Advertisement

ಮೀನುಗಾರರಿಗೆ 60 ಕೋ. ರೂ. ನಿಧಿ ಜಾರಿ: ರಾಜ್ಯ ಸರಕಾರ

08:57 PM Aug 29, 2020 | Suhan S |

ಸಿಂಧುದುರ್ಗ ಆ. 28: ಚಂಡಮಾರುತ ಮತ್ತು ಕೋವಿಡ್ ದಿಂದಾಗಿ ತೊಂದರೆಗಳನ್ನು ಎದುರಿಸುತ್ತಿರುವ ಮೀನುಗಾರರಿಗೆ ರಾಜ್ಯ ಸರಕಾರದ ವತಿಯಿಂದ 60 ಕೋಟಿ ರೂ. ನಿಧಿ ಜಾರಿಗೊಳಿಸಿದ್ದು, ಇದರಿಂದ ರಾಜ್ಯದ ಕರಾವಳಿಯ ರತ್ನಾಗಿರಿ ಸಿಂಧುದುರ್ಗ ಸೇರಿದಂತೆ 7 ಜಿಲ್ಲೆಗಳ 55,000 ಮೀನುಗಾರರಿಗೆ ಅನುಕೂಲವಾಗಲಿದೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಉದಯ್‌ ಸಾಮಂತ್‌ ಅವರು ಈ ಹಿಂದೆ ಸಿಂಧುದುರ್ಗದಲ್ಲಿ ನಡೆದ ಸಭೆಯಲ್ಲಿ ಮೀನುಗಾರರಿಗೆ ನಿಧಿ ಜಾರಿಗೊಳಿಸಬೇಕೆಂಬ ನಿರ್ಣಯ ತೆಗೆದುಕೊಳ್ಳಲಾಗಿದ್ದು ಅದರಂತೆ ಮುಖ್ಯಮಂತ್ರಿ ಅವರಲ್ಲಿ ಬೇಡಿಕೆಯನ್ನು ಇರಿಸಲಾಯಿತು ಎಂದರು. ಅದರಂತೆ ಸಿಂಧುದುರ್ಗ ರಾಪಣಕರ್‌ ಸಂಘದ 4,171 ಸದಸ್ಯರಿಗೆ 10,000 ರೂ. ಗಳ ಅನುದಾನ ಮತ್ತು ಇತರ ಮೀನುಗಾರರಲ್ಲಿ 1,564 ಯಾಂತ್ರಿಕವಲ್ಲದ ದೋಣಿ ಮಾಲಿಕರಿಗೆ ಪ್ರತ್ಯೇಕ 20,000 ರೂ. ಒಂದರಿಂದ ಎರಡು ಸಿಲಿಂಡರ್‌ ದೋಣಿ ಹೊಂದಿರುವವರಿಗೆ ತಲಾ 20,000 ರೂ., 3ರಿಂದ 4 ಸಿಲಿಂಡರ್‌ ಮತ್ತು 6 ಸಿಲಿಂಡರ್‌ ಬೋಟ್‌ಗಳಿಗೆ ಪ್ರತ್ಯೇಕ 30,000 ರೂ. ಘೋಷಿಸಲಾಗಿದೆ.

ಕೊಂಕಣದಲ್ಲಿ ಮೀನುಗಾರಿಕೆ ಉದ್ಯಮವನ್ನು ಅವಲಂಬಿಸಿ 35,000 ಮಹಿಳಾ ಮೀನುಗಾರರಿದ್ದು ಅವರಿಗೆ ಎರಡು ಕೋಲ್ಡ್ ಸ್ಟೌವ್‌ಗಳನ್ನು ಖರೀಸಲು 3,000 ರೂ. ನೀಡಲಾಗುವುದು ಎಂದು ಹೇಳಿದ್ದಾರೆ. ಫಲಾನುಭವಿಗಳ ಆಯ್ಕೆಗಾಗಿ ಜಿಲ್ಲಾ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ಮೀನುಗಾರಿಕೆ ತರಬೇತಿ ಅಧಿಕಾರಿ ಮತ್ತು ಇಬ್ಬರು ಕಾರ್ಯನಿರ್ವಾಹಕ ಸದಸ್ಯರನ್ನು ಒಳಗೊಂಡಿದೆ. ಬಯೋಮೆಟ್ರಿಕ್‌, ಆಧಾರ್‌ ಅಥವಾ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಆಧಾರದ ಮೇಲೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ಮಹಿಳಾ ಮೀನು ಮಾರಾಟಗಾರರು ಮಹಾನಗರ ಪಾಲಿಕೆಗಳು ಪುರಸಭೆಗಳು ಗ್ರಾಮ ಪಂಚಾಯಿತಿಗಳಿಂದ ದಾಖಲಾತಿಗಳನ್ನು ಸಲ್ಲಿಸಬೇಕಾಗುತ್ತದೆ.ಸದಸ್ಯರು ಸತ್ತರೆ ಅವರ ಅಧಿ ಕೃತ ಉತ್ತರಾ ಧಿಕಾರಿಗಳಿಗೆ ಅನುದಾನ ನೀಡಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next