ವಿಶೇಷ ವರದಿ-ಮಹಾನಗರ: ಭದ್ರತೆ ದೃಷ್ಟಿಯಿಂದ ನಗರದ ಸಾರ್ವಜನಿಕ ಸ್ಥಳಗಳಲ್ಲಿ ಗುಣಮಟ್ಟದ ಸುಮಾರು 6,000 ಸಿಸಿ ಕೆಮರಾಗಳನ್ನು ಅಳವಡಿಸಲು ಪೊಲೀಸ್ ಇಲಾಖೆ ಇದೀಗ ತೀರ್ಮಾನ ಕೈಗೊಂಡಿದೆ.
ನೂತನವಾಗಿ ಅಳವಡಿಸಲಾಗುವ ಸಿಸಿ ಕೆಮರಾಗಳಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, 1920X1080 ಗುಣಮಟ್ಟದ ವೀಡಿಯೋ ಸೆರೆ ಹಿಡಿಯಬಲ್ಲ ಸಿಸಿ ಕೆಮರಾ ಅಳವಡಿಸಲಾಗುತ್ತಿದೆ.
ರಾತ್ರಿ ವೇಳೆ ಅಂದರೆ ಕತ್ತಲೆಯಲ್ಲಿಯೂ ವ್ಯಕ್ತಿಗಳ ಚಲನ-ವಲನ, ವಾಹನಗಳ ಓಡಾಟವನ್ನು ಸ್ಪಷ್ಟವಾಗಿ ಸೆರೆ ಹಿಡಿಯಬಲ್ಲ ವೀಡಿಯೋ ಫೂಟೇಜ್ ದಾಖಲಿಸುವ ಅತ್ಯಾಧುನಿಕ ಸಿಸಿ ಕೆಮರಾ ಇದಾಗಿರುತ್ತದೆ.
0.01ಕ್ಕಿಂತಲೂ ಹೆಚ್ಚಿನ ಬೆಳಕಿನ ಸಾಂಧ್ರತೆಯನ್ನು ಸೆರೆಹಿಡಿಯಬಲ್ಲ ತಂತ್ರಜ್ಞಾನವನ್ನು ಇದು ಹೊಂದಿದ್ದು, 50 ಯಾರ್ಡ್‌ಗಿಂತಲೂ ಹೆಚ್ಚಿನ ಪ್ರದೇಶಕ್ಕೆ ಕಣ್ಗಾವಲಿನಲ್ಲಿಡುವ ಸಾಮರ್ಥ್ಯ ವಿರುತ್ತದೆ. 3.6 ಎಂಎಂ ಫೋಕಲ್ ಲೆಂಥ್ ಅನ್ನು ಕೂಡ ಈ ಕೆಮರಾಗಳು ಹೊಂದಿರುತ್ತವೆ.
ಭದ್ರತೆಯ ದೃಷ್ಟಿಯಿಂದ ನಗರ ಅಪಾರ್ಟ್‌ಮೆಂಟ್, ಬಹುಮಹಡಿ ಕಟ್ಟಡ, ವಾಣಿಜ್ಯ ಕಟ್ಟಡ ಸಹಿತ ಪ್ರಮುಖ ಜಂಕ್ಷನ್‌ಗಳಲ್ಲಿ ಸದ್ಯ ಒಟ್ಟು 1,830 ಸಿಸಿ ಕೆಮರಾಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಒಟ್ಟು 210 ಹೆಚ್ಚುವರಿ ಸಿಸಿ ಕೆಮರಾಗಳನ್ನು ಇತ್ತೀಚೆಗೆಯಷ್ಟೇ ಅಳವಡಿಸಲಾಗಿತ್ತು. ಮುಂದಿನ ದಿನಗಳಲ್ಲಿ ಸಿಸಿ ಕೆಮರಾಗಳ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಲಿದೆ.
Advertisement
ಅದರಂತೆ ಸದ್ಯದಲ್ಲಿಯೇ ನಗರದ ಹೆಚ್ಚಿನ ಆಯಕಟ್ಟಿನ ಪ್ರದೇಶಗಳು ಮತ್ತು ಜನ ಸಂದಣಿ ಹೊಂದಿರುವ ಪ್ರದೇಶಗಳು ಸಿಸಿ ಕೆಮರಾದ ಕಣ್ಗಾವಲಿನಲ್ಲಿರಲಿವೆ
Related Articles
Advertisement
ಮಂಗಳೂರು ನಗರ ಪೊಲೀಸರು ಸಾರ್ವಜನಿಕ ಸುರಕ್ಷತಾ ಕಾಯ್ದೆ ಯನ್ವಯ ನಡೆಸುತ್ತಿರುವ ವಿಶೇಷ ಅಭಿಯಾನದಂತೆ ಕಳೆದ ವಾರ ನಗರ ದಲ್ಲಿ ವಾಣಿಜ್ಯ ಸಂಕೀರ್ಣಗಳು ಸಹಿತ ಸಾರ್ವಜನಿಕ ಸ್ಥಳಗಳಲ್ಲಿ ಒಟ್ಟು 210 ಹೆಚ್ಚುವರಿ ಸಿಸಿ ಕೆಮರಾಗಳನ್ನು ಇತ್ತೀಚೆಗೆ ಅಳವಡಿಸಿದ್ದರು.
ಪ್ರಮುಖ ಜಂಕ್ಷನ್‌ಗಳಾದ ಪಿವಿಎಸ್, ಬಂಟ್ಸ್ ಹಾಸ್ಟೆಲ್, ಜ್ಯೋತಿ ವೃತ್ತ, ಹಂಪನಕಟ್ಟೆ, ಕ್ಲಾಕ್‌ಟವರ್ ವೃತ್ತ, ಸ್ಟೇಟ್ಬ್ಯಾಂಕ್, ಪಂಪ್‌ವೆಲ್, ಮಲ್ಲಿಕಟ್ಟೆ, ಕಂಕನಾಡಿ, ಲಾಲ್ಬಾಗ್, ಬಿಜೈ, ಕದ್ರಿ, ನಂತೂರು, ಹ್ಯಾಮಿಲ್ಟನ್ ವೃತ್ತ ಸಹಿತ ನಗರದ ವೃತ್ತಗಳಲ್ಲಿ, ರಸ್ತೆ ಬದಿಗಳಲ್ಲಿ ಸದ್ಯ ಸುಮಾರು 100ಕ್ಕೂ ಹೆಚ್ಚು ಸಿಸಿ ಕೆಮರಾ ಈ ಹಿಂದೆಯೇ ಕಾರ್ಯ ನಿರ್ವಹಿಸುತ್ತಿತ್ತು. ಅಲ್ಲದೆ ನಗರದ ಸಾರ್ವಜನಿಕ ಸ್ಥಳಗಳಲ್ಲಿ ಸದ್ಯ ಸುಮಾರು ಸಾವಿರಕ್ಕೂ ಮಿಕ್ಕಿ ಸಿಸಿ ಕೆಮರಾಗಳಿವೆ.
ಪ್ರಮುಖವಾಗಿ ಸಂಚಾರಿ ನಿಯಮ ಉಲ್ಲಂಘಿಸುವ ವಾಹನಗಳ ಮೇಲೆ ನಿಗಾ ವಹಿಸುವ ಜತೆಗೆ, ಅಪರಾಧ ಕೃತ್ಯಗಳು ನಡೆದಾಗ ಆರೋಪಿಗಳನ್ನು ಪತ್ತೆ ಮಾಡುವುದಕ್ಕೆ ಈ ಕೆಮರಾಗಳು ನೆರವಿಗೆ ಬಂದಿರುವ ಸಾಕಷ್ಟು ಉದಾಹರಣೆಗಳು ನಗರದಲ್ಲಿವೆ. ಕ. ರಾ. ಸಾ. ಸುರಕ್ಷಾ ಕಾಯ್ದೆ ಅನ್ವಯ ನಗರದ ಎಲ್ಲ ವಾಣಿಜ್ಯ ಕಟ್ಟಡಗಳು, ಬಸ್ ನಿಲ್ದಾಣ, ಶಿಕ್ಷಣ ಸಂಸ್ಥೆಗಳು, ಬಹುಮಹಡಿ ಕಟ್ಟಡ, ವಸತಿ ಸಮುಚ್ಚಯ, ಕಚೇರಿಗಳಲ್ಲಿ ಸಿಸಿ ಕೆಮರಾ ಅಳವಡಿಸಬೇಕೆಂಬ ನಿಯಮವಿದೆ. ಸಾರ್ವಜನಿಕ ಸೇವೆ ಒದಗಿಸುವ ಅಥವಾ ಹೆಚ್ಚು ಜನ ಸೇರುವ ಎಲ್ಲ ಸರಕಾರಿ ಮತ್ತು ಖಾಸಗಿ ಸಂಘ – ಸಂಸ್ಥೆಗಳು, ಅಂಗಡಿ-ಮುಂಗಟ್ಟು ಕಟ್ಟಡಗಳಲ್ಲಿ ಸಿಸಿ ಕೆಮರಾ ಕಡ್ಡಾಯವಾಗಿ ಅಳವಡಿಸಬೇಕು ಎಂದು ರಾಜ್ಯ ಸರಕಾರ ಈ ಹಿಂದೆಯೇ ಸೂಚಿಸಿತ್ತು. ನಿಯಮ ಪಾಲನೆ ಮಾಡದವರ ವಿರುದ್ಧ ಪೊಲೀಸ್ ಇಲಾಖೆ ಕಠಿನ ಕ್ರಮಕ್ಕೆ ಮುಂದಾಗಿದೆ.
ನಗರದಲ್ಲಿವೆ 1,830 ಸಿಸಿ ಕೆಮರಾಭದ್ರತೆಯ ದೃಷ್ಟಿಯಿಂದ ನಗರ ಅಪಾರ್ಟ್‌ಮೆಂಟ್, ಬಹುಮಹಡಿ ಕಟ್ಟಡ, ವಾಣಿಜ್ಯ ಕಟ್ಟಡ ಸಹಿತ ಪ್ರಮುಖ ಜಂಕ್ಷನ್‌ಗಳಲ್ಲಿ ಸದ್ಯ ಒಟ್ಟು 1,830 ಸಿಸಿ ಕೆಮರಾಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಒಟ್ಟು 210 ಹೆಚ್ಚುವರಿ ಸಿಸಿ ಕೆಮರಾಗಳನ್ನು ಇತ್ತೀಚೆಗೆಯಷ್ಟೇ ಅಳವಡಿಸಲಾಗಿತ್ತು. ಮುಂದಿನ ದಿನಗಳಲ್ಲಿ ಸಿಸಿ ಕೆಮರಾಗಳ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಲಿದೆ.
ಗುಣಮಟ್ಟದ ಸಿಸಿ ಕೆಮರಾಕ್ಕೆ ಆದ್ಯತೆ
ನಗರದ ಭದ್ರತೆಯ ದೃಷ್ಟಿಯಿಂದ ಸಾರ್ವಜನಿಕ ಪ್ರದೇಶಗಳಲ್ಲಿ 1,830 ಸಿಸಿ ಕೆಮರಾಗಳನ್ನು ಈಗಾಗಲೇ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಿಸಲಾಗುತ್ತಿದ್ದು, ಸುಮಾರು 6,000 ಸಿಸಿ ಕೆಮರಾಗಳು ಕಣ್ಗಾವಲಿನಲ್ಲಿರಲಿವೆ. ಗುಣಮಟ್ಟದ ಸಿಸಿ ಕೆಮರಾಕ್ಕೆ ಆದ್ಯತೆ ನೀಡಲಾಗಿದೆ.
– ಸಂದೀಪ್ ಪಾಟೀಲ್,
ಮಂಗಳೂರು ನಗರ ಪೊಲೀಸ್ ಕಮಿಷನರ್