Advertisement

ದೇಶದಲ್ಲಿದ್ದಾರೆ ಶೇ.63 ಧೂಮಪಾನಿಗಳು

03:45 AM Apr 07, 2017 | Team Udayavani |

ನವದೆಹಲಿ: ಧೂಮಪಾನದಿಂದ ಸಾವು ಸಂಭವಿಸುತ್ತದೆ! ಆದರೆ ಇಡೀ ಜಗತ್ತಿನಲ್ಲಿ ಸಾಯುವ 10 ಮಂದಿ ಪೈಕಿ ಒಬ್ಬನ ಸಾವು ಧೂಮಪಾನದಿಂದಲೇ ಸಂಭವಿಸುತ್ತದೆ ಎಂದರೆ ನೀವು ನಂಬಬೇಕು. ಅಂದರೆ ಒಟ್ಟಾರೆ ಜಾಗತಿಕ ಸಾವಿನ ಲೆಕ್ಕದಲ್ಲಿ ಶೇ.10ರಷ್ಟು ಮಂದಿ ಹೊಗೆ ಸೇದಿಯೇ ಹೊಗೆ ಹಾಕಿಕೊಳ್ಳು ತ್ತಾರೆ ಎಂದರ್ಥ. ಅದರಲ್ಲೂ ತನ್ನ ಜನಸಂಖ್ಯೆ ಯಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ಧೂಮಪಾನಿ ಗಳನ್ನು ಹೊಂದಿರು ಭಾರತ, ಧೂಮಪಾನ ದಿಂದ ಅತಿ ಹೆಚ್ಚು ಮಂದಿ ಮೃತಪಡುವ ರಾಷ್ಟ್ರಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

Advertisement

ಒಂದು ಲೆಕ್ಕದ ಪ್ರಕಾರ ಜಗತ್ತಿನಲ್ಲಿ ನಿರ್ದಿಷ್ಟ ಕಾಲಮಿತಿಯೊಳಗೆ 64 ಲಕ್ಷ ಮಂದಿ ಮೃತಪಡುತ್ತಾರೆ. ಹೀಗೆ ಮೃತಪಡುವವರಲ್ಲಿ ಅರ್ಧದಷ್ಟು ಮಂದಿ ಭಾರತ, ಚೀನಾ, ಅಮೆ ರಿಕ ಮತ್ತು ರಷ್ಯಾದ ಪ್ರಜೆಗಳಾಗಿರು ತ್ತಾರೆ! ಅಂದರೆ ಈ ದೇಶಗಳಲ್ಲಿ ಮರಣ ಪ್ರಮಾಣ ಬೇರೆಲ್ಲ ದೇಶಗಳಿಗಿಂತಲೂ ಅಧಿಕವಾಗಿದೆ.ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇ.63 ಮಂದಿ ಧೂಮಪಾನಿಗಳಿದ್ದಾರೆ.  

ವಿಶ್ವ ಆರೋಗ್ಯ ಸಂಸ್ಥೆಯ 2005ರ ತಂಬಾಕು ನಿಯಂತ್ರಣ ಸಮಾವೇಶದಲ್ಲಿ ಕೈಗೊಂಡ ನಿರ್ಣಯಗಳ ಅನ್ವಯ ಭಾರತ ಸೇರಿದಂತೆ ಬಹುತೇಕ ರಾಷ್ಟ್ರ ಗಳು ತಂಬಾಕು ನಿಯಂತ್ರ ಣಕ್ಕೆ ಕಾನೂನುಗಳನ್ನು ಜಾರಿಗೊಳಿಸಿವೆ. ಆದರೂ ಭಾರತದಲ್ಲಿ ಪ್ರತಿ ನಿತ್ಯ 5500 ಯುವಕರು ತಂಬಾಕು ಚಟ ಕಲಿಯು ತ್ತಾರೆ! ಯುವ ಸಮುದಾಯದ ಶೇ.35 ಮಂದಿ ಯಾವುದಾದರೂ ರೀತಿಯಲ್ಲಿ ತಂಬಾಕು ಸೇವನೆ ಮಾಡುತ್ತಿದ್ದಾರೆ. ಪ್ರಸ್ತುತ ಭಾರತದಲ್ಲಿ ಶೇ.14ರಷ್ಟು ವಯಸ್ಕರು ಧೂಮಪಾನಿಗಳಾ ಗಿದ್ದು, ಇವರಲ್ಲಿ ಶೇ.23ರಷ್ಟು ಪುರುಷರು ಹಾಗೂ ಶೇ.2.9ರಷ್ಟು ಮಹಿಳೆಯರಿದ್ದಾರೆ ಎಂದು ಅಧ್ಯಯನವೊಂದರಲ್ಲಿ ತಿಳಿದುಬಂದಿದೆ.
 

Advertisement

Udayavani is now on Telegram. Click here to join our channel and stay updated with the latest news.

Next