Advertisement

ಸಪ್ತಪದಿಗೆ 61 ಜೋಡಿಗಳ ನೋಂದಣಿ

03:52 PM Mar 24, 2020 | Team Udayavani |

ದೇವನಹಳ್ಳಿ: ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳಲ್ಲಿ ಜನಸಾಮಾನ್ಯರ ಅನುಕೂಲಕ್ಕಾಗಿ ಸಪ್ತಪದಿ ಸಾಮೂಹಿಕ ಸರಳ ವಿವಾಹವೆಂಬ ವಿನೂತನ ಕಾರ್ಯಕ್ರಮದಡಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಪ್ರವರ್ಗ ಎ ದೇವಾಲಯ ಗಳಾದ ದೊಡ್ಡಬಳ್ಳಾಪುರ ತಾಲೂಕಿನ ಎಸ್‌. ಎಸ್‌.ಘಾಟಿ ಶ್ರೀ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಹಾಗೂ ನೆಲಮಂಗಲ ತಾಲೂಕಿನ ಶ್ರೀ ಗಂಗಾಧರೇಶ್ವರಸ್ವಾಮಿ, ಹೊನ್ನಾದೇವಿ, ಶಿವಗಂಗೆ ದೇವಾಲಯಗಳಲ್ಲಿ ಏಪ್ರಿಲ್‌ 26ರಂದು “ಸಾಮೂಹಿಕ ಸರಳ ವಿವಾಹ’ ಆಯೋಜಿಸಲಾಗಿದೆ.

Advertisement

ಘಾಟಿ ಸುಬ್ರಹ್ಮಣ್ಯ ದೇವಾಲಯದಿಂದ ಇದುವರೆಗೂ 201 ಅರ್ಜಿ ಪಡೆದಿದ್ದು, 60 ಅರ್ಜಿಗಳು ಮಾತ್ರ ನೋಂದಣಿಯಾಗಿದೆ. ಶಿವಗಂಗೆ ದೇವಾಲಯದಲ್ಲಿ 10 ಅರ್ಜಿ, 01 ಅರ್ಜಿ ಮಾತ್ರ ನೋಂದಣಿಯಾಗಿದೆ. ಒಟ್ಟು ಜಿಲ್ಲೆಯಲ್ಲಿ 211 ಅರ್ಜಿಗಳನ್ನು ಪಡೆದಿದ್ದು, 61 ಅರ್ಜಿಗಳು ಮಾತ್ರ ನೋಂದಣಿಯಾಗಿವೆ. ಸಾಮೂಹಿಕ ಸರಳ ವಿವಾಹವಾಗಲಿಚ್ಛಿಸುವ ವಧು-ವರರು ಅರ್ಜಿಯನ್ನು ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಕಚೇರಿಯಲ್ಲಿ ಪಡೆದು ಮಾರ್ಚ್‌ 27 ರೊಳಗೆ ಅಗತ್ಯ ದಾಖಲೆಗಳೊಂದಿಗೆ ನೋಂದಾಯಿಸಿಕೊಳ್ಳಬಹುದು ಎಂದು ಆಯಾ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next