ಜಮ್ಮು: ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಒಂದೇ ಕುಟುಂಬದ ಆರು ಜನರ ಶವ ಜಮ್ಮುವಿನ ಮನೆಯೊಂದರಲ್ಲಿ ಬುಧವಾರ (ಆಗಸ್ಟ್ 17) ಪತ್ತೆಯಾಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಕರ್ತವ್ಯನಿರತ ಪೊಲೀಸ್ ಮೇಲೆ ಹಲ್ಲೆ ಪ್ರಕರಣ : ನಗರಸಭೆಯ ಕಾಂಗ್ರೇಸ್ ಸದಸ್ಯನ ವಿರುದ್ಧ FIR
ಘಟನೆಯಲ್ಲಿ ಸಕೀನಾ ಬೇಗಂ, ಆಕೆಯ ಇಬ್ಬರು ಹೆಣ್ಣುಮಕ್ಕಳಾದ ನಸೀಮಾ ಅಖ್ತರ್, ರುಬೀನಾ ಬಾನು, ಪುತ್ರ ಝಾಪರ್ ಸಲೀಂ ಮತ್ತು ಸಂಬಂಧಿಗಳಾದ ನೂರ್ ಉಲ್ ಹಬೀಬ್, ಸಜಾದ್ ಅಹ್ಮದ್ ಎಂದು ಗುರುತಿಸಲಾಗಿದೆ ಎಂಬುದಾಗಿ ಪೊಲೀಸರು ಪಿಟಿಐಗೆ ಮಾಹಿತಿ ನೀಡಿದ್ದಾರೆ.
ಜಮ್ಮುವಿನ ಸಿದ್ರಾ ಪ್ರದೇಶದಲ್ಲಿರುವ ಮನೆಯಲ್ಲಿ ಆರು ಶವಗಳು ಪತ್ತೆಯಾಗಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ, ಪೋಸ್ಟ್ ಮಾರ್ಟ್ಂ ವರದಿ ಬಂದ ನಂತರ ಇದು ಕೊಲೆಯೋ ಅಥವಾ ಸಾಮೂಹಿಕ ಆತ್ಮಹತ್ಯೆಯೋ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.