Advertisement

Burkina Faso: ಬುರ್ಕಿನಫಾಸೋದಲ್ಲಿ ಒಂದೇ ಗಂಟೆಯಲ್ಲಿ 600 ಮಂದಿ ಹತ್ಯೆ

08:45 PM Oct 05, 2024 | Team Udayavani |

ಬುರ್ಕಿನಫಾಸೋ: ಪಶ್ಚಿಮ ಆಫ್ರಿಕಾದ ಬಡ ರಾಷ್ಟ್ರ ಬುರ್ಕಿನಫಾಸೋದಲ್ಲಿ ಅಲ್‌ಖೈದಾ ಬೆಂಬಲಿತ ಉಗ್ರರು ಅಟ್ಟಹಾಸ ಮೆರೆದಿದ್ದು ಒಂದೇ ಗಂಟೆಯಲ್ಲಿ 600 ಜನರನ್ನು ಕೊಂದು ಪರಾರಿಯಾಗಿದ್ದಾರೆ.

Advertisement

ಈ ಘಟನೆ ತಡವಾಗಿ ಜಗತ್ತಿನ ಗಮನಕ್ಕೆ ಬಂದಿದ್ದು ಆಗಸ್ಟ್‌ 24ರಂದು ಬೈಕಿನಲ್ಲಿ ಬಂದ ಅಲ್‌ಖೈದಾ ಬೆಂಬಲಿತ ಜಮಾತ್‌ ನುಸ್ರತ್‌ ಅಲ್‌-ಇಸ್ಲಾಂ ವಲ್‌-ಮುಸ್ಲಿಮೀನ್‌ ಸಂಘಟನೆಯ ಉಗ್ರರು ಬರ್ಸಲ್‌ಘೋ ಎಂಬ ಪಟ್ಟಣದ ಹೊರವಲಯಕ್ಕೆ ನುಗ್ಗಿ ಮನಬಂದಂತೆ ಗುಂಡು ಹಾರಿಸಿ 600 ಜನರನ್ನು ಕೊಂದಿದ್ದಾರೆ.

ಸತ್ತವರಲ್ಲಿ ಬಹುತೇಕರು ಮಹಿಳೆಯರು ಮತ್ತು ಮಕ್ಕಳು ಎಂದು ತಿಳಿದುಬಂದಿದೆ. ಪಕ್ಕದ ಮಾಲಿ ದೇಶದಲ್ಲಿ ನೆಲೆ ನಿಂತಿರುವ ಈ ಉಗ್ರರು ಬುರ್ಕಿನಫಾಸೋದಲ್ಲಿ ಸದಾ ಉಪಟಳ ನೀಡುತ್ತಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next