Advertisement

Bhopal: ಸಾಲ ಮಾಡಿ ಖರೀದಿಸಿದ ಮೊಪೆಡ್‌ಗೆ 60000 ಖರ್ಚಲ್ಲಿ ಡಿಜೆ, ಮೆರವಣಿಗೆ!

09:13 PM Oct 15, 2024 | Team Udayavani |

ಭೋಪಾಲ್‌: 20 ಸಾವಿರ ರೂ. ಮುಂಗಡ ಹಣವನ್ನಷ್ಟೇ ಪಾವತಿಸಿ, ಸಾಲದ ಮೂಲಕ ಮೊಪೆಡ್‌ ಖರೀದಿಸಿದ್ದ ಮಧ್ಯಪ್ರದೇಶದ ಟೀ ಮಾರಾಟಗಾರನೊಬ್ಬ 60 ಸಾವಿರ ರೂ.ಖರ್ಚು ಮಾಡಿ ಡಿಜೆ ಹಾಕಿಸಿ, ಜೆಸಿಬಿ ಮೂಲಕ ಆ ಮೊಪೆಡ್‌ನ‌ ಮೆರವಣಿಗೆ ಮಾಡಿದ್ದಾರೆ.

Advertisement

ಈ ವಿಶಿಷ್ಟ ಸಂಭ್ರಮಾಚರಣೆಯ ವಿಡಿಯೋ ವೈರಲ್‌ ಆಗಿದ್ದು, 60 ಸಾವಿರ ರೂ. ಖರ್ಚು ಮಾಡಿದ ಭೂಪನನ್ನ ಕಂಡು ನೆಟ್ಟಿಗರು ಹುಬ್ಬೇರಿಸಿದ್ದಾರೆ.

ಟೀ ಮಾರಾಟಗಾರ ಮುರಾರಿ ಲಾಲ್‌ ಕುಶ್ವಾಹ್‌ ಈ ಮೊಪೆಡ್‌ನ‌ ಮಾಲೀಕ. ಹೊಸ ಮೊಪೆಡ್‌ ಖರೀದಿಸಿದ್ದು ಎಲ್ಲರಿಗೂ ಗೊತ್ತಾಗಲಿ ಎಂದು ಜೆಸಿಬಿಯಲ್ಲಿ ಮೆರವಣಿಗೆ ಮಾಡಿಸಿದ್ದಾರೆ. ಡಿಜೆ ಹಾಕಿಸಿ, ಲೈಟ್‌ನಿಂದ ಬೈಕ್‌ ಅಲಂಕರಿಸಿ ಬಂಧು-ಬಳಗವನ್ನೂ ಸೇರಿಸಿಕೊಂಡು ಮೆರವಣಿಗೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next