Advertisement

ಉ.ಪ್ರ: ಮಹಿಳೆ ಮೇಲೆ 6 ಕಾಮಾಂಧರಿಂದ ಗ್ಯಾಂಗ್‌ ರೇಪ್‌; ಪತಿಗೆ ಹಲ್ಲೆ

04:04 PM Apr 29, 2017 | Team Udayavani |

ಮುಜಫ‌ರನಗರ : ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಆರು ಮಂದಿ ಕಾಮುಕರು 26ರ ಹರೆಯದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಇದಕ್ಕೆ ಪ್ರತಿರೋಧ ಒಡ್ಡಿದ ಆಕೆಯ ಪತಿಯ ಮೇಲೆ ಹಲ್ಲೆಗೈದು ಪರಾರಿಯಾದ ಘಟನೆ ವರದಿಯಾಗಿದೆ.

Advertisement

ಶಾಮ್ಲಿ ಜಿಲ್ಲೆಯ ಕೈರಾನಾದಲ್ಲಿ ಮನೆಯೊಂದಕ್ಕೆ ನುಗ್ಗಿದ ಆರು ಮಂದಿ ಕಾಮಾಂಧರು ಈ ಪೈಶಾಚಿಕ ಕೃತ್ಯ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

ಮಹಿಳೆಯ ಸೋದರ ಸಂಬಂಧಿಯೊಬ್ಬರು ನೀಡಿದ ದೂರಿನ ಪ್ರಕಾರ ಪೊಲೀಸರು ಘಟನೆಯ ಬಗ್ಗೆ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

ಘಟನೆಯ ಬಳಿಕ ತಲೆಮರೆಸಿಕೊಂಡಿರುವ ಆರು ಮಂದಿ ಕಾಮಾಂಧರಿಗಾಗಿ ಪೊಲೀಸರು ವ್ಯಾಪಕ ಶೋಧ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next