ನವದೆಹಲಿ: ಅಸ್ಸಾಂನಲ್ಲಿ ಬುಧವಾರ(ಏಪ್ರಿಲ್ 28) ಬೆಳಗ್ಗೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.4ರಷ್ಟು ತೀವ್ರತೆ ದಾಖಲಾಗಿರುವುದಾಗಿ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಆದರೆ ಭೂಕಂಪನದಿಂದ ಸಂಭವಿಸಿದ ಸಾವು, ನೋವಿನ ಬಗ್ಗೆ ತಕ್ಷಣಕ್ಕೆ ಯಾವುದೇ ಮಾಹಿತಿ ಬಂದಿಲ್ಲ.
ಇದನ್ನೂ ಓದಿ:ಹುಣಸೂರು : 24 ಗಂಟೆಯಲ್ಲಿ ನಾಲ್ಕು ಸಾವು, 4 ಗ್ರಾಮ ಸೀಲ್ ಡೌನ್
ಅಸ್ಸಾಂನಲ್ಲಿ ಭಾರೀ ಭೂಕಂಪ ಸಂಭವಿಸಿದ ಅನುಭವವಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ ಎಂದು ಅಸ್ಸಾಂ ಆರೋಗ್ಯ ಸಚಿವ ಹಿಮಂತ್ ಬಿಸ್ವಾ ಸರ್ಮಾ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಅಸ್ಸಾಂನಲ್ಲಿ ಸಂಭವಿಸಿರುವ ಭೂಕಂಪನದ ಬಗ್ಗೆ ಗುವಾಹಟಿ ನಿವಾಸಿಯೊಬ್ಬರು ಟ್ವೀಟರ್ ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಸೀಲಿಂಗ್ ಫ್ಯಾನ್ ಅಲುಗಾಡುತ್ತಿರುವ ದೃಶ್ಯ ಸೆರೆಯಾಗಿದೆ.