Advertisement

ಡಿಜಿಟಲ್‌ ಗ್ರಂಥಾಲಯಕ್ಕೆ 6ಲಕ್ಷ ಸದಸ್ಯತ್ವ

08:11 PM Nov 21, 2020 | Suhan S |

ಬಳ್ಳಾರಿ: ಪುಸ್ತಕಗಳು ಮನುಷ್ಯನನ್ನು ಸನ್ಮಾರ್ಗದತ್ತ ಒಯ್ಯುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತವೆ. ಎಲ್ಲಾ ವಿದ್ಯಾರ್ಥಿಗಳು ಗ್ರಂಥಾಲಯವನ್ನು ಹಾಗೂ ಡಿಜಿಟಲ್‌ ಸೇವೆ ಬಳಸಿಕೊಳ್ಳಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣವರ್‌ ಹೇಳಿದರು.

Advertisement

ಇಲ್ಲಿನ ನಗರ ಕೇಂದ್ರ ಗ್ರಂಥಾಲಯದಲ್ಲಿಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ನಡೆದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹಅಂಗವಾಗಿ ಡಿಜಿಟಲ್‌ ಗ್ರಂಥಾಲಯದ ಉಚಿತ ಸದಸ್ಯತ್ವ ನೋಂದಣಿ ಅಭಿಯಾನ ಹಾಗೂ ಪುಸ್ತಕ ಪ್ರದರ್ಶನದ ಸಮಾರೋಪ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ನಗರ ಕೇಂದ್ರ ಗ್ರಂಥಾಲಯದ ಗ್ರಂಥಾಲಯಾಧಿಕಾರಿ ಬಿ.ಕೆ. ಲಕ್ಷ್ಮೀ ಕಿರಣ್‌ ಮಾತನಾಡಿ, ಈಗಾಗಲೇ ರಾಜ್ಯದಲ್ಲಿ 6 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಡಿಜಿಟಲ್‌ ಗ್ರಂಥಾಲಯದ ಸದಸ್ಯತ್ವ ನೋಂದಣಿಯಾಗುವ ಮುಖಾಂತರಇದರ ಉಪಯೋಗ ಪಡೆಯುತ್ತಿದ್ದಾರೆ. ನಮ್ಮ ಗ್ರಂಥಾಲಯದಲ್ಲಿ ಐಎಎಸ್‌ ಮತ್ತು ಕೆಎಎಸ್‌,ಸ್ಪರ್ಧಾತ್ಮಕ ವಿಭಾಗವನ್ನು ಮುಂದಿನ ದಿನಗಳಲ್ಲಿ ಪ್ರಾರಂಭಿಸಲಿದ್ದು, ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ನಗರ ಗ್ರಂಥಾಲಯ ಪ್ರಾಧಿಕಾರ ಸಮಿತಿ ಸದಸ್ಯ ನಿಷ್ಠಿರುದ್ರಪ್ಪ ಮಾತನಾಡಿ, ನನ್ನ ಬಾಲ್ಯದ ದಿನಗಳಲ್ಲಿ ಗ್ರಂಥಾಲಯದ ಸದ್ಬಳಕೆಯಿಂದ ಓದುವ ಹವ್ಯಾಸ ರೂಢಿಸಿಕೊಂಡಿದ್ದರಿಂದ ಸುಮಾರು 25 ರಿಂದ30 ಕೃತಿಗಳನ್ನು ರಚಿಸುವಲ್ಲಿ ಪ್ರೇರಣೆಯಾಯಿತು ಎಂದರು.

ವೀರಶೈವ ಕಾಲೇಜು ನಿವೃತ್ತ ಗ್ರಂಥಪಾಲಕ ಡಾ| ಬಿ.ಆರ್‌. ಗದಗಿನ್‌ ಮಾತನಾಡಿ, ವಿದ್ಯಾರ್ಥಿಗಳುಎಲ್ಲಾ ವಯೋಮಾನದ ಓದುಗರು ಡಿಜಿಟಲ್‌ಗ್ರಂಥಾಲಯದ ಸದಸ್ಯತ್ವ ನೋಂದಣಿಯಾಗುವ ಮುಖಾಂತರ ರಾಜ್ಯದಲ್ಲಿ ಕೋವಿಡ್‌-19ರ ಸಮಯದಲ್ಲಿ ಸಾಕಷ್ಟು ಜನ ಇದರ ಉಪಯೋಗ ಪಡೆದುಕೊಂಡಿದ್ದಾರೆ. ಆಧುನಿಕ ಯುಗದಲ್ಲಿ ಡಿಜಟಲ್‌ ಗ್ರಂಥಾಲಯದ ಅವಶ್ಯಕತೆಯಿದ್ದು, ಎಲ್ಲಾ ಓದುಗರು ಇದರ ಸದ್ಬಳಕೆಮಾಡಿಕೊಳ್ಳಬೇಕು ಎಂದರು. ನಗರ ಗ್ರಂಥಾಲಯ ಪ್ರಾಧಿಕಾರಸಮಿತಿ ಸದಸ್ಯೆ ರೇಣುಕಾ ದೂರ್ವಾಸ, ನಗರ ಗ್ರಂಥಾಲಯ ಪ್ರಾಧಿಕಾರ ಸಮಿತಿ ಸದಸ್ಯರು ಹಾಗೂ ಪೂರ್ವವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಲಿಂಗಮೂರ್ತಿ ಮಾತನಾಡಿದರು.

Advertisement

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಅಂಗವಾಗಿ ಉತ್ತಮ ಸಿಬ್ಬಂದಿ ಸೇವಾ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಸಹ ಗ್ರಂಥಪಾಲಕ ಆರ್‌. ಶಾರದ ಅವರನ್ನು ಸನ್ಮಾನಿಸಲಾಯಿತು. ಗ್ರಂಥಾಲಯ ಸಹಾಯಕ ಕೆ.ಸಿದ್ದಪ್ಪ ಕಾರ್ಯಕ್ರಮ ನಿರೂಪಿಸಿದರು. ಸಹ ಗ್ರಂಥಪಾಲಕರು ಕೊಳ್ಳಿ ಬಸವರಾಜ ಸ್ವಾಗತಿಸಿದರು. ಗ್ರಂಥಾಲಯ ಸಹಾಯಕ ಎಸ್‌. ಸಂತೋಷಕುಮಾರ್‌, ಎಸ್‌.ಟಿ. ಪ್ರಭಾಕರ್‌ ಸೇರಿದಂತೆ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next