Advertisement

ಟ್ರಕ್ಕುಗಳ ಮುಖಾಮುಖೀ ಢಿಕ್ಕಿ: 6 ಸಾವು; ಆರು ಮಂದಿ ಗಂಭೀರ

02:02 PM Jan 25, 2019 | Team Udayavani |

ಸುರಿ, ಪಶ್ಚಿಮ ಬಂಗಾಲ : ಪಶ್ಚಿಮ ಬಂಗಾಲದ ಬೀರ್‌ ಭೂಮ್‌ನಲ್ಲಿ ಇಂದು ಶುಕ್ರವಾರ ಎರಡು ಟ್ರಕ್ಕುಗಳು ಮುಖಾಮುಖೀ ಢಿಕ್ಕಿಯಾದ ಭೀಕರ ಅವಘಡದಲ್ಲಿ ಆರು ಮಂದಿ ಮೃತಪಟ್ಟು  ಇತರ ಆರು ಮಂದಿ ಗಂಭೀರ ಗಾಯಗೊಂಡರೆಂದು ಪೊಲೀಸರು ತಿಳಿಸಿದ್ದಾರೆ.

Advertisement

ಸುರಿ – ದುರ್ಗಾಪುರ ರಸ್ತೆಯಲ್ಲಿ ದುಬ್ರಜಪುರ ಪೊಲೀಸ್‌ ಠಾಣೆ ವ್ಯಾಪಕ್ತಿಯ ಗೋಪಾಲಪುರ ಗ್ರಾಮದಲ್ಲಿ ಈ ಅವಘಡ ನಡೆಯಿತು.

ಖಾಲಿ ಟ್ರಕ್ಕಿನಲ್ಲಿ 12 ಮಂದಿ ಪ್ರಯಾಣಿಸುತ್ತಿದ್ದರು. ಎದುರುಗಡೆಯಿಂದ ಧಾವಿಸಿ ಬರುತ್ತಿದ್ದ ಸರಕು ತುಂಬಿದ ಟ್ರಕ್‌, ಈ ಟ್ರಕ್ಕಿಗೆ ನೇರವಾಗಿ ಢಿಕ್ಕಿ ಹೊಡೆಯಿತು. 

ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ ಉಳಿದ ಇಬ್ಬರು ಸುರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಗಂಭೀರ ಸ್ಥಿತಿಯಲ್ಲಿರುವ ಆರು ಮಂದಿ ಗಾಯಾಳುಗಳನ್ನು ಸುರಿ ಆಸ್ಪತ್ರೆಗೆ ಸೇರಿಸಲಾಗಿದೆ. ಹೆಚ್ಚಿನ ಸಂತ್ರಸ್ತರು ಔಷ್‌ಗ್ರಾಮಕ್ಕೆ ಸೇರಿದವರಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next