Advertisement

ರಾಜಸ್ಥಾನದಲ್ಲಿ 616.50 ಕಿಲೋ ಬೆಳ್ಳಿ ಪತ್ತೆ; ಆರು ಮಂದಿ ವಶಕ್ಕೆ

09:19 AM Apr 11, 2019 | Sathish malya |

ಜೈಪುರ : ರಾಜಸ್ಥಾನದ ರಾಜಾಸಮಂದ್‌ ಮತ್ತು ಸಿರೋಹಿ ಜಿಲ್ಲೆಯ ಚೆಕ್‌ ಪೋಸ್ಟ್‌ಗಳಲ್ಲಿ ನಡೆಸಲಾದ ತಪಾಸಣೆಯಲ್ಲಿ 616.50 ಕಿಲೋ ಬೆಳ್ಳಿ ಪತ್ತೆಯಾಗಿದ್ದು ಆರು ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ನಾಥದ್ವಾರ – ಜೈಪುರ ರಾಜ್ಯ ಹೆದ್ದಾರಿಯಲ್ಲಿ ಐವರು ಇದ್ದ ಕಾರೊಂದನ್ನು ಪೊಲೀಸರು ತಡೆದು ತಪಾಸಣೆ ಮಾಡಿದಾಗ ಅದರೊಳಗೆ 600 ಕೆಜಿ ಬೆಳ್ಳಿ ಪತ್ತೆಯಾಯಿತು. ಉಗ್ರನಿಗ್ರಹ ದಳದವರು ಕಾರೊಳಗೆ ಅಕ್ರಮ ಬೆಳ್ಳಿ ಸಾಗಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದರು.

ಸಿರೋಹಿ ಚೆಕ್‌ ಪೋಸ್ಟ್‌ ನಲ್ಲಿ ಖಾಸಗಿ ಬಸ್‌ ತಪಾಸಣೆ ಮಾಡುತ್ತಿದ್ದಾಗ ಪ್ರಯಾಣಿಕನೋರ್ವನ ಬಳಿ 16.5 ಕಿಲೋ ಬೆಳ್ಳಿ ಪತ್ತೆಯಾಯಿತು. ಆರೋಪಿ ಪ್ರಕಾಶ್‌ ಸೋನಿ (32) ಬೀವಾರ್‌ ನಿಂದ ಈ ಬಸ್ಸಿನಲ್ಲಿ ದಾಖಲೆ ಪತ್ರ ಇಲ್ಲದ ಬೆಳ್ಳಿಯೊಂದಿಗೆ ಪ್ರಯಾಣಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next