Advertisement

6,000 ಎನ್‌ಜಿಓಗಳ ವಿದೇಶೀ ದೇಣಿಗೆ ಸ್ವೀಕರಿಸುವ ಲೈಸನ್ಸ್‌ ರದ್ದು ಸಂಭವ

03:19 PM Jul 10, 2017 | |

ಹೊಸದಿಲ್ಲಿ : ಕಳೆದ ಐದು ವರ್ಷಗಳಿಂದ ನಿರಂತರವಾಗಿ ವಾರ್ಷಿಕ ಲೆಕ್ಕ ಪತ್ರ, ಆದಾಯ ಮತ್ತು ಖರ್ಚು ಲೆಕ್ಕ ಪತ್ರಗಳನ್ನು ನೀಡದ ಸುಮಾರು ಆರು ಸಾವಿರ ಸರಕಾರೇತರ ಸೇವಾ ಸಂಘಟನೆಗಳು (ಎನ್‌ಜಿಓ) ಈಗಿನ್ನು ವಿದೇಶೀ ದೇಣಿಗೆ ಪಡೆಯವ ಲೈಸನ್ಸ್‌ ಕಳೆದುಕೊಳ್ಳಲಿವೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

Advertisement

ಈ ಆರು ಸಾವಿರ ಎನ್‌ಜಿಓಗಳಿಗೆ ಈ ಬಗ್ಗೆ  ಜುಲೈ 8ರಂದು ನೊಟೀಸ್‌ ಜಾರಿ ಮಾಡಲಾಗಿದ್ದು ಜು.23ರೊಳಗೆ ಅವು ಸೂಕ್ತ ಉತ್ತರವನ್ನು ಕೊಡಬೇಕಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಈ ವರ್ಷ ಮೇ ತಿಂಗಳಲ್ಲಿ  18,523 ಎನ್‌ಜಿಓಗಳಿಗೆ ಜೂನ್‌ 14ರ ಒಳಗೆ ತಮ್ಮ ವಾರ್ಷಿಕ ಲೆಕ್ಕ ಪತ್ರ, ಖರ್ಚು-ಆದಾಯ ವಿವರಗಳನ್ನು ಸಲ್ಲಿಸುವಂತೆ ಒಂದು ಬಾರಿಯ ಅವಕಾಶವನ್ನು ನೀಡಲಾಗಿತ್ತು. 

ವಿದೇಶ ವಂತಿಗೆ ನಿಯಂತ್ರಣ ಕಾಯಿದೆಯಡಿ ನೋಂದಾಯಿಸಿಕೊಂಡಿರುವ ಈ ಎನ್‌ಜಿಓಗಳು 2010-11ರಿಂದ ತೊಡಗಿ 2014-15ರ ವರೆಗಿನ ಹಣಕಾಸು ವರ್ಷಕ್ಕೆ ಸಂಬಂಧಿಸಿದ ವಾರ್ಷಿಕ ಲೆಕ್ಕ ಪತ್ರ, ಖರ್ಚು-ಆದಾಯ ವಿವರಗಳನ್ನು ಸಲ್ಲಿಸುವಂತೆ ಸೂಚಿಸಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next