಾಗೂ ಎಚ್‌ಪಿಸಿ ವತಿಯಿಂದ 31,749 ಅಡುಗೆ ಅನಿಲ ಸಂಪರ್ಕವನ್ನು ನೀಡಲಾಗಿದೆ. ಕಳೆದ ವರ್ಷ ಪ್ರಧಾನ ಮಂತ್ರಿ ಉಜ್ವಲ
ಯೋಜನೆಯಡಿ ಎಸ್ಸಿ, ಎಸ್ಟಿ ಫಲಾನು ಭವಿಗಳಿಗೂ ಸಂಪರ್ಕ ಕೊಡಲಾಗಿದೆ.

ಪ್ರತಿ ಬಡ ಕುಟುಂಬಕ್ಕೆ ಎರಡನೇ ಹಂತದಲ್ಲಿ ಗ್ಯಾಸ್‌ ಸಂಪರ್ಕವನ್ನು ನೀಡಲಿದ್ದು, ಅದರಲ್ಲಿ ಸಾಮಾಜಿಕ, ಆರ್ಥಿಕತೆ ಯಿಂದ ಹೊರಗುಳಿದ ಎಲ್ಲಾ ಬಿಪಿಎಲ್‌ ಕುಟುಂಬಗಳೂ ಸೇರಿವೆ. ಈ ಯೋಜನೆಯನ್ನು ಪಡೆಯಲು ಬಿಪಿಎಲ್‌ ಸದಸ್ಯರು ತಮ್ಮ ಪಡಿತರ ಚೀಟಿ, ಆಧಾರ್‌ಕಾರ್ಡ್‌, ಜಾತಿ ಪ್ರಮಾಣ ಪತ್ರ, ಬ್ಯಾಂಕ್‌ ಖಾತೆ ಜೆರಾಕ್ಸ್‌, 2 ಫೋಟೋಗಳನ್ನು ನೀಡಿ ಸಂಪರ್ಕ ಪಡೆಯಬಹುದೆಂದು ಪ್ರಕಾಶ್‌ ಎಂಟರ್‌ಪ್ರೈಸಸ್‌ ಪ್ರಕಟಣೆ ತಿಳಿಸಿದೆ.

ಈ ಯೋಜನೆ ಬಡ ಗ್ರಾಮೀಣ ಕುಟುಂಬಗಳನ್ನೂ ತಲುಪಲಿದ್ದು, 2016ರ ಏ.1ರಲ್ಲಿ ಶೇ.62 ಇದ್ದ ಸಂಪರ್ಕ, 2018ರ ಡಿ.1ರಲ್ಲಿ 89.5ರಷ್ಟು ಕುಟುಂಬಗಳಿಗೆ ಗ್ಯಾಸ್‌ ಸಂಪರ್ಕ ನೀಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 4,35,985 ಸಂಪರ್ಕವನ್ನು ನೀಡಲಾಗಿದ್ದು, ಇದು ಶೇ.98.75 ರಷ್ಟಿದ್ದು, ಹಿಂದಿನ ಸಂಪರ್ಕ ಅಂದರೆ 2016ರಲ್ಲಿ 3,24,780 ಮಂದಿಗೆ ಗ್ಯಾಸ್‌ ಸಂಪರ್ಕ ನೀಡಲಾಗಿತ್ತು.

ಪ್ರತಿ ಬಡ ಗ್ರಾಮೀಣ ಕುಟುಂಬಗಳ ಮನೆಯವರು ಪ್ರಯೋಜನ ಪಡೆಯ ಬಹುದಾಗಿದ್ದು, ಹೊಗೆ ಮುಕ್ತ ಪರಿಸರ
ವನ್ನು ನಿರ್ಮಿಸುವುದು, ಮಹಿಳೆಯರ ಆರೋಗ್ಯ ಕಾಪಾಡುವುದು, ಇಂಗಾಲ ಆಮ್ಲ, ಕಾರ್ಬನ್‌ ಹೊರಸೂಸುವಿಕೆ ಯನ್ನು ತಡೆಯುವುದು, (ಕಟ್ಟಿಗೆ ಹಾಗೂ ಸೀಮೆಎಣ್ಣೆಯಿಂದ) ಕಾಡನ್ನು ಸಂರಕ್ಷಿಸುವ ಉದ್ದೇಶ ಹೊಂದಿದ್ದು, ಇಂತಹ ಮಹತ್ವಾಕಾಂಕ್ಷೆಯ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು 2016ರ ಮೇ 1ರಂದು ಚಾಲನೆ ನೀಡಿದರು ಎಂದು ಪ್ರಕಾಶ್‌ ಎಂಟರ್‌ಪ್ರೈಸಸನ್‌
ಎಡಿಸನ್‌ ಓಸ್ವಾಲ್ಡ್‌ (ಸನ್ನಿ) ತಿಳಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next