ಮುಂಬಯಿ: ಧಾರಾವಿ, ಮಾಹಿಮ್ ಮತ್ತು ದಾದರ್‌ನಲ್ಲಿ ಮಂಗಳವಾರ ಕೋವಿಡ್ ವೈರಾಣು ಸೋಂಕಿತ ಒಟ್ಟು 63 ಹೊಸ ಪ್ರಕರಣಗಳು ಪತ್ತೆಯಾಗಿವೆ. ಹಾಗೆಯೆ ಕೋವಿಡ್ ಸೋಂಕಿನಿಂದ ಇಬ್ಬರೂ ಸಾವನ್ನಪ್ಪಿದ್ದಾರೆ. ವೈರಾಣು ಸೋಂಕಿತ ಹೊಸ ಪ್ರಕರಣಗಳಲ್ಲಿ ಧಾರಾವಿ ಪರಿಸರದಿಂದ 46, ಮಾಹಿಮ್ 6 ಮತ್ತು ದಾದರ್ ನಿಂದ 11 ಪ್ರಕರಣ ಪತ್ತೆಯಾಗಿವೆ. ಕೋವಿಡ್ ಸೋಂಕಿನಿಂದ ಧಾರಾವಿಯಲ್ಲಿ ಮತ್ತು ದಾದರ್‌ನಲ್ಲಿ ಪ್ರತ್ಯೇಕ ಓರ್ವ ಸಾವನ್ನಪ್ಪಿದ್ದಾರೆ.
ಮುಂಬಯಿ ನಗರದಲ್ಲಿ ಕೋವಿಡ್ ವೈರಾಣು ಸೋಂಕಿತ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಲಾರಂಭಿಸಿದೆ. ಅದರಲ್ಲೂ ಕೊಳೆಗೇರಿ ಪ್ರದೇಶವಾದ ಧಾರಾವಿಯಲ್ಲಿ ಇಂದು 46 ವೈರಾಣು ಸೋಂಕಿತರು ಪತ್ತೆಯಾಗುವ ಜತೆಗೆ, ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 962ಕ್ಕೆ ಏರಿದೆ. ಇಂದು ಓರ್ವ ವ್ಯಕ್ತಿಯ ಸಾವಿನ ಜತೆಗೆ ಧಾರಾವಿಯಲ್ಲಿ
ಕೋವಿಡ್ ದಿಂದ ಮೃತರ ಸಂಖ್ಯೆ 31ಕ್ಕೆ ಏರಿದೆ.
ಇಂದು ಧಾರಾವಿಯ 60 ಫೀಟ್ ರೋಡ್, ನಾಯಕ್ ನಗರ, ಕುಂಭಾರ್ ವಾಡಾ, ಕಾಲಾಕಿಲಾ. ಪಿವಿ ಚಾಲ್ ಮತ್ತು ನ್ಯೂ ಮುನ್ಸಿಪಲ್ ಚಾಲ್‌ನಲ್ಲಿ ಪ್ರತ್ಯೇಕ ಒಂದೊಂದು ಕೊರೊನಾ ಪ್ರಕರಣ, ಕುತ್ತುವಾಡಿ ಮತ್ತು ಟ್ರಾನ್ಜಿಸ್ಟ್ ಕ್ಯಾಂಪ್‌ನಲ್ಲಿ ತಲಾ ಇಬ್ಬರು ಕೋವಿಡ್ ಸೋಂಕಿತರು ಪತ್ತೆಯಾಗಿದ್ದಾರೆ. ಧಾರವಿ ಮುಖ್ಯ ರಸ್ತೆ, ಇಂದಿರಾ ಖುರೇಷಿ ನಗರ ಮತ್ತು ರಾಜೀವ್ ಗಾಂಧಿ ನಗರದಲ್ಲಿ ತಲಾ 3 ಮತ್ತು ಟಿ-ಜಂಕ್ಷನ್‌ನಲ್ಲಿ 5 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. 90 ಫೀಟ್ ರೋಡ್ ಮತ್ತು ಧಾರಾವಿ ಕ್ರಾಸ್ ರಸ್ತೆಯಲ್ಲಿ ಪ್ರತ್ಯೇಕ 7 ಪೀಡಿತರು ಮತ್ತು ಮಾಟುಂಗಾ ಕಾರ್ಮಿಕ ಶಿಬಿರದಲ್ಲಿ 8 ಪೀಡಿತರು ಪತ್ತೆಯಾಗಿದ್ದಾರೆ. ಮಾಹಿಮ್‌ನಲ್ಲಿ ಕೋವಿಡ್ ದ ಆರು ಪ್ರಕರಣ ಪತ್ತೆಯಾಗಿದ್ದು, ಒಟ್ಟು ಕೊರೊನಾ ಪೀಡಿತರ ಸಂಖ್ಯೆ 143ಕ್ಕೆ ಏರಿದೆ. ಸಾವನ್ನಪ್ಪಿ
ದವರ ಸಂಖ್ಯೆ ಏಳಕ್ಕೆ ಏರಿದೆ. ಮಾಹಿಮ್‌ನಲ್ಲಿ ಇಲ್ಲಿಯ ತನಕ 28 ಮಂದಿ ಕೋವಿಡ್ ದಿಂದ ಮುಕ್ತರಾಗಿದ್ದು, ಡಿಸಾcರ್ಜ್ ಮಾಡಲಾಗಿದೆ.
ಇಂದು ಮಾಹಿಮ್‌ನ ಕಾಶೀನಾಥ್ ಬಿಲ್ಡಿಂಗ್, ಅರಿಹಂತ್ ಬಿಲ್ಡಿಂಗ್, ನ್ಯೂ ಪೊಲೀಸ್ ಕಾಲನಿ, ರನ್ ಶ್ಯಾಮ್ ನಿವಾಸ್, ಗ್ಯಾಬ್ರಿಯಲ್ ಹೌಸ್ ಮತ್ತು ಪ್ರಜಾ ಸೇವಕ್ ಸೊಸೈಟಿಯಲ್ಲಿ ಪ್ರತ್ಯೇಕ ಒಂದೊಂದು ಪ್ರಕರಣ ಪತ್ತೆಯಾಗಿದೆ. ದಾದರ್‌ನಲ್ಲಿ ಇಂದು ಕೋವಿಡ್ ದ 11 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಈ ಪ್ರದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 125ಕ್ಕೆ ಏರಿದೆ ಮತ್ತು ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 7ಕ್ಕೆ ಏರಿದೆ.
ದಾದರ್‌ನಲ್ಲಿ ಕೋವಿಡ್ ದಿಂದ 28 ಮಂದಿ ಗುಣಮುಖರಾಗಿದ್ದು, ಅವರನ್ನು ಡಿಸಾcರ್ಜ್ ಮಾಡಲಾಗಿದೆ. ದಾದರ್‌ನಲ್ಲಿ ಪತ್ತೆಯಾದ 11 ಪ್ರಕರಣಗಳಲ್ಲಿ ಚಿತ್ತಾಳೆ ರಸ್ತೆಯ ಗುಲ್ಮಾರ್ಗ್ ಸೊಸೈಟಿ, ಶಿವಾಜಿ ಪಾರ್ಕ್‌ನಲ್ಲಿ ಗಣೇಶ್ ಭುವನ್, ಸುಶ್ರುಷಾ ಸ್ಟಾಫ್ ಕಾಲೋನಿ, ಪ್ರಿಯದರ್ಶಿನಿ ಸೊಸೈಟಿ, ದೇವಿ ಪದ್ಮಬಾಯಿ ಚಾಲ್, ಚಿಖಲೆ ಮಾರ್ಗದ ಗುಲ್ಮೋಹರ್ ಸೊಸೈಟಿ ಮತ್ತು ಲೋಕಮಾನ್ಯ ನಗರದಲ್ಲಿ ಇಂದು ಪ್ರತ್ಯೇಕ ಒಂದೊಂದು ಪ್ರಕರಣ ಪತ್ತೆಯಾಗಿದೆ. ಜೈ ಹನುಮಾನ್ ಸೊಸೈಟಿ ಮತ್ತು ದಾದರ್ ಪೊಲೀಸ್ ಲೈನ್‌ನಲ್ಲಿ ಪ್ರತ್ಯೇಕ ಎರಡು ಪ್ರಕರಣ ಪತ್ತೆಯಾಗಿವೆ.