ಬೆಂಗಳೂರು: ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ದೇಶದಲ್ಲಿ ರಿಕಾ ಸಂಶೋಧನಾ ಸಂಸ್ಥೆಯು ದೇಶದಲ್ಲಿ ಮೊದಲ ಬಾರಿಗೆ ಅಣಬೆಯ ಬಳಕೆಯ ಅವಧಿ ಹೆಚ್ಚಿಸುವುದರ ಜತೆಗೆ ಅದರಲ್ಲಿನ ವಿಟಮಿನ್ ಡಿ ಪುಷ್ಟೀಕರಿಸುವ ನೂತನ ತಂತ್ರಜ್ಞಾನ “ಯುವಿಬಿ’ (ನೇರಳಾತೀತ ಬಿ ಕಿರಣ) ಎಕ್ಸ್‌ಪೋಸರ್‌ನ್ನು ಸಂಶೋಧನೆ ನಡೆಸಿದ್ದು ಮಂಗಳವಾರ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.
ಅಣಬೆಯನ್ನು ಬಹಳ ಸಮಯ ಶೇಖ ರಿಸಿಡುವುದು ಜತೆಗೆ ಅದರಲ್ಲಿನ ವಿಟಮಿನ್ ಡಿಯನ್ನು ಪುಷ್ಟೀಕರಣಗೊಳಿ ಸುವುದು ಸಲುಭದ ಮಾತಲ್ಲ. ಏಕೆಂದರೆ ಅಣಬೆಯ ಮೇಲೆ ನಿಗದಿತ ಪ್ರಮಾಣದ ಸೂರ್ಯನ ಕಿರಣ ನಿಗದಿತ ಅವಧಿಯಲ್ಲಿ ಬಿದ್ದರೆ ಮಾತ್ರ ಅದರಲ್ಲಿನ ವಿಟಮಿನ್ ಡಿ ಪುಷ್ಟೀಕರಣಗೊಳ್ಳುತ್ತದೆ.
ಇನ್ನೂ ಅಣಬೆಯ ಬಳಕೆಯ ಅವಧಿ ಹೆಚ್ಚೆಂದರೆ 5ರಿಂದ 9 ದಿನಗಳು ಮಾತ್ರ. ಅಣಬೆಯ ಅಲ್ಪಾಯುನಿಂದಾಗಿ ಬೇಡಿಕೆಯಿದ್ದರೂ ಅನೇಕರು ಈ ಉದ್ಯಮಕ್ಕೆ ಕೈ ಹಾಕಲು ಹಿಂದೇಟು ಹಾಕುತ್ತಾರೆ. ಹಾಗಾಗಿ ಅಣಬೆ ಬಳಕೆಯ ಅವಧಿ ಹೆಚ್ಚಿಸಿ, ವಿಟಮಿನ್ ಡಿ ಪುಷ್ಟೀಕರಿಸಲು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಅಣಬೆ “ಯುವಿಬಿ’ ಎಕ್ಸ್ ಪೋಸರ್ ತಂತ್ರಜ್ಞಾನವನ್ನು ಸತತ ಒಂದು ವರ್ಷಗಳ ಸಂಶೋಧನೆ ನಡೆಸಿ ಆವಿಷ್ಕಾರ ಮಾಡಿದ್ದಾರೆ.
ಸಾಮಾನ್ಯವಾಗಿ ಶೇ.85 ತೇವಾಂಶದಲ್ಲಿ ಅಣಬೆಗಳನ್ನು ಹೆಚ್ಚೆಂದರೆ 5 ರಿಂದ 7ದಿನಗಳ ಇಡಬಹುದು. ಆದರೆ “ಯುವಿಬಿ’ ಎಕ್ಸ್‌ಪೋಸರ್ ಮೂಲಕ ಸಂಸ್ಕರಣೆ ಮಾಡಿದ ಡ್ರೈ ಅಣಬೆ 6 ತಿಂಗಳ ಕಾಲ ಬಳಕೆ ಯೋಗ್ಯವಾಗಿದೆ.
ಪ್ರಯೋಜನವೇನು? : ಪುಡಿಮಾಡಿದ ವಿಟಮಿನ್ ಡಿ ಪುಷ್ಟೀಕರಿಸಿ ಪುಡಿ ಮಾಡಿದ ಅಣಬೆಗಳನ್ನು ಸಣ್ಣ ಸಣ್ಣ ಮಾತ್ರೆಗಳ ರೂಪದಲ್ಲಿ, ದೈನಂದಿನ ಆಹಾರ ಉತ್ಪನ್ನಗಳಾದ ಅಣಬೆ ರಸಂ ಅಥವಾ ರಾಗಿ ಮುದ್ದೆ ಜತೆ ಸೇವಿಸಬಹುದು ಇಲ್ಲವೇ ಕುದಿಯುವ ನೀರಿನೊಂದಿಗೆ ಮಿಶ್ರಣ ಮಾಡುವ ಮೂಲಕ ಸೂಪ್ ಆಗಿ ಸೇವಿಸಬಹುದು. ದೈನಂದಿನ ಆಹಾರ ಮೂಲಕ ವಿಟಮಿನ್ ಡಿ ಸತ್ವವು ದೇಹವನ್ನು ಸೇರಲಿದೆ.
ಐಐಎಚ್‌ಆರ್ “ಯುವಿಬಿ’ ಎಕ್ಸ್‌ಪೋಸರ್ ತಂತ್ರಜ್ಞಾನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಸಂಸ್ಥೆಯೇ ಆಸಕ್ತರಿಗೆ ತರಬೇತಿ ನೀಡಿ, ತಂತ್ರಜ್ಞಾನವನ್ನು ಮಾರಾಟ ಮಾಡಲಿದೆ.
–ಡಾ. ಚಂದ್ರಶೇಖರ್, ಹಿರಿಯ ವಿಜ್ಞಾನಿ, ಅಣಬೆ ಪ್ರಯೋಗಾಲಯ ಐಐಎಚ್‌ಆರ್