ಹೊಳೆನರಸೀಪುರ: ನಗರ ಹಾಗೂ ಗ್ರಾಮಾಂತರ ಠಾಣೆಗಳಲ್ಲಿ ದಾಖಲಾಗಿದ್ದ 81 ಪ್ರಕರಣಗಳ ವಿಚಾರಣೆಯನ್ನು ನ್ಯಾಯಾಧೀಶ ಅರುಣ್‌ಚೌಗಲೆ ಇ ಲೋಕ್ ಅದಾಲತ್ ಮೂಲಕ ನಡೆಸಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ ನ್ಯಾಯಾಧೀಶರು 64 ಪ್ರಕರಣ ಇತ್ಯರ್ಥ ಪಡಿಸಿದರು. ಪಟ್ಟಣದ ನಗರ ಠಾಣೆಯಲ್ಲಿ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಮಾಡಲಾಗಿತ್ತು, ನ್ಯಾಯಧೀಶರು ಕೋರ್ಟ್‌ನಲ್ಲಿ ಕುಳಿತು ವಿಚಾರಣೆ ನಡೆಸಿದರು.
ಇಸ್ಪಿಟ್, ರಸ್ತೆ ಅಪಘಾತ, ಇತರೆ ಪ್ರಕರಣಗಳಡಿ ನೂರಕ್ಕೂ ಹೆಚ್ಚು ಮಂದಿ ವಿಚಾರಣೆಗೆ ಆಗಮಿಸಿದ್ದರು.ವಿಚಾರಣೆ ನಡೆದ 81 ಪ್ರಕರಣಗಳಲ್ಲಿ ನಗರ ಠಾಣೆಯ 57 ಪ್ರಕರಣಗಳಲ್ಲಿ 43 ಇತ್ಯರ್ಥಗೊಂಡು, 90 ಸಾವಿರ ರೂ. ನಗದು, ಗ್ರಾಮಾಂತರ ಠಾಣೆಯ 24 ಕೇಸಲ್ಲಿ 21 ಇತ್ಯರ್ಥಗೊಂಡು, 44 ಸಾವಿರ ರೂ. ದಂಡ ವಿಧಿಸಲಾಯಿತು.
ತಾಲೂಕಿನಲ್ಲಿ ಕೋವಿಡ್ ಕಾಣಿಸಿಕೊಂಡ ನಂತರ ನ್ಯಾಯಾಲಯಗಳು ಪೂರ್ಣ ಪ್ರಮಾಣದಲ್ಲಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಿದೆ, ಬಹುತೇಕ ಕೇಸುಗಳು ಮುಂದೂಡ ಲ್ಪಟ್ಟಿದ್ದವು. ಶನಿವಾರ ನಡೆದ ಇ ಅದಾಲತ್‌ನಲ್ಲಿ 60ಕ್ಕೂ ಹೆಚ್ಚು ಪ್ರಕರಣ
ನ್ಯಾಯಾಧೀಶರ ಮುಂದೆ ಬಂದಿದ್ದವು. ವಿಚಾರಣೆಗೆ ಆಗಮಿಸಿದ್ದ ಕಕ್ಷಿದಾರರು ಕಡ್ಡಾಯವಾಗಿ ಮಾಸ್ಕ್ ಧರಿಸುವುದರ ಜೊತೆಗೆ ಸ್ಯಾನಿಟೈಸರ್ ಕೂಡ ಮಾಡಿ ಕೋವಿಡ್ ಸೋಂಕು ಹರಡದಂತೆ ಸೂಕ್ತ ಕ್ರಮಕೈಗೊಳ್ಳಲಾಗಿತ್ತು.