Advertisement

ಬಕ್ರೀದ್‌ ವೇಳೆ 6 ಸಾವಿರ ಹಸು ರಕ್ಷಣೆ: ಚವ್ಹಾಣ್‌

06:18 PM Aug 12, 2021 | Team Udayavani |

ಮೈಸೂರು: ಪಶು ಸಂಗೋಪನಾ ಇಲಾಖೆ ಜಾನುವಾರುಗಳ ವಧೆ ತಡೆಯಲು ಬದ್ಧವಾಗಿದ್ದು, ಬಕ್ರೀದ್‌ ವೇಳೆ ರಾಜ್ಯದಲ್ಲಿ 6 ಸಾವಿರ ಹಸುಗಳನ್ನು ರಕ್ಷಣೆ ಮಾಡಲಾಗಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ತಿಳಿಸಿದರು.

Advertisement

ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಬುಧವಾರ ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಾದ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದರು.

ವೈದ್ಯರ ನಿಯೋಜನೆ: ಗೋಹತ್ಯೆ ನಿಷೇಧ ಜಾರಿಗೊಳಿಸಿದ ಬಳಿಕ ಬಕ್ರೀದ್‌ ವೇಳೆ ಚೆಕ್‌ ಪೋಸ್ಟ್‌ಗಳಲ್ಲಿ ಇಲಾಖಾ ವೈದ್ಯರನ್ನು ನಿಯೋಜಿಸಿದ್ದೆವು. ಜತೆಗೆ ಜಾನುವಾರು ಅಕ್ರಮ ಸಾಗಣೆ ತಡೆಯಲು ಆಯಾಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ ಪರಿಣಾಮ 6 ಸಾವಿರ ಹಸುಗಳ ಜೀವ ಉಳಿಸಿದಂತಾಗಿದೆ ಎಂದರು. ಗೋ ಮಾತಾ ನಮ್ಮ ಮಾತಾ ಘೋಷವಾಕ್ಯ ಇದೆ. ಗೋಮಾತೆ ಕಸಾಯಿಖಾನೆಗೆ ಹೋಗದಂತೆ ತಡೆದು ರಕ್ಷಿಸುವುದು ನಮ್ಮ ಜವಾಬ್ದಾರಿ ಎಂದರು. ನನಗೆ ಪಶು ಸಂಗೋಪನಾ ಇಲಾಖೆ ಕೊಟ್ಟಿರುವುದು ಖುಷಿ ತಂದಿದೆ. ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ದರ್ಶನ, ಆಶೀರ್ವಾದ, ಪ್ರಸಾದ ಸ್ವೀಕರಿಸಿದ್ದು, ನಾಳೆಯಿಂದ ಇಲಾಖೆ ಕಾರ್ಯ
ಆರಂಭಿಸುವುದಾಗಿ ಸಚಿವರು ತಿಳಿಸಿದರು.

ಒಪ್ಪಿಗೆ ಸಿಕ್ಕಿದೆ: ಇಲಾಖೆ ವತಿಯಿಂದ ಪ್ರತಿ ಜಿಲ್ಲೆಗೆ ಒಂದು ಗೋಶಾಲೆ ಮಂಜೂರು ಮಾಡಲು ಒಪ್ಪಿಗೆ ಸಿಕ್ಕಿದೆ. ಶೀಘ್ರ ಎಲ್ಲಾ ಜಿಲ್ಲೆಗಳಲ್ಲೂ ಗೋಶಾಲೆ ಸ್ಥಾಪನೆ ಮಾಡುತ್ತೇವೆ. ದೇಶದಲ್ಲಿ ಮೊದಲ ಬಾರಿಗೆ ಸ್ಥಾಪಿಸಿದ ಪ್ರಾಣಿ ಸಾಕಾಣಿಕ ಕೇಂದ್ರಕ್ಕೆ 1 ತಿಂಗಳಲ್ಲೇ 10 ಸಾವಿರ
ಕರೆ ಬಂದಿದೆ. ಈ ಪೈಕಿ ಶೇ.80 ಸಮಸ್ಯೆ ಬಗೆಹರಿಸಲಾಗಿದೆ. ಜತೆಗೆ ಜಾನುವಾರಗಳ ಆರೋಗ್ಯ ತಪಾಸಣೆ ಹಾಗೂ ತುರ್ತು ಚಿಕಿತ್ಸೆಗಾಗಿ ಪಶು ಸಂಜೀವಿನಿ ಎಲ್ಲಾ ಜಿಲ್ಲೆಗಳಿಗೂ ಪಶು ಆ್ಯಂಬುಲೆನ್ಸ್‌ ನೀಡಲಾಗಿದೆ.

ಇದನ್ನೂ ಓದಿ:ಪ್ರವಾಸಿಗರನ್ನು ಸ್ವಾಗತಿಸುತ್ತಿದೆ ಪ್ರವಾಸಿಗರ ಫೇವರೇಟ್ ಗೋವಾ | ಭೇಟಿಗೆ ಷರತ್ತುಗಳು ಅನ್ವಯ

Advertisement

ಶೀಘ್ರವೇ 25 ಹೊಸ ಆ್ಯಂಬುಲೆನ್ಸ್‌ ಬರಲಿದ್ದು, ಎಲ್ಲಾ ಜಿಲ್ಲೆಗಳಿಗೂ ನೀಡಲಾಗುವುದು ಎಂದರು. ಅಸಮಾಧಾನವಿಲ್ಲ: ಖಾತೆ ಅಸಮಾಧಾನ ಬಗ್ಗೆ ಪ್ರತಿಕ್ರಿಯಿಸಿ,ಖಾತೆಹಂಚಿಕೆಯಲ್ಲಿಮತ್ತುಖಾತೆಯಲ್ಲಿ ಚಿಕ್ಕದು ದೊಡ್ಡದು ಎಂಬುದಿಲ್ಲ. ಪಕ್ಷದೊಳಗೆ ಅಸಮಾಧಾನವೂ ಇಲ್ಲ. ನಮ್ಮದು ರಾಷ್ಟ್ರೀಯ ಪಕ್ಷ. ರಾಜ್ಯ, ಕೇಂದ್ರದ ನಾಯಕರು ಅಸಮಾಧಾನ ಸರಿಪಡಿಸುತ್ತಾರೆ. ನನಗೆ ಸಿಕ್ಕಿರುವ ಖಾತೆಯಿಂದ ಖುಷಿ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಇದೇ ವೇಳೆ ಸಚಿವ ಪ್ರಭು ಚವ್ಹಾಣ್‌ ತಮ್ಮ ಮಗಳ ವಿವಾಹಕ್ಕೆ ಆಗಮಿಸುವಂತೆ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿಗೆ ಆಹ್ವಾನ ಪತ್ರ ನೀಡಿದರು

ಗೋ ಹತ್ಯೆ ನಿಷೇಧ ಪೇಪರ್‌ಗೆ ಸೀಮಿತವಲ್ಲ
ರಾಜ್ಯದಲ್ಲಿ ಜಾರಿಗೆ ತಂದಿರುವ ಗೋ ಹತ್ಯೆ ನಿಷೇಧ ಪೇಪರ್‌ಗೆ ಸಿಮೀತವಾಗಿಲ್ಲ.ಕೆಲವರುಕೋರ್ಟ್‌ಗೆ ಹೋಗಿದ್ದಾರೆ. ಗೋಹತ್ಯೆ ನಿಷೇಧಿಸಲು3 ವರ್ಷ ಜೈಲು,10 ಲಕ್ಷ ದಂಡಕಠಿಣ ಕಾನೂನು ರೂಪಿಸಿದ್ದೇವೆ. ನಿಯಂತ್ರಣಕ್ಕೂ ಬಂದಿದೆ.ಕೆಲವು ಭಾಗದಲ್ಲಿ ನಡೆಯುತ್ತಿರುವ ಅಕ್ರಮ ಮಾಂಸ ಮಾರಾಟ ತಡೆಯಲು ಗೃಹ ಸಚಿವರೊಂದಿಗೆ ಮಾತಾಡುವುದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next