Advertisement

ಹೊಸ ವರ್ಷಕ್ಕೆ 6 ಜಿಲ್ಲೆಗಳಿಗೆ ಹೊಸ ಎಸ್ಪಿಗಳು

03:45 AM Jan 01, 2017 | |

ಬೆಂಗಳೂರು: ಹೊಸ ವರ್ಷಾಚರಣೆಗೆ ಕೆಲವೇ ಗಂಟೆಗಳ ಮುನ್ನ ಆಡಳಿತ ಯಂತ್ರಕ್ಕೆ ಭರ್ಜರಿ ಸರ್ಜರಿ ಮಾಡಿರುವ ರಾಜ್ಯ ಸರ್ಕಾರ 48 ಐಪಿಎಸ್‌, ಎಂಟು ಐಎಫ್ಎಸ್‌, 14 ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಹಾಗೂ ಪದೋನ್ನತಿ ಮಾಡಿದೆ.

Advertisement

ಬೆಂಗಳೂರು ನಗರ ಪೊಲೀಸ್‌ ಆಯುಕ್ತರಾಗಿದ್ದ ಎನ್‌.ಎಸ್‌. ಮೇಘರಿಕ್‌ ಅವರನ್ನು ಎಸಿಬಿ ಎಡಿಜಿಪಿಯಾಗಿ ವರ್ಗಾವಣೆ ಮಾಡಿ, ಅವರ ಸ್ಥಾನಕ್ಕೆ ಪ್ರವೀಣ್‌ ಸೂದ್‌ ಅವರನ್ನು ನೇಮಿಸಲಾಗಿದೆ. 

ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್‌ ಆಯುಕ್ತರನ್ನಾಗಿ ಮಾಲಿನಿ ಕೃಷ್ಣಮೂರ್ತಿ, ಹೇಮಂತ್‌ ನಿಂಬಾಳ್ಕರ್‌ ಹಾಗೂ ಎಸ್‌.ರವಿ ಅವರನ್ನು ನೇಮಿಸಲಾಗಿದೆ. ಬೆಂಗಳೂರು ಕೇಂದ್ರ ಡಿಸಿಪಿ ಸ್ಥಾನಕ್ಕೆ ಈ ಹಿಂದೆ ರಾಮನಗರ ಎಸ್‌ಪಿಯಾಗಿದ್ದ ಚಂದ್ರಗುಪ್ತ ಅವರನ್ನು ನೇಮಕ ಮಾಡಲಾಗಿದೆ.

ಐಪಿಎಸ್‌:
ಪ್ರವೀಣ್‌ಸೂದ್‌- ಬೆಂಗಳೂರು ನಗರ ಪೊಲೀಸ್‌ ಆಯುಕ್ತ. ಎಸ್‌.ಎನ್‌. ಮೇಘರಿಕ್‌- ಎಡಿಜಿಪಿ, ಎಸಿಬಿ. ಅಶಿತ್‌ ಮೋಹನ್‌ ಪ್ರಸಾದ್‌- ಎಡಿಜಿಪಿ, ಆಧುನೀಕರಣ ವಿಭಾಗ. ಕೆ.ವಿ. ಗಗನ್‌ದೀಪ್‌- ಎಡಿಜಿಪಿ, ಅಪರಾಧ ಮತ್ತು ತಾಂತ್ರಿಕ ವಿಭಾಗ. ರಾಜೀವ್‌ ಪ್ರತಾಪ್‌ ಶರ್ಮಾ- ವ್ಯವಸ್ಥಾಪಕ ನಿರ್ದೇಶಕ, ಕರಕುಶಲ ಅಭಿವೃದ್ಧಿ ನಿಗಮ. ಕಮಲ್‌ಪಂತ್‌- ಎಡಿಜಿಪಿ, ಆಡಳಿತ, ಕೇಂದ್ರ ಕಚೇರಿ. ಭಾಸ್ಕರ್‌ ರಾವ್‌- ಎಡಿಜಿಪಿ, ಕೆಎಸ್‌ಆರ್‌ಪಿ. ಪ್ರಶಾಂತ್‌ ಕುಮಾರ್‌ ಠಾಕೂರ- ಎಡಿಜಿಪಿ, ಬಿಎಂಟಿಎಫ್. ಎ.ಎಸ್‌.ಎನ್‌.ಮೂರ್ತಿ- ಎಡಿಜಿಪಿ, ರಸ್ತೆ ಸುರಕ್ಷತೆ. ಡಾ. ಅಬ್ದುಲ್‌ ಸಲೀಂ- ಐಜಿಪಿ, ದಾವಣಗೆರೆ ವಲಯ. ಚರಣ್‌ರೆಡ್ಡಿ- ಐಜಿಪಿ, ಕೆಎಸ್‌ಆರ್‌ಪಿ. ಮಾಲಿನಿ ಕೃಷ್ಣಮೂರ್ತಿ- ಹೆಚ್ಚುವರಿ ಆಯುಕ್ತರು, ಬೆಂಗಳೂರು ಪಶ್ಚಿಮ. ಅಲೋಕ್‌ಕುಮಾರ್‌- ಐಜಿಪಿ, ಕಲಬುರಗಿ ವಲಯ. ಅರುಣ್‌ ಚಕ್ರವರ್ತಿ- ಐಜಿಪಿ, ಆಂತರಿಕ ಭದ್ರತೆ, ಬೆಂಗಳೂರು.

ಬಿ.ಕೆ. ಸಿಂಗ್‌- ಐಜಿಪಿ, ತರಬೇತಿ ವಿಭಾಗ, ಬೆಂಗಳೂರು. ಹರಿಶೇಖರನ್‌- ಐಜಿಪಿ, ಮಂಗಳೂರು ವಲಯ. ಕೆ.ವಿ. ಶರತcಂದ್ರ- ಐಜಿಪಿ, ಎಸಿಬಿ. ಎಂ. ನಂಜುಂಡಸ್ವಾಮಿ- ಐಜಿಪಿ, ಆಡಳಿತ ವಿಭಾಗ, ಬೆಂಗಳೂರು ನಗರ. ಹೇಮಂತ್‌ ನಿಂಬಾಳ್ಕರ್‌- ಹೆಚ್ಚುವರಿ ಆಯುಕ್ತರು, ಬೆಂಗಳೂರು ಪೂರ್ವ. ಎಸ್‌.ರವಿ- ಐಜಿಪಿ, ಅಪರಾಧ ವಿಭಾಗ, ಬೆಂಗಳೂರು. ಎಸ್‌. ಮಧುಕರ್‌ ಶೆಟ್ಟಿ- ಐಜಿಪಿ, ರಾಜ್ಯ ಪೊಲೀಸ್‌ ಅಕಾಡೆಮಿ. ವಿಪುಲ್‌ಕುಮಾರ್‌- ಐಜಿಪಿ, ಮೈಸೂರು ವಲಯ.

Advertisement

ಡಿ.ರೂಪ- ಡಿಐಜಿ, ಕಾರಾಗೃಹ. ಎಸ್‌.ಎಸ್‌. ರೇವಣ್ಣ- ಡಿಐಜಿ, ಕೆಎಸ್‌ಆರ್‌ಪಿ, ಬೆಂಗಳೂರು. ಎನ್‌. ಸತೀಶ್‌ಕುಮಾರ್‌- ಡಿಐಜಿ, ಗುಪ್ತಚರ ವಿಭಾಗ. ಡಾ. ಬಿ.ಎ. ಮಹೇಶ್‌- ಡಿಐಜಿ, ನೇಮಕಾತಿ. ಡಾ. ಡಿ.ಸಿ. ರಾಜಪ್ಪ- ಜಂಟಿ ಆಯುಕ್ತ, ಸಿಎಆರ್‌. ಟಿ.ಆರ್‌. ಸುರೇಶ್‌- ಡಿಐಜಿ, ಅಗ್ನಿಶಾಮಕ. ಎಂ.ಎನ್‌. ನಾಗರಾಜ್‌- ಡಿಐಜಿ, ಅಪರಾಧ ತನಿಖಾ ವಿಭಾಗ. ಸಂದೀಪ್‌ ಪಾಟೀಲ್‌- ಡಿಐಜಿ, ಗುಪ್ತದಳ, ಬೆಂಗಳೂರು. ಚಂದ್ರಗುಪ್ತ- ಡಿಸಿಪಿ, ಬೆಂಗಳೂರು ಕೇಂದ್ರ. ಬಿ.ಎಸ್‌. ಲೋಕೇಶ್‌ಕುಮಾರ್‌- ಎಸ್‌ಪಿ, ಕೆಜಿಎಫ್, ವೈ.ಎಸ್‌. ರವಿಕುಮಾರ್‌- ಎಸ್‌ಪಿ, ಆಂತರಿಕ ಭದ್ರತೆ, ವಂಶಿ ಕೃಷ್ಣ- ಎಸ್‌ಪಿ, ಹಾವೇರಿ. ಬಿ.ರಮೇಶ್‌- ಎಸ್‌ಪಿ, ರಾಮನಗರ. ಇಡಾ ಮಾರ್ಟಿನ್‌- ಎಸ್‌ಪಿ, ಯಾದಗಿರಿ. ವರ್ತಿಕಾ ಕಟಿಯಾರ್‌- ಎಸ್‌ಪಿ, ಲೋಕಾಯುಕ್ತ. ಕಾರ್ತಿಕ್‌ ರೆಡ್ಡಿ- ಡಿಸಿಪಿ, ಆಡಳಿತ ವಿಭಾಗ, ಬೆಂಗಳೂರು. ಪಾಟೀಲ್‌ ವಿನಾಯಕ್‌ ವಸಂತರಾವ್‌- ಎಸ್‌ಪಿ, ಉತ್ತರ ಕನ್ನಡ. ಇಶಾ ಪಂತ್‌- ಎಸ್‌ಪಿ, ತುಮಕೂರು.

ಡಾ. ಸುಮನ್‌ ಡಿ. ಪೆನ್ನೆಕರ್‌- ಎಸ್‌ಪಿ, ಲೋಕಾಯುಕ್ತ, ಬೆಂಗಳೂರು. ಡಾ. ಅನೂಪ್‌ ಎ. ಶೆಟ್ಟಿ- ಎಸ್‌ಪಿ, ರೈಲ್ವೆ, ಬೆಂಗಳೂರು. ದಿವ್ಯಾ ಸಾರಾ ಥಾಮಸ್‌- ಎಸ್‌ಪಿ, ಅಪರಾಧ ತನಿಖೆ ವಿಭಾಗ, ಬೆಂಗಳೂರು. ಸಿ.ಬಿ. ಋಷ್ಯಂತ್‌- ಎಸ್‌ಪಿ, ಬಾಗಲಕೋಟೆ. ದೀಕಾ ಕಿಶೋರ್‌ ಬಾಬು- ಡಿಸಿಪಿ, ಸಿಎಆರ್‌, ಬೆಂಗಳೂರು. ನಿಶಾ ಜೇಮ್ಸ್‌- ಎಸ್‌ಪಿ, ಗುಪ್ತದಳ, ಬೆಂಗಳೂರು. ಡಾ. ಕೆ. ಅರುಣ್‌- ಎಎಸ್‌ಪಿ, ಹೊಳೇನರಸೀಪುರ ವಿಭಾಗ. ಎಂ.ಎಸ್‌. ಮೊಹಮ್ಮದ್‌ ಸುಜೀತ್‌- ಎಎಸ್‌ಪಿ, ನಂಜನಗೂಡು, ಉಪ ವಿಭಾಗ.

ವೇತನ ಬಡ್ತಿ:
ಡಾ. ಪಿ.ಎಸ್‌. ಹರ್ಷ, ಪವರ್‌ ಪ್ರವೀಣ್‌ ಮಧುಕರ್‌, ಲಾಬೂರಾವ್‌, ವಿಕಾಸ್‌ ಕುಮಾರ್‌, ಟಿ.ಡಿ. ಪವಾರ್‌, ಅಣ್ಣಿಗೆರೆ ಮಂಜುನಾಥ್‌, ರವಿಕುಮಾರ್‌ ಎಚ್‌. ನಾಯಕ್‌ ಅವರಿಗೆ ವೇತನ ಬಡ್ತಿ ನೀಡಿ ಈಗಿರುವ ಹುದ್ದೆಗಳಲ್ಲೇ ಮುಂದುವರಿಸಲಾಗಿದೆ.

ಐಎಎಸ್‌:
ಡಾ. ಜಿ. ಕಲ್ಪನಾ- ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಡಿಪಿಎಆರ್‌. ರಾಜೀವ್‌ ಚಾವ್ಲಾ- ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ. ವಿ. ಮಂಜುಳಾ- ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪರಿಸರ, ಜೈವಿಕ ಇಲಾಖೆ. ದರ್ಪಣ್‌ ಜೈನ್‌- ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಇ ಗವರ್ನೆನ್ಸ್‌. ಡಾ.ಜೆ.ರವಿಶಂಕರ್‌-ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮಂಡಳಿ. ಎಂ.ಮಂಜುನಾಥ್‌ ನಾಯಕ್‌- ಅಬಕಾರಿ, ಆಯುಕ್ತರು.

ಎಸ್‌.ಅಸ್ವತಿ- ಮುಖ್ಯ ಕಾರ್ಯನಿರ್ವಹಣಾಧಿಕಾರಿ, ದಾವಣಗೆರೆ ಜಿಲ್ಲಾ ಪಂಚಾಯಿತಿ. ಡಾ. ಅವಿನಾಶ್‌ ಮೆನನ್‌- ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಯಾದಗಿರಿ ಜಿಲ್ಲಾ ಪಂಚಾಯತ್‌. ಎಲ್‌. ಚಂದ್ರಶೇಖರ್‌ ನಾಯಕ್‌- ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಉತ್ತರ ಕನ್ನಡ ಜಿಲ್ಲಾ ಪಂಚಾಯತ್‌. ಎಂ.ಪಿ. ಮುಲ್ಲಾಯ್‌ ಮುಹಿಲಾನ್‌- ವ್ಯವಸ್ಥಾಪಕ ನಿರ್ದೇಶಕರು, ಎಸ್‌ಪಿವಿ, ಸ್ಮಾಟ್‌ ಸಿಟಿ ಯೋಜನೆ, ಬೆಳಗಾವಿ. ಡಾ.ಕೆ.ವಿ.ರಾಜೇಂದ್ರ- ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಬಳ್ಳಾರಿ ಜಿಲ್ಲಾ ಪಂಚಾಯತ್‌. ಡಾ.ಆರ್‌. ಸೆಲ್ವಮಣಿ-ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಬೀದರ್‌ ಜಿಲ್ಲಾ ಪಂಚಾಯತ್‌. ಆರ್‌.ಸ್ನೆಹಲ್‌- ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಧಾರವಾಡ ಜಿಲ್ಲಾ ಪಂಚಾಯತ್‌. 

ಐಎಎಸ್‌ ವೇತನ ಬಡ್ತಿ:
ಐಎಎಸ್‌ ಅಧಿಕಾರಿಗಳಾದ ಕೃಷ್ಣ ಬಾಜಪೇಯಿ, ಡಾ.ಆರ್‌.ವಿಶಾಲ್‌, ಎಂ.ಎನ್‌.ಅಜಯ ನಾಗಭೂಷಣ್‌, ವಿ. ಅನುº ಕುಮಾರ್‌, ಡಾ.ಎನ್‌.ವಿ. ಪ್ರಸಾದ್‌, ಸಿ.ಶಿಖಾ, ಖುಷೂº ಗೋಯಲ್‌ ಚೌಧರಿ, ಡಾ. ಏಕರೂಪ್‌ ಕೌರ್‌, ದೀಪ್ತಿ ಆದಿತ್ಯ ಕಾನಡೆ, ಉಜ್ವಲ್‌ಕುಮಾರ್‌ ಘೋಷ್‌, ಎಂ. ದೀಪಾ, ಪಿ.ರಾಜೇಂದ್ರ ಚೋಳನ್‌, ರಮಣದೀಪ್‌ ಚೌಧರಿ, ಬಿ.ಬಿ. ಕಾವೇರಿ, ಸುಷ್ಮಾ ಗೋಡಬೋಲೆ, ತಬಸ್ಸುಮ್‌ ಅಬ್ರು, ಟಿ.ಎಚ್‌.ಎಂ. ಕುಮಾರ್‌, ಎಚ್‌.ಆರ್‌. ಮಹದೇವ್‌, ಜಿಯಾವುಲ್ಲಾ, ಎಸ್‌.ಬಿ. ಶೆಟ್ಟಣ್ಣವರ್‌ ಅವರಿಗೆ ವೇತನ ಬಡ್ತಿ ನೀಡಲಾಗಿದೆ.

ಐಎಫ್ಎಸ್‌:
ಅನಿಲ್‌ಕುಮಾರ್‌ ರತನ್‌- ಪ್ರಧಾನ ಕಾರ್ಯನಿರ್ವಾಹಕ ಅಧಿಕಾರಿ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ. ಬಿ. ವೆಂಕಟೇಶ್‌-ಕಾರ್ಯನಿರ್ವಾಹಕ ನಿರ್ದೇಶಕ, ಜಂಗಲ್‌ ಲಾಡ್ಜಸ್‌ ಅಂಡ್‌ ರೆಸಾರ್ಟ್ಸ್. ಡಾ. ಮಂಜುನಾಥ್‌- ಉಪ ಅರಣ್ಯ ಸಂರಕ್ಷಣಾಧಿಕಾರಿ, ಚಿಕ್ಕಬಳ್ಳಾಪುರ ವಿಭಾಗ. ಡಾ. ಮಹೇಶ್‌ಕುಮಾರ್‌- ಉಪ ಅರಣ್ಯ ಸಂರಕ್ಷಣಾಧಿಕಾರಿ, ಕೇಂದ್ರ ಕಚೇರಿ, ಬೆಂಗಳೂರು. ಜೆ.ದೀಪಾ- ಉಪ ಅರಣ್ಯ ಸಂರಕ್ಷಣಾಧಿಕಾರಿ, ಕೇಂದ್ರ ಕಚೇರಿ, ಬೆಂಗಳೂರು. ಎಂ.ಎನ್‌.ವಿಜಯಕುಮಾರ್‌-ಉಪ ಅರಣ್ಯ ಸಂರಕ್ಷಣಾಧಿಕಾರಿ, ರಾಮನಗರ ವಲಯ. ಎ.ಚಂದ್ರಣ್ಣ- ಉಪ ಅರಣ್ಯ ಸಂರಕ್ಷಣಾಧಿಕಾರಿ, ರಾಮನಗರ ವಿಭಾಗ. ಎಂ.ಎಸ್‌.ಮಾಣಿಕ್‌- ಉಪ ಅರಣ್ಯ ಸಂರಕ್ಷಣಾಧಿಕಾರಿ, ಶಿವಮೊಗ್ಗ ವಿಭಾಗ.

Advertisement

Udayavani is now on Telegram. Click here to join our channel and stay updated with the latest news.

Next