ಭೋಪಾಲ್: ಮಧ್ಯಪ್ರದೇಶದ ಭೋಪಾಲ್‌ನ ಕೋವಿಡ್ ಸೋಂಕಿತರ ಸಾವುಗಳಲ್ಲಿ ಶೇ.60ರಷ್ಟು ಮಂದಿ ಅನಿಲ ದುರಂತದ ಸಂತ್ರಸ್ತರೇ ಇದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 1984ರ ಯೂನಿಯನ್ ಕಾರ್ಬೈಡ್ ಅನಿಲ ಸೋರಿಕೆ ದುರಂತದಲ್ಲಿ ಬದುಕುಳಿದವರ ಸಂಘಟನೆಗಳು ಭೋಪಾಲ್ ಮೆಮೋರಿಯಲ್ ಹಾಸ್ಪಿಟಲ್ ಆ್ಯಂಡ್ ರಿಸರ್ಚ್ ಸೆಂಟರ್ (ಬಿಎಂಎಚ್‌ಆರ್‌ಸಿ) ಮೇಲೆ ಗಂಭೀರ ಆರೋಪ ಹೊರಿಸಿವೆ.
Advertisement
“ಕಳೆದ 15 ದಿನ ಗಳಲ್ಲಿ, ಅನಿಲ ದುರಂತದಲ್ಲಿ ಬದುಕುಳಿದ 6 ಸಂತ್ರಸ್ತರು ಕೊರೊನಾದಿಂದ ಮೃತಪಟ್ಟಿದ್ದಾರೆ. ಸಂತ್ರಸ್ತರ ಆರೈಕೆಗೆ ಇಲ್ಲಿ ಯಾವುದೇ ಫುಲ್‌ಟೈಮ್ ವೈದ್ಯರಿಲ್ಲ’ ಎಂದು ಸುಪ್ರೀಂ ಕೋರ್ಟ್ ನಿಯೋಜಿಸಿದ್ದ ವೀಕ್ಷಣಾ ಸಮಿತಿಗೆ ಸಂಘಟನೆಗಳು ಪತ್ರದಲ್ಲಿ ದೂರಿವೆ.