Advertisement

ಕ್ಲೋರಿನ್ ಅನಿಲ ಸೋರಿಕೆಯಿಂದ ಅಗ್ನಿಶಾಮಕ ದಳ‌ದ 6 ಮಂದಿ ಅಸ್ವಸ್ಥ

09:41 AM Nov 10, 2021 | Team Udayavani |

ಮೈಸೂರು: ಕ್ಲೋರಿನ್ ಅನಿಲ ಸೋರಿಕೆಯಿಂದ ಅಗ್ನಿಶಾಮಕದಳದ ಆರು ಮಂದಿ ಸಿಬ್ಬಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಿ.ನರಸೀಪುರ ಪಟ್ಟಣದಲ್ಲಿ ನಡೆದಿದೆ.

Advertisement

ತಿ.ನರಸೀಪುರ ಪುರಸಭೆಯಲ್ಲಿ ನೂತನವಾಗಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಘಟಕದಲ್ಲಿ ಕ್ಲೋರಿನ್ ಸಿಲಿಂಡರ್ ನಲ್ಲಿ ಮಂಗಳವಾರ ರಾತ್ರಿ ಸೋರಿಕೆ ಕಂಡುಬಂದಿದೆ.

ಮಾಹಿತಿ ತಿಳಿದು ಅಗ್ನಿಶಾಮಕದಳದ 6ಮಂದಿ ಸ್ಥಳಕ್ಕಾಗಮಿಸಿದ್ದಾರೆ. ಕ್ಲೋರಿನ್ ಅನಿಲ ಸೋರಿಕೆ ತಪ್ಪಿಸಲು, ಅಗ್ನಿಶಾಮಕ ದಳ ಸಿಬ್ಬಂದಿ ಸುಣ್ಣದ ನೀರನ್ನು ಮಿಶ್ರಣ ಮಾಡಿಕೊಂಡು ನೀರು ಶುದ್ಧೀಕರಣ ಘಟಕದ ಬಳಿ ತೆರಳಿದಾಗ 50 ಮೀಟರ್ ದೂರದಲ್ಲಿಯೇ ಅನಿಲ ವಾಸನೆಯಿಂದ 6ಮಂದಿ ಸಿಬ್ಬಂದಿ ಅಸ್ವಸ್ಥಗೊಂಡಿದ್ದಾರೆ.

ಅಸ್ವಸ್ಥಗೊಂಡಿದ್ದ ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ದರ್ಶನ್, ಪ್ರದೀಪ್, ಕಿಶೋರ್, ನಾಗರಾಜ್,ಯೋಗೇಶ್, ನಿಜಗುಣ, ಇವರನ್ನು ಕೂಡಲೇ ತಿ. ನರಸೀಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇದನ್ನೂ ಓದಿ: ಕುಡಿದ ಅಮಲಿನಲ್ಲಿ ರಸ್ತೆ ಬದಿ ಚರಂಡಿಗೆ ಬಿದ್ದು ವ್ಯಕ್ತಿ ಸಾವು

Advertisement

ವಿಷಯ ತಿಳಿದು ಶಾಸಕ ಅಶ್ವಿನ್ ಕುಮಾರ್ , ಡಿಎಚ್ ಒ ಡಾ.ಕೆ.ಎಚ್. ಪ್ರಸಾದ್ ಆಸ್ಪತ್ರೆಗೆ ಭೇಟಿ ನಲ್ಲಿ ಅಸ್ವಸ್ಥಗೊಂಡಿರುವ ಅಗ್ನಿಶಾಮಕದಳದ ಸಿಬ್ಬಂದಿಯ ಆರೋಗ್ಯದ ಮಾಹಿತಿ ಪಡೆದಿದ್ದಾರೆ.

ತ್ರಿವೇಣಿ ನಗರ ಸೀಲ್ ಡೌನ್

ನೀರು ಶುದ್ಧೀಕರಣ ಘಟಕದಿಂದ ಕ್ಲೋರಿನ್ ಸೋರಿಯಾಗಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ತ್ರಿವೇಣಿನಗರ ಬಡಾವಣೆ ಸೀಲ್ ಡೌನ್ ಮಾಡಲಾಗಿದ್ದು, ಸುತ್ತಮುತ್ತಲಿನ ಪ್ರದೇಶ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ. ಮನೆಯಿಂದ ಯಾರು ಹೊರಗೆ ಬಾರದಂತೆ ಎಚ್ಚರಿಕೆವಹಿಸುವಂತೆ ಧ್ವನಿವರ್ಧಕದ ಮೂಲಕ ಸೂಚನೆ ನೀಡಲಾಗಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಟೆಕ್ನಿಷಿಯನ್ ಗಳಿಂದ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಇಂದು ಅಲ್ಪ ಪ್ರಮಾಣದಲ್ಲಿ ಅನಿಲ ಸೋರಿಕೆಯಾಗುತ್ತಿದ್ದು, ಸುಮಾರು ಹತ್ತು ಗಂಟೆ ವೇಳೆಗೆ ಸಂಪೂರ್ಣವಾಗಿ ಅನಿಲ ಸೋರಿಕೆ ನಿಲ್ಲುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next