Advertisement
ದಿನವನ್ನು ಉಲ್ಲಸಿತಗೊಳಿಸಲು, ಮುದುಡಿದ ಮನಸ್ಸನ್ನು ಅರಳಿಸಿ ಹೊಸತೊಂದು ಕೆಲಸಕ್ಕೆ ಕೈ ಹಾಕಲು ಪ್ರೇರಣೆ ನೀಡುವುದು ಟೀ ಪೇಯ. ಹೀಗಾಗಿ ಟೀ ಕುಡಿಯುವುದು ಹಲವರಿಗೆ ಹಲವಾರು ಮಾರ್ಗಗಳನ್ನು ಕಾಣಿಸಿದೆ. ನೋಡಿ ವರ್ಷವಾಗಿದ್ದ ಸ್ನೇಹಿತರೊಂದಿಗೆ ಮುಕ್ತವಾಗಿ ಹರಟಲು, ಕಚೇರಿಯ ಸಹೋದ್ಯೋಗಿಗಳೊಂದಿಗೆ ಒಂದು ವಾಕ್ ಹೊರಟು ಆಪ್ತ ಸಮಯವನ್ನು ಕಲೆಯಲು ಅನುವು ಮಾಡಿಕೊಡುವುದು ಈ ಟೀ. ಕೆಲವರಿಗೆ ಸಕ್ಕರೆ ಕಡಿಮೆ ಇರಬೇಕು, ಕೆಲವರಿಗೆ ಇಲಾೖಚಿ, ಇನ್ನು ಕೆಲವರಿಗೆ ನಾರ್ಮಲ್ ಟೀ, ಮತ್ತೆ ಕೆಲವರಿಗೆ ಸ್ಟ್ರಾಂಗ್ ಹೀಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಟೀ ಇಷ್ಟ. ಎಲ್ಲರಿಗೂ ಇಷ್ಟವಾಗಬಹುದಾದ, ರುಚಿಕರ ಟೀ ದೊರೆಯುವ ತಾಣಗಳಲ್ಲಿ ಕೆಲವನ್ನು ಇಲ್ಲಿ ನೀಡಿದ್ದೇವೆ.
ಬಿ.ಟಿ.ಎಂ. ಲೇಔಟಿನಲ್ಲಿ ನಿಮ್ಮ ಗೆಳೆಯರಿದ್ದರೆ ಟೀ ಕುಡಿಯೋಣ ಬಾ ಅಂತ ಕೇಳಿ ನೋಡಿ ಅವರು ಕರೆದೊಯ್ಯುವುದು ಡಿಸ್ನಿ ಬೇಕರಿಗೆ. ಟೀ ಎಂದರೆ ಇಲ್ಲಿನ ನಿವಾಸಿಗಳಿಗೆ ಮೊದಲು ನೆನಪಾಗೋದು ಡಿಸ್ನಿ ಬೇಕರಿ ಎಂಬ ಪುಟ್ಟ ಅಂಗಡಿ. ರಜಾ ದಿನದಲ್ಲಿ ಇಲ್ಲಿಗೆ ಬೆಳಗ್ಗೆ ಬಂದರೆ ಒಂದು ಕೈಯಲ್ಲಿ ಚಾಯ್ ಮತ್ತೂಂದು ಕೈಯಲ್ಲಿ ಪಪ್ಸ್ ಹಿಡಿದು ಮಾತುಕತೆಯಲ್ಲಿ ತೊಡಗಿರುವ ಮಂದಿಯ ಗುಂಪುಗಳನ್ನು ಕಾಣಬಹುದು. ಇಲಾೖಚಿ ಸ್ವಾದದ ಟೀ ಜೊತೆ ಬೆಣ್ಣೆ ಲೇಪಿತ ಬನ್ ಕೂಡಾ ಗ್ರಾಹಕರಿಗೆ ಅಚ್ಚುಮಚ್ಚು. ಎಲ್ಲಿ?: 7ನೇ ಕ್ರಾಸ್, ಬಿಟಿಎಂ ಲೇಔಟ್ 2ನೇ ಹಂತ
Related Articles
ಟೀ ಪಾರ್ಟಿ ಮಾಡಲು ಸೂಕ್ತವಾದ ಜಾಗ ಹುಡುಕುತ್ತಿದ್ದರೆ ಶ್ರೀದೇವಿ ಬೇಕರ್ ಅವರ ಜಿಂಜರ್ ಟೀ ಹೌಸ್ ಹೇಳಿ ಮಾಡಿಸಿದ ಜಾಗ. ಜಿಂಜರ್ ಟೀ ಇಲ್ಲಿನ ವೈಶಿಷ್ಟéತೆಯಾದರೂ ಲೆಮನ್, ಮಸಾಲಾ ಸೇರಿದಂತೆ ಇನ್ನಷ್ಟು ಬಗೆಯ ಸ್ವಾದಗಳ ಚಹಾ ಇಲ್ಲಿ ಸಿಗುತ್ತದೆ.
ಎಲ್ಲಿ?: ಸ್ಟೇಟ್ ಬ್ಯಾಂಕ್ ಆಫ್ ಟ್ರಾವೆಂಕೋರ್ ಎದುರು, ಬಿ.ಟಿ.ಎಂ ಲೇಔಟ್
Advertisement
3. ಮಕ್ಕಾಹ್ ಕೆಫೆ“ಮಕ್ಕಾಹ್’ ಎಂಬ ಹೆಸರಿನ ಈ ಟೀ ಸ್ಟಾಲ್ ನಿಜಾರ್ಥದಲ್ಲಿ ಚಹಾಪ್ರಿಯರ ಮೆಕ್ಕಾ. ಇಲ್ಲಿಗೆ ಕಾಲಿಟ್ಟರೆ ಶತಮಾನಗಳಷ್ಟು ಹಳೇ ಕಾಲಕ್ಕೆ ಬಂದುಬಿಟ್ಟಿದ್ದೇವೆ ಎಂಬ ಭಾವ ಆವರಿಸದೇ ಇರದು. ಇಲ್ಲಿನ ವಾತಾವರಣವೇ ಹಾಗಿದೆ. ದೈನಂದಿನ ಜಂಜಾಟಗಳಿಂದ ನಮ್ಮನ್ನು ಕಾಪಾಡಲು ಒಂದು ಕ್ಷಣ ಎಲ್ಲಾ ತಾಪತ್ರಯಗಳನ್ನು ಮರೆತು ಬಿಸಿ ಬಿಸಿ ಕಾಫಿ ಗುಟುಕೇರಿಸಲು ಇದೊಳ್ಳೆ ಜಾಗ.
ಎಲ್ಲಿ?: ಜಾನ್ಸನ್ ಮಾರ್ಕೆಟ್, ರಿಚ್‌ಮಂಡ್ ಟೌನ್ 4. ಮಹಾಲಕ್ಷ್ಮೀ ಟಿಫನ್ ರೂಂ
ಗಾಂಧಿಬಜಾರಿನಲ್ಲಿರುವ ಎಂ.ಎಲ್.ಟಿ.ಆರ್. ಹೊಟೇಲ್ ಹಳೇ ಬೆಂಗಳೂರಿನ ಪ್ರತೀಕವಾಗಿ ಅಂದಿನ ಸೊಗಸನ್ನು ನೆನಪಿಸುತ್ತಲೇ ಇದೆ. ಇಲ್ಲಿನ ರುಚಿಕರ ಖಾದ್ಯಗಳನ್ನು ಸವಿದು ಒಂದು ಕಪ್ ಟೀ ಹೇಳದಿದ್ದರೆ ಬ್ರೇಕ್‌ಫಾಸ್ಟ್ ಪೂರ್ತಿಯಾಗುವುದಿಲ್ಲ. ಇಲ್ಲಿಗೆ ಬರುವವರೂ ಅಷ್ಟೇ, ಅದನ್ನು ಅಲಿಖೀತ ನಿಯಮದಂತೆ ಅನೂಚಾನಾಗಿ ಪಾಲಿಸಿಕೊಂಡು ಬಂದಿದ್ದಾರೆ. ಟೀ ಕೊಡುವಾಗಲೂ ಅಷ್ಟೆ ಪುಟ್ಟ ಸ್ಟೀಲ್ ಲೋಟವನ್ನು ಪುಟ್ಟ ಬಟ್ಟಲಿನಲ್ಲಿ ಇಟ್ಟು ಕೊಡುತ್ತಾರೆ. ಇಲ್ಲಿನ ಪುಟ್ಟ ಪುಟ್ಟ ಬೆಂಚುಗಳಲ್ಲಿ ಟೀ ಹೀರುತ್ತಾ, ಇದ್ದರೆ ಹಳೇ ಬೆಂಗಳೂರಿನ ಅನುಭವ ನಿಮ್ಮದಾಗುವುದು ಖಂಡಿತ.
ಎಲ್ಲಿ?: ಗಾಂಧಿ ಬಜಾರ್ 5. ಚಾಯ್ ಪಾಯಿಂಟ್
ಕೆಫೆ ಕಾಫಿ ಡೇ, ಸ್ಟಾರ್‌ಬಕ್ಸ್‌ನಂಥ ದೊಡ್ಡ ದೊಡ್ಡ ಕೆಫೆಗಳಿಗಿಂತ ಭಿನ್ನವಾದ ರುಚಿಯ ಕಾಫಿಯನ್ನು ಹೀರಬೇಕೆನ್ನುವವರು ಚಾಯ್ ಪಾಯಿಂಟ್‌ಗೆ ಭೇಟಿ ನೀಡಬಹುದು. ಜಯನಗರ, ಎಂ.ಜಿ.ರಸ್ತೆ, ಕನ್ನಿಂಗ್‌ಹ್ಯಾಮ್ ರಸ್ತೆ, ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ಸ್‌ಸಿಟಿ, ಇಂದಿರಾನಗರ ಸೇರಿದಂತೆ ಹಲವಾರು ಕಡೆ ಚಾಯ್ ಪಾಯಿಂಟ್ ಮಳಿಗೆಗಳಿವೆ. ತುರ್ತಿನಲ್ಲಿದ್ದಾಗ, ಟೀ ಕುಡಿಯಲು ಇಷ್ಟವಿದೆ ಆದರೆ ಸಮಯವಿಲ್ಲ ಎನ್ನುವವರನ್ನು ಗಮನದಲ್ಲಿರಿಸಿಕೊಂಡು ಚಾಯ್ ಪಾಯಿಂಟ್ ಕಾನ್ಸೆಪ್ಟ್ ತಯಾರಿಸಿಕೊಂಡಿದೆ. ಮಳಿಗೆಯ ವಿನ್ಯಾಸವನ್ನು ಅದಕ್ಕೆ ತಕ್ಕನಾಗಿ ದರ್ಶಿನಿಗಳ ಮಾದರಿಯಲ್ಲಿ ವಿನ್ಯಾಸಗೊಳಿಸಿದೆ. ಇಲ್ಲಿ ದೊರೆಯುವ ಟೀಯ ಸ್ವಾದ ಲೈಟಾಗಿದ್ದರೂ ತುಂಬಾ ಇಷ್ಟವಾಗುತ್ತೆ ಎನ್ನುತ್ತಾರೆ ಇಲ್ಲಿನ ಗ್ರಾಹಕರು. ಬಹುತೇಕ ಮೆಟ್ರೊಪಾಲಿಟನ್ ನಗರಗಳಲ್ಲಿ ಜನಪ್ರಿಯತೆ ಗಳಿಸಿರುವ ದೇಶಿ ಬ್ರಾÂಂಡ್ ಮೊದಲು ಜನ್ಮ ತಳೆದಿದ್ದು ಬೆಂಗಳೂರಿನಲ್ಲಿ. 6. ಜನತಾ ಹೋಟೆಲ್
ವಿ.ವಿ. ಪುರಂ ಫುಡ್ ಸ್ಟ್ರೀಟ್ ಬಹುತೇಕರಿಗೆ ಗೊತ್ತಿರುತ್ತೆ. ಆಹಾರ ಪ್ರಿಯರ ನೆಚ್ಚಿನ ತಾಣ ಅದು. ಆದರ ಸಮೀಪದಲ್ಲೇ ರುಚಿಕರ ಟೀ ತಾಣವೂ ಇದೆ. ಅದೇ ಜನತಾ ಹೋಟೆಲ್. ಸಜ್ಜನ್‌ರಾವ್ ಸರ್ಕಲ್‌ನಿಂದ ಲಾಲ್‌ಬಾಗ್‌ಗೆ ಹೋಗುವ ದಾರಿಯಲ್ಲಿ ಸಿಗುತ್ತದೆ. ಜನತಾ ಹೊಟೇಲ್ ಕೂಡಾ ಹಳೆಯ ಬೆಂಗಳೂರನ್ನು ನೆನಪಿಸುವ ಒಂದು ಪುಟ್ಟ ಹೋಟೆಲ್. ಇಲ್ಲಿ ಸಿಗುವ ಖಾದ್ಯಗಳು ರುಚಿಕರವಾಗಿರುತ್ತವೆ. ಅದರ ಜತೆಯಲ್ಲೇ ಟೀ ಸೇವಿಸುವುದನ್ನು ಮರೆಯದಿರಿ.
ಎಲ್ಲಿ?: ಜನತಾ ಹೊಟೇಲ್, ಸಜ್ಜನ್‌ರಾವ್ ಸರ್ಕಲ್ ಬಳಿ