Advertisement

ಪ್ರಸೆಂಟೇಷನ್‌ ಪ್ರೌಢಶಾಲೆಯ ನಾಗಲಕ್ಷ್ಮೀಗೆ 625 ಅಂಕ  

05:51 PM Aug 10, 2021 | Team Udayavani |

ಧಾರವಾಡ: ನಗರದ ಪ್ರಸೆಂಟೇಷನ್‌ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿ ನಾಗಲಕ್ಷ್ಮೀ ಅಗಡಿ 625 ಅಂಕಕ್ಕೆ 625 ಅಂಕ ಪಡೆದು ರಾಜ್ಯಮಟ್ಟದಲ್ಲಿ ಪ್ರಥಮ ರ್‍ಯಾಂಕ್‌ ಪಡೆದಿದ್ದಾಳೆ.

Advertisement

ಇಲ್ಲಿಯ ಮುರುಘಾ ಮಠ ಬಳಿಯ ಮಹಾಂತನಗರದ ನಿವಾಸಿಗಳಾದ ಗಿರೀಶ ಹಾಗೂ ರೇಣುಕಾ ದಂಪತಿಯ ಪುತ್ರಿಯಾಗಿರುವ ನಾಗಲಕ್ಷ್ಮೀ ಜಿಲ್ಲೆಗೆ ಹೆಮ್ಮೆ ತಂದಿದ್ದಾಳೆ. ತಂದೆ ಬಿಜಿನೆಸ್‌ ಮಾಡುತ್ತಿದ್ದರೆ ತಾಯಿ ಗೃಹಿಣಿಯಾಗಿದ್ದು, ಮಗಳ ಓದಿಗೆ ನೀರೆರೆದಿದ್ದಾರೆ.

ತಂಗಿ ಸಮಂತಿಕಾ ಈಗಷ್ಟೇ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ನಾಗಲಕ್ಷ್ಮೀ ಹೊಸ ಪರೀಕ್ಷಾ ಪದ್ಧತಿಗೆ ತಕ್ಕಂತೆ ಸಿದ್ಧತೆ ಮಾಡಿಕೊಂಡು 625 ಅಂಕಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ರ್‍ಯಾಂಕ್‌ ಒಲಿಯುವಂತೆ ಮಾಡಿದ್ದಾಳೆ. ಮಗಳ ಸಾಧನೆಗೆ ತುಂಬಾ ಖುಷಿಯಾಗಿರುವ ಪೋಷಕರು ಪೇಡಾ ತಿನ್ನಿಸಿ ಸಂಭ್ರಮಿಸಿದರು.

ಕೋವಿಡ್‌ ಕಾರಣದಿಂದ ಆನ್‌ ಲೈನ್‌ ಕ್ಲಾಸ್‌ ಅವಲಂಬಿಸಿದ್ದ ನನಗೆ ಶಾಲೆಯ ಶಿಕ್ಷಕ ವೃಂದವು ಆದ್ಯತೆ ನೀಡಿ ಓದಿಗೆ ಸಹಾಯ ಮಾಡಿದರು. ಇದಲ್ಲದೇ ಹಳೇ ಪರೀಕ್ಷಾ ಪದ್ಧತಿ ಬದಲು ಹೊಸ ಪರೀಕ್ಷಾ ಪದ್ಧತಿಯಿಂದ ಸ್ವಲ್ಪ ಆತಂಕಗೊಂಡಿದ್ದೆ. ಆದರೆ ಧೈರ್ಯ ತುಂಬಿದ ಶಿಕ್ಷಕ ವೃಂದವು, ಅದಕ್ಕೆ ತಕ್ಕಂತೆ ಸಿದ್ಧತೆ ಮಾಡಲು ಮಾರ್ಗದರ್ಶನ ಮಾಡಿದರು. ಹೀಗಾಗಿ ಎದೆಗುಂದದೇ ಅಭ್ಯಾಸ ಮಾಡಿ, ಧೈರ್ಯದಿಂದ ಪರೀಕ್ಷೆ ಬರೆದಿದ್ದೆ. ನನ್ನ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದ್ದು ಖುಷಿಯಾಗಿದೆ ಎಂದು ನಾಗಲಕ್ಷ್ಮೀ ಸಂತಸ ಹಂಚಿಕೊಂಡಳು.

Advertisement

Udayavani is now on Telegram. Click here to join our channel and stay updated with the latest news.

Next