Advertisement

ದೇಹ ಕೊಡದ್ದಕ್ಕೆ ಅಧಿಕಾರಿಗಳ ಅಪಹರಿಸಿದ ಆದಿವಾಸಿಗಳು

02:44 PM Jul 06, 2020 | mahesh |

ಕ್ವಿಟೋ: ಕೋವಿಡ್‌ ಸೋಂಕು ಅಮೆಜಾನ್‌ ಕಾಡಿನಲ್ಲಿರುವ ಆದಿವಾಸಿಗಳನ್ನೂ ಬಿಟ್ಟಿಲ್ಲ. ಹೀಗೆ ಸೋಂಕು ಬಂದಿದ್ದ ಆದಿವಾಸಿ ಸಮುದಾಯದ ನಾಯಕನೊಬ್ಬನನ್ನು ಈಕ್ವೆಡಾರ್‌ನ ಸರಕಾರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಆದರೆ ಆತ ಮೃತಪಟ್ಟಿದ್ದ. ಬಳಿಕ ಆರೋಗ್ಯ ಇಲಾಖೆ ನಿಯಮಗಳ ಪ್ರಕಾರ ಮೃತದೇಹವನ್ನು ಕೊಡದೇ ಇದ್ದುದಕ್ಕೆ ಆದಿವಾಸಿಗಳು ಅಧಿಕಾರಿಗಳನ್ನೇ ಅಪಹರಿಸಿದ್ದಾರೆ.

Advertisement

ಒಟ್ಟು ಆರು ಮಂದಿಯನ್ನು ಆದಿವಾಸಿಗಳು ಅಪಹರಿಸಿದ್ದು, ತಮ್ಮ ನಾಯಕನ ದೇಹವನ್ನು ವಾಪಸ್‌ ಕೊಟ್ಟ ಬಳಿಕ ಅವರನ್ನು ಬಿಡುಗಡೆ ಮಾಡಿದ್ದಾರೆ. ಅಪಹರಣಕ್ಕೆ ಒಳಗಾದವರಲ್ಲಿ ಇಬ್ಬರು ಯೋಧರು, ಇಬ್ಬರು ಪೊಲೀಸ್‌ ಅಧಿಕಾರಿಗಳು, ಇಬ್ಬರು ಜನಸಾಮಾನ್ಯರು ಸೇರಿದ್ದರು. ಪೆರುವಿನ ಗಡಿ ಸನಿಹದ ಹಳ್ಳಿಯೊಂದರಿಂದ ಇವರನ್ನು ಅಪಹರಿಸಿದ್ದು, ನಾಯಕನ ಶವ ವಾಪಸ್‌ ಕೊಡದ ಹೊರತು ಬಿಡುವುದಿಲ್ಲವೆಂದು ಪಟ್ಟು ಹಿಡಿದಿದ್ದರು.

ಸುಮಾರು 600 ಮಂದಿ ಈ ಕೃತ್ಯದಲ್ಲಿ ಭಾಗಿಯಾಗಿದ್ದರು. ಆದಿವಾಸಿಗಳ ಈ ಪಟ್ಟಿನಿಂದಾಗಿ ಕೊನೆಗೆ ಸರಕಾರವೇ ಮೆತ್ತಗಾಗಿದ್ದು ಹೂಳಿದ್ದ ನಾಯಕನ ಶವವನ್ನು ಮಣ್ಣಿನಿಂದ ಮೇಲೆತ್ತಿ ಅವರಿಗೆ ನೀಡಿದೆ. ಬಳಿಕ ಅಪಹೃತರ ಬಿಡುಗಡೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next