Advertisement

ಗೋರೆಗಾಂವ್‌ ಕರ್ನಾಟಕ ಸಂಘದ 60ನೇ ವಾರ್ಷಿಕ ಮಹಾಸಭೆ

11:32 AM Jun 05, 2018 | Team Udayavani |

ಮುಂಬಯಿ: ಗೋರೆಗಾಂವ್‌ ಕರ್ನಾಟಕ ಸಂಘವು ಮುಂಬಯಿ ಕನ್ನಡಿಗರ ಅಭಿ ಮಾನದ ಸಂಘಟನೆಯಾಗಿದೆ. ಭಿನ್ನಾಭಿಪ್ರಾಯವಿಲ್ಲದೆ ಸಂಘದ ಘನತೆಯನ್ನು ಇನ್ನೂ ಹೆಚ್ಚಿಸೋಣ. ವಜ್ರಮಹೋತ್ಸವವನ್ನು ಆಚರಿಸುತ್ತಿ ರುವ ಗೋರೆಗಾಂವ್‌ ಕರ್ನಾಟಕ ಸಂಘವು ವಜ್ರದಂತೆ ಇನ್ನೂ ಗಟ್ಟಿಯಾಗಿ  ಬೆಳೆಯಲಿ ಎಂದು ಗೋರೆಗಾಂವ್‌ ಕರ್ನಾಟಕ ಸಂಘದ ಅಧ್ಯಕ್ಷರಾದ ರಮೇಶ ಶೆಟ್ಟಿ ಪಯ್ನಾರ್‌ ಅವರು ಅಭಿಪ್ರಾಯಪಟ್ಟರು.

Advertisement

ಗೋರೆಗಾಂವ್‌ ಕರ್ನಾಟಕ ಸಂಘದ 60 ನೇಯ ವಾರ್ಷಿಕ ಮಹಾಸಭೆಯು ಜೂ. 3 ರಂದು ಸಂಜೆ ಸಂಘದ ಬಾಕೂìರು ರುಕ್ಮಿಣಿ ಶೆಟ್ಟಿ ಸ್ಮಾರಕ ಮಿನಿ ಸಭಾಗೃಹದಲ್ಲಿ ಸಂಘದ ಅಧ್ಯಕ್ಷರಾದ ರಮೇಶ ಶೆಟ್ಟಿ ಪಯ್ನಾರ್‌ ಅವರ ಅಧ್ಯಕ್ಷತೆಯಲ್ಲಿ ಜರಗಿದ್ದು,  ಸದಸ್ಯರನ್ನುದ್ದೇಶಿಸಿ ಮಾತನಾಡಿದ ಅವರು ಇದು ಕನ್ನಡಿಗರ ನೆಚ್ಚಿನ ಸಂಘವಾಗಿದ್ದು,  ಎಲ್ಲರೂ ಒಂದಾಗಿ ಸಂಘದ ವಜ್ರಮಹೋತ್ಸವನ್ನು ಅದ್ದೂರಿಯಿಂದ ಆಚರಿಸೋಣ ಎಂದು ಕರೆನೀಡಿ, ಸಂಸ್ಥೆಯ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ ಸದಾಯಿರಲಿ ಎಂದರು.

ಪ್ರಾರಂಭದಲ್ಲಿ ಸಂಘದ ಮಹಿಳಾ ಸದಸ್ಯರ ಪ್ರಾರ್ಥನೆ ಬಳಿಕ ಸಂಘದ ಉಪಾಧ್ಯಕ್ಷರಾದ ನಾರಾಯಣ ಆರ್‌. ಮೆಂಡನ್‌ ಎÇÉಾ ಸದಸ್ಯರುಗಳನ್ನು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮೀನಾ ಬಿ. ಕಳಾವರ್‌ ಅವರು ಸಂಘದ ವಾರ್ಷಿಕ ವರದಿಯನ್ನು ಮಂಡಿಸಿದರು. ಗೌರವ ಕೋಶಾಧಿಕಾರಿ ವಿಶಾಲಾಕ್ಷಿ ಉಳುವಾರ ಲೆಕ್ಕ ಪತ್ರವನ್ನು ಸಭೆಯ ಮುಂದಿಟ್ಟರು.

ಸಂಘದ ನೂತನ ಅಧ್ಯಕ್ಷರಾಗಿ ದೇವಲ್ಕುಂದ ಭಾಸ್ಕರ್‌ ಶೆಟ್ಟಿಯವರು ಸರ್ವಾನುಮತದಿಂದ ಆಯ್ಕೆಯಾಗಿದ್ದು, ರಮೇಶ ಶೆಟ್ಟಿ ಪಯ್ನಾರು ಸಂಘದ ಪಾರುಪತ್ಯ ಗಾರರಾಗಿ ಆಯ್ಕೆಯಾಗಿ¨ªಾರೆ. ಉಪಾಧ್ಯಕ್ಷರಾಗಿ ನಾರಾಯಣ ಆರ್‌. ಮೆಂಡನ್‌ ಪುನ ರಾಯ್ಕೆಯಾಗಿ¨ªಾರೆ.

ಮಾಜಿ ಅಧ್ಯಕ್ಷ ಎಸ್‌. ಎಂ.  ಶೆಟ್ಟಿ ಅವರು ಮಾತನಾಡಿ, ಸಂಘದ ಕಟ್ಟಡದ ಪುನರ್‌ ನಿರ್ಮಾಣದ ಬಗ್ಗೆ ಮಾಹಿತಿಯಿತ್ತರು. ವಜ್ರಮಹೋತ್ಸವ ನಿಧಿ ಸಂಗ್ರಹ ಸಮಿತಿಯ ಕಾರ್ಯಾಧ್ಯಕ್ಷೆ ಉಷಾ ಶೆಟ್ಟಿ ಅವರು ಮಾತನಾಡಿ, ನಿಧಿ ಸಂಗ್ರಹಕ್ಕೆ ಎಲ್ಲರೂ ಪ್ರೋತ್ಸಾಹಿಸಬೇಕು ಎಂದರು. ಸಂಘದ ಪಾರುಪತ್ಯಗಾರರು ಹಾಗೂ ವಜ್ರಮಹೋತ್ಸವ ಸ್ಮರಣ ಸಂಚಿಕೆ ಸಮಿತಿಯ ಕಾರ್ಯಾಧ್ಯಕ್ಷರಾದ ಜಿ. ಟಿ. ಆಚಾರ್ಯ ಮತ್ತು ಸೆಲಬ್ರೇಶನ್‌ ಸಮಿತಿಯ ಕಾರ್ಯಾಧ್ಯಕ್ಷ ಸುರೇಂದ್ರ ಸಾಲ್ಯಾನ್‌ ಮಾತನಾಡಿ, ಸಂಘದ ವಜ್ರಮಹೋತ್ಸವ ಸಮಾರಂಭದ ಬಗ್ಗೆ ಸೂಕ್ತ ಮಾಹಿತಿಯಿತ್ತರು.

Advertisement

ಸಭಿಕರ ಪರವಾಗಿ  ಲಕ್ಷಿ ಆರ್‌. ಶೆಟ್ಟಿ, ಮೋಹನ್‌ ಮಾರ್ನಾಡ್‌, ಡಿ. ವಿ. ಡಂಬಲ, ಮೊದಲಾದವರು ಮಾತನಾಡಿದರು. ಅಧ್ಯಕ್ಷರಾಗಿ ಆಯ್ಕೆಗೊಂಡ ದೇವಲ್ಕುಂದ ಭಾಸ್ಕರ್‌ ಶೆಟ್ಟಿ ಅವರು ನೆರೆದವರೆಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿ ಸಂಘದ ವಜ್ರಮಹೋತ್ಸವದ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು ಎಂದು ನುಡಿದರು. ಜೊತೆ ಕಾರ್ಯದರ್ಶಿ ಗುಣೋದಯ ಎಸ್‌. ಐಲ್‌ ವಂದಿಸಿದರು.          
ಚಿತ್ರ-ವರದಿ :   ಈಶ್ವರ ಎಂ. ಐಲ್‌

Advertisement

Udayavani is now on Telegram. Click here to join our channel and stay updated with the latest news.

Next