Advertisement

Mobile ಕದ್ದು ಯುಪಿಐ ಆ್ಯಪ್‌ ಬಳಸಿ 61 ಸಾವಿರ ರೂ. ನಗದು ಲಪಟಾವಣೆ

09:56 PM Nov 24, 2023 | Team Udayavani |

ಬೆಳ್ತಂಗಡಿ: ಕುವೆಟ್ಟು ಗ್ರಾಮದಲ್ಲಿ ಮನೆಗೆ ಆಗಮಿಸಿದ ಆರೋಪಿಯೋರ್ವ ಮಹಿಳೆಯ ಮೊಬೈಲ್ ಕದ್ದಿರುವ ಜತೆಗೆ ಅದರಲ್ಲಿದ್ದ ಯುಪಿಐ ಆ್ಯಪ್‌ ಮೂಲಕ ಬ್ಯಾಂಕ್‌ ಖಾತೆಯಿಂದ 61 ಸಾವಿರ ರೂ. ನಗದು ವರ್ಗಾವಣೆ ಮಾಡಿದ್ದು, ಘಟನೆಯ ಕುರಿತು ಬೆಳ್ತಂಗಡಿ ಪೊಲೀಸ್‌ ಠಾಣೆ ತಡವಾಗಿ ಪ್ರಕರಣ ದಾಖಲಾಗಿದೆ.

Advertisement

ಘಟನೆಯ ಕುರಿತು ಕುವೆಟ್ಟು ಗ್ರಾಮ ನಿವಾಸಿ ಅಭಿದಾ ಬಾನು ಅವರು ದೂರು ನೀಡಿದ್ದು, ಆಕೆಯ ಪತಿಯ ಸ್ನೇಹಿತ ಸಿದ್ದೀಕ್‌ ಮೊಬೈಲ್ ಕದ್ದು ನಗದು ವರ್ಗಾವಣೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಮಹಿಳೆ ಮನೆಯಲ್ಲಿ ಇಲ್ಲದ ವೇಳೆಗೆ ಆತ ಮನೆಗೆ ಬಂದು ಮೊಬೈಲ್ ಕದ್ದು, ಬ್ಯಾಂಕ್‌ ಖಾತೆಯಲ್ಲಿದ್ದ 64 ಸಾವಿರ ರೂ.ಗಳ ಪೈಕಿ 61 ಸಾವಿರ ರೂ.ಗಳನ್ನು ಬೇರೆ ಖಾತೆಗೆ ವರ್ಗಾವಣೆ ಮಾಡಿದ್ದಾನೆ.

ಆರೋಪಿ ಸಿದ್ದೀಕ್‌ ಸ್ನೇಹಿತನಾಗಿರುವ ಕಾರಣದಿಂದ ಈ ಕುಟುಂಬದ ಜತೆ ಆತ್ಮೀಯನಾಗಿದ್ದು, ಆತ ಫೋನ್‌ ಪೇ ಪಾಸ್‌ವರ್ಡ್‌ ಕೂಡ ತಿಳಿದುಕೊಂಡಿದ್ದ. ಆತ ಹಣ ಹಾಗೂ ಮೊಬೈಲ್ ಹಿಂದಿರುಗಿಸುತ್ತಾನೆ ಎಂದು ಮಹಿಳೆ ಸುಮ್ಮನಿದ್ದು, ಹಲವು ಸಮಯ ಕಳೆದರೂ ಹಿಂದಿರುಗಿಸದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next