ವಿಜಯಪುರ : ಅಕ್ರಮವಾಗಿ ಅಫೀಮ್ ಗಿಡದ ಕಡ್ಡಿಪುಡಿ, ಪೌಡರ್ ಸಾಗಿಸಿದ ಹರಿಯಾಣ ಮೂಲಕ ವ್ಯಕ್ತಿಗೆ ವಿಜಯಪುರ ಜಿಲ್ಲಾ ನ್ಯಾಯಾಲಯ 6 ವರ್ಷ ಕಠಿಣ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ, ಆದೇಶಿಸಿದಿದೆ.
ಹರಿಯಾಣದ ಅಂಬಾಲಾ ಗ್ರಾಮದ ಗಣೇಶ ದಮರ ಎಂಬಾತ ಅಫೀಮಿನ ಕಡ್ಡಿ ಹಾಗೂ ಪೌಡರ್ ಸಾಗಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆವಿಧಿಸಿದೆ.
2018 ರ ಮಾರ್ಚ 29 ರಂದು ಟ್ರಾನ್ಸಪೋರ್ಟ್ ವಾಹನದಲ್ಲಿ 29.800 ಕೆ.ಜಿ. ಗ್ರಾಂ ಅಫೀಮ ಗಿಡದ ಕಡ್ಡಿಪುಡಿ, ಪೌಡರ್ ಸಾಗಿಸುವಾಗ ಇಂಡಿ ತಾಲೂಕಿನ ಧೂಳಖೇಡ ಬಳಿ ಹಳೆಯ ವಾಣಿಜ್ಯ ಇಲಾಖೆ ಬಳಿ ತಪಾಸಣೆ ನಡೆಸಲಾಯಿತು. ಈ ವೇಳೆ ತನಿಖಾ ಠಾಣೆ ಎದುರು ಅಬಕಾರಿ ನಿರೀಕ್ಷಕ ಎ.ಎ.ಮುಜಾವರ ತಪಾಸಣೆ ಮಾಡಿದಾಗ ವಾಹನದಲ್ಲಿದ್ದ ಅಫೀಮಿನ ವಸ್ತುಗಳು ಪತ್ತೆಯಾಗಿದ್ದು, ಗಣೇಶ ವಿರುದ್ಧ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ಕೆಗೆತ್ತಿಕೊಂಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಾಜಿ ಅನಂತ ನಾಲವಾಡೆ ಆರೋಪ ಸಾಬಿತಾದ ಹಿನ್ನಲೆಯಲ್ಲಿ 6 ವರ್ಷ ಜೈಲು ಶಿಕ್ಷೆ, 50 ಸಾವಿರ ರೂ ದಂಡು ವಿಧಿಸಿ ಆದೇಶಿಸಿದ್ದಾರೆ.
ಅಬಕಾರಿ ಇನ್ಸಪೆಕ್ಟರ್ ಎಂ.ಎಚ್.ಪಡಸಲಗಿ ತಪಾಸಣೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಸ್.ಎಚ್.ಹಕೀಮ್ ವಾದ ಮಂಡಿಸಿದ್ದರು.