Advertisement

ರೈತರ ಅನುಕೂಲಕ್ಕಾಗಿ ಕ್ವಿಂಟಲ್‌ ತೊಗರಿಗೆ 6 ಸಾವಿರ ರೂ.

05:13 PM Jan 22, 2021 | Nagendra Trasi |

ಮುದ್ದೇಬಿಹಾಳ: ಪ್ರತಿ ಕ್ವಿಂಟಲ್‌ ತೊಗರಿಗೆ ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ದರವಿದ್ದರೂ ಸರ್ಕಾರ ರೈತರ ಅನುಕೂಲಕ್ಕಾಗಿ ಕ್ವಿಂಟಲ್‌ಗೆ 6000 ರೂ. ಬೆಂಬಲ ಬೆಲೆಯಡಿ ತೊಗರಿ ಖರೀದಿಸುತ್ತಿದ್ದು ಎಲ್ಲರೂ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ ಹೇಳಿದರು.

Advertisement

ಹಿರೇಮುರಾಳ ಗ್ರಾಮದಲ್ಲಿ ಪಿಕೆಪಿಎಸ್‌ನಡಿ ತೊಗರಿ ಖರೀದಿಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು. ಹಿರೇಮುರಾಳ ಪಿಕೆಪಿಎಸ್‌ ಅಡಿ
650ರವರೆಗೆ ರೈತರು ನೋಂದಣಿ ಮಾಡಿಕೊಂಡಿರುವುದು ಉತ್ತಮ ಬೆಳವಣಿಗೆ. ಖರೀದಿ ಕೇಂದ್ರದಲ್ಲಿ ಸರದಿ ಪದ್ಧತಿಯಂತೆ ತೊಗರಿ ಖರೀದಿಸಬೇಕು.

ರೈತರಲ್ಲಿ ಗೊಂದಲ ಮೂಡಿಸಬಾರದು ಎಂದು ಸಲಹೆ ನೀಡಿದರು. ಪಿಕೆಪಿಎಸ್‌ ಅಧ್ಯಕ್ಷ ಬಸವಂತ್ರಾಯ ಭೋವಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗಬೇಕಿದೆ. ರೈತನಿಗೆ ತಾನು ಬೆಳೆದ ಬೆಳೆ ಮೇಲೆ ಬೆಲೆ ನಿಗದಿ ಮಾಡುವುದು ಸಾಧ್ಯವಿಲ್ಲ. ಇದನ್ನರಿತಿರುವ ಪ್ರಧಾನಿ
ನರೇಂದ್ರ ಮೋದಿ ಬೆಂಬಲ ಬೆಲೆ ಘೋಷಿಸಿ ರೈತರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಮುಂದಾಗಿದ್ದಾರೆ. ರೈತರ ಖಾತೆಗೆ ಹಣ ಜಮಾ ಮಾಡಿ ಅವರನ್ನು ಆರ್ಥಿಕವಾಗಿ ಮೇಲೆತ್ತುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಪಿಕೆಪಿಎಸ್‌ ಉಪಾಧ್ಯಕ್ಷ ನಿಂಗಣ್ಣ ರಾಮೋಡಗಿ, ನಾಗರಾಜ ರಾಮೋಡಗಿ, ಮಾನಸಿಂಗ್‌ ರಾಠೊಡ, ಪಿಕೆಪಿಎಸ್‌ ಮಾಜಿ ಅಧ್ಯಕ್ಷ ಬಸಲಿಂಗಪ್ಪ ಮೇಟಿ, ಎಸ್‌.ಎಂ. ಯಾಳವಾರ, ಬಸ್ಸು ಜೈನಾಪುರ, ರಮೇಶ ಇಂಗಳೇಶ್ವರ, ಸಾಬಣ್ಣ ವಗ್ಗರ, ಎ.ಎನ್‌. ನಾಡಗೌಡ್ರ, ಶೇಖಪ್ಪ ನಾರಾಯಣಪುರ ಇತರರಿದ್ದರು. ಪಿಕೆಪಿಎಸ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎ.ಬಿ. ಬಾಗೇವಾಡಿ ಸ್ವಾಗತಿಸಿದರು. ರುದ್ರು ರಾಮೋಡಗಿ ನಿರೂಪಿಸಿದರು. ಗ್ರಾಪಂ ಸದಸ್ಯ ಮಾರುತಿ ಭೋವಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next