Advertisement

ಸುದ್ದಿವಾಹಿನಿ ಕ್ಯಾಮರಾಮನ್‌ ಸೇರಿ 6 ಮಂದಿಗೆ ಸೋಂಕು

05:43 AM May 28, 2020 | Lakshmi GovindaRaj |

ಬೆಂಗಳೂರು: ನಗರದಲ್ಲಿ ಬುಧವಾರ ಸುದ್ದಿವಾಹಿನಿ ಕ್ಯಾಮರಾಮನ್‌, ಪೊಲೀಸ್‌ ಎಎಸ್‌ಐ ಸೇರಿ 6 ಮಂದಿಗೆ ಕೋವಿ‌ಡ್ 19 ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 282ಕ್ಕೆ ಏರಿಕೆಯಾಗಿದೆ. ಸದ್ಯ 120 ಸಕ್ರಿಯ  ಪ್ರಕರಣಗಳಿವೆ.

Advertisement

ತಮಿಳುನಾಡಿನಲ್ಲಿ ಸಂಬಂಧಿಕರೊಬ್ಬರ ಅಂತ್ಯಕ್ರಿಯೆಗೆ ಹೋಗಿ ಹೋಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದ ಸುದ್ದಿ ವಾಹಿನಿಯೊಂದರ ಕ್ಯಾಮರಾಮನ್‌ (ರೋಗಿ ಸಂಖ್ಯೆ -2334) ಅವರ 32 ವರ್ಷದ ಮಗ (ರೋಗಿ ಸಂಖ್ಯೆ  -2336)ನಲ್ಲಿ ಸೋಂಕು ಪತ್ತೆಯಾಗಿದೆ. ಹೆಬ್ಬಗೋಡಿ ಠಾಣೆ ಎಎಸ್‌ಐ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಆನೇಕಲ್‌ನ ಹೆಬ್ಬಗೋಡಿ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನಕ್ಕೆ ಹೋಗಿ ಸಿಕ್ಕಿಬಿದ್ದ ಕಳ್ಳರನ್ನು ಬಂಧಿಸಿದ್ದ 30 ಪೊಲೀಸರನ್ನು  ಕ್ವಾರಂಟೈನ್‌ ಮಾಡಲಾಗಿತ್ತು. ಇವರಲ್ಲಿ ಈಗಾಗಲೇ ಒಬ್ಬರು ಕಾನ್ಸ್‌ಸ್ಟೇಬಲ್‌ಗೆ ಸೋಂಕುದೃಢಪಟ್ಟಿತ್ತು. ಬುಧವಾರ ಎಎಸ್‌ಐಗೂ ಸೋಂಕಿರುವುದು ದೃಢಪಟ್ಟಿದೆ.

ವಿದೇಶ, ಹೊರರಾಜ್ಯದಿಂದ ಬಂದ ಮೂವರಿಗೆ ಸೋಂಕು: ಮತ್ತೂಂದೆಡೆ ನೇಪಾಳದಿಂದ ಬಂದ 22 ವರ್ಷದ ಯುವತಿ, ಯುಎಇನಿಂದ ಬಂದ 28 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ. ಇವರೆಲ್ಲಾ ಹೋಟೆಲ್‌  ಕ್ವಾರಂಟೈನ್‌ನಲ್ಲಿದ್ದರು. ಮತ್ತೂಂದು ಪ್ರಕರಣದಲ್ಲಿ ಮಧ್ಯಪ್ರದೇಶದಿಂದ ಬಂದಿದ 25 ವರ್ಷದ ಯುವತಿಗೆ ಸೋಂಕು ದೃಢಪಟ್ಟಿದೆ. ಇವರೂ ಹೋಟೆಲ್‌ ಕ್ವಾರಂಟೈನ್‌ನಲ್ಲಿದ್ದರು. ಹೀಗಾಗಿ, ಈ ಸೋಂಕಿ ತರಿಂದ ಯಾರಿಗೂ ಸೋಂಕು  ಹರಡಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದಾರೆ. ನಗರದಲ್ಲಿ ಬುಧ ವಾರ ಇಬ್ಬರು ಸೋಂಕಿತರು ಗುಣಮುಖರಾಗಿದ್ದು, ಒಟ್ಟಾರೆ ಗುಣಮುಖರಾದವರ ಸಂಖ್ಯೆ 151ಕ್ಕೆ ಏರಿಕೆಯಾಗಿದೆ.

ಕಂಟೈನ್ಮೆಂಟ್‌ ವ್ಯಾಪ್ತಿಗೆ ರಾಮಮೂರ್ತಿ ನಗರ: ತಮಿಳುನಾಡಿನಿಂದ ಹಿಂದಿರುಗಿದ ಇಬ್ಬರಲ್ಲಿ ಕೋವಿ‌ಡ್ 19 ದೃಢಪಟ್ಟ ಹಿನ್ನೆಲೆಯಲ್ಲಿ ಮಹದೇವಪುರದ ರಾಮಮೂರ್ತಿ ನಗರವನ್ನು ಕಂಟೈನ್ಮೆಂಟ್‌ ವ್ಯಾಪ್ತಿಗೆ ಸೇರಿಸಲಾಗಿದೆ. ಇನ್ನು ಕಳೆದ  28 ದಿನಗಳಿಂದ ಯಾವುದೇ ಸೋಂಕು ದೃಢಪಡದ ದೀಪಾಂಜಲಿ ನಗರ ಕಂಟೈನ್ಮೆಂಟ್‌ ಝೊನ್‌ ಮುಕ್ತವಾಗಿದೆ. ಸದ್ಯ ನಗರದಲ್ಲಿ ಒಟ್ಟು 25 ಕಂಟೈನ್ಮೆಂಟ್‌ ವಾರ್ಡ್‌ಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next