Advertisement

ಭಾರತ-ಚೀನಾ ಗಡಿಯಲ್ಲಿ ಪ್ರಬಲ ಭೂಕಂಪ : 6.4 ತೀವ್ರತೆ 

08:50 AM Nov 18, 2017 | Team Udayavani |

ಹೊಸದಿಲ್ಲಿ: ಭಾರತ ಚೀನಾ ಗಡಿ ಭಾಗದಲ್ಲಿ ಶನಿವಾರ ನಸುಕಿನ 4 ಗಂಟೆಯ ವೇಳೆ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 6.4 ತೀವ್ರತೆ ದಾಖಲಾಗಿತ್ತು ಎಂದು ಚೀನಾದ ಕ್ಸಿನುವಾ ನ್ಯೂಸ್‌ ವರದಿ ಮಾಡಿದೆ.

Advertisement

ಅರುಣಾಚಲ ಪ್ರದೇಶದಲ್ಲಿ ಕಂಪನದ ಅನುಭವವಾಗಿದ್ದು, 2 ಬಾರಿ ಭೂಮಿ ಕಂಪಿಸಿದೆ ಎಂದು ಹೇಳಲಾಗಿದೆ. ಇದುವರೆಗೆ ಯಾವುದೇ ಹಾನಿಯ ಬಗ್ಗೆ ವರದಿಯಾಗಿಲ್ಲ.

ಭೂಕಂಪನದ ಕೇಂದ್ರ ಬಿಂದು ಟಿಬೇಟ್‌ನ ನ್ಯಿಂಗ್‌ಚಿ ಪ್ರಾಂತ್ಯದಲ್ಲಿ ಕೇಂದ್ರೀಕೃತವಾಗಿತ್ತು ಎಂದು ಭೂಗರ್ಭ ಶಾಸ್ತ್ರಜ್ಞರು ತಿಳಿಸಿದ್ದಾರೆ.

ಇರಾನ್‌ನಲ್ಲಿ ಮಂಗಳವಾರ 7.3 ತೀವ್ರತೆಯ ಭೂಕಂಪ ಸಂಭವಿಸಿ 530 ಮಂದಿ ಸಾವನ್ನಪ್ಪಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next