Advertisement

20ನೇ ಸ್ಥಾನಕ್ಕೇರಿದ ಹಾವೇರಿ ಜಿಲ್ಲೆ-ಸ್ನೇಹಾಗೆ 625 ಅಂಕ

02:17 PM Aug 10, 2021 | Team Udayavani |

ಹಾವೇರಿ: ಕೋವಿಡ್ ಆತಂಕದ ನಡುವೆಯೂ ನಡೆದ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಪರೀಕ್ಷೆ ಬರೆದಿದ್ದ ಎಲ್ಲ 21,386 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

Advertisement

ಜಿಲ್ಲೆ ಕಳೆದ ವರ್ಷ 33ನೇ ಸ್ಥಾನ ಪಡೆದು ಕಳಪೆ ಸಾಧನೆ ತೋರಿತ್ತು. ಪ್ರಸಕ್ತ ವರ್ಷ ಸ್ವಲ್ಪ ಮುಂದೆ ಸಾಗಿದ್ದು, ರಾಜ್ಯದಲ್ಲಿ 20ನೇ ಸ್ಥಾನಕ್ಕೆ ಏರಿಕೆ ಕಂಡಿದೆ. ತಾಲೂಕಿನ ಕರ್ಜಗಿ ಕರ್ನಾಟಕ ಪಬ್ಲಿಕ್‌ ಶಾಲೆಯ ಸ್ನೇಹಾ ಹಾವೇರಿ 625ಕ್ಕೆ 625 ಅಂಕ ಪಡೆದು ಸಾಧನೆ ಮಾಡಿದ್ದಾಳೆ.

10,658 ವಿದ್ಯಾರ್ಥಿಗಳು ಹಾಗೂ 10,738 ವಿದ್ಯಾರ್ಥಿನಿಯರು ಸೇರಿದಂತೆ 21,386 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕನ್ನಡ ಮಾಧ್ಯಮದಲ್ಲಿ 15,613, ಆಂಗ್ಲ ಮಾಧ್ಯಮದಲ್ಲಿ 3,418 ಹಾಗೂ ಉರ್ದು ಮಾಧ್ಯಮದಲ್ಲಿ 2,365 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

1,748 ವಿದ್ಯಾರ್ಥಿಗಳು ಎ ಪ್ಲಸ್‌ ಗ್ರೇಡ್‌, 6,133 ವಿದ್ಯಾರ್ಥಿಗಳು ಎ ಗ್ರೇಡ್‌, 9366 ವಿದ್ಯಾರ್ಥಿಗಳು ಬಿ ಶ್ರೇಣಿ, 4,149 ವಿದ್ಯಾರ್ಥಿಗಳು ಸಿ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಸರ್ಕಾರಿ ಶಾಲೆಯ 9,075, ಅನುದಾನಿತ ಪ್ರೌಢಶಾಲೆಯ 8,386 ಹಾಗೂ ಅನುದಾನ ರಹಿತ ಪ್ರೌಢಶಾಲೆಗಳ 4,147 ವಿದ್ಯಾರ್ಥಿಗಳು ಪಾಸ್‌ ಆಗಿದ್ದಾರೆ ಎಂದು ಡಿಡಿಪಿಐ ಅಂದಾನಪ್ಪ ವಡಗೇರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next