ಕೊಪ್ಪಳ: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿನ ಆರ್ಭಟ ಮುಂದುವರೆದಿದ್ದು, ಗುರುವಾರ ಸೋಂಕಿಗೆ ಆರು ಜನರು ಸಾವನ್ನಪ್ಪಿದ್ದಾರೆ.
ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿಗೆ ಸಾವಿಗೀಡಾದವರ ಸಂಖ್ಯೆಯು 171ಕ್ಕೆ ಏರಿಕೆಯಾಗಿದೆ.
ಇನ್ನೂ ಇದೇ ದಿನವೇ 153 ಜನಕ್ಕೆ ಸೋಂಕು ತಗುಲಿದ್ದು, ಈ ಮೂಲಕ ಒಟ್ಟಾರೆ ಸಂಕಿತರ ಸಂಖ್ಯೆಯು 7312ಕ್ಕೆ ಏರಿಕೆಯಾಗಿದೆ. ಇದು ಜಿಲ್ಲೆಯ ಜನರಲ್ಲಿ ಆತಂಕ ತರಿಸಿದೆ.
ಜಿಲ್ಲೆಯಲ್ಲಿ ಗುರುವಾರ ದೃಢಪಟ್ಟ ಸೋಂಕಿತರ ಪೈಕಿ ಗಂಗಾವತಿ ತಾಲೂಕಿನಲ್ಲಿ 69 ಜನ, ಕೊಪ್ಪಳ ತಾಲೂಕಿನಲ್ಲಿ 50 ಜನ, ಕುಷ್ಟಗಿ ತಾಲೂಕಿನಲ್ಲಿ 16 ಜನ, ಯಲಬುರ್ಗಾ ತಾಲೂಕಿನಲ್ಲಿ 17 ಸೇರಿ ಇಂದು ಹೊಸದಾಗಿ 152 ಜನಕ್ಕೆ ಸೋಂಕು ತಗುಲಿದೆ.
ಇನ್ನೂ ಒಟ್ಟಾರೆ ಈವರೆಗಿನ ಸೋಂಕಿತರ ಲೆಕ್ಕಾಚಾರ ಗಮನಿಸಿದರೆ, ಗಂಗಾವತಿ-3571, ಕೊಪ್ಪಳ-2240, ಕುಷ್ಟಗಿ-854, ಯಲಬುರ್ಗಾ-647 ಸೇರಿ 17312 ಜನರಿಗೆ ಸೋಂಕು ತಗುಲಿದೆ.
ಇವರಲ್ಲಿ 171 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಇನ್ನೂ ಇದೇ ದಿನವೇ ೨45 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳಿದ್ದಾರೆ. ಒಟ್ಟಾರೆ ಈ ವರೆಗೂ 5345 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳಿದ್ದಾರೆ.
ಇನ್ನೂ ಇದೇ ದಿನ 219 ಜನರು ಹೋಂ ಐಸೋಲೇಷನ್‌ಗೆ ಒಳಗಾಗಿದ್ದರೆ, ಒಟ್ಟಾರೆ ಇದುವರೆಗೂ 1540 ಜನರು ಹೋಂ ಐಸೋಲೇಷನ್‌ಗೆ ಒಳಗಾಗಿದ್ದಾರೆ.