ಮಣಿಪಾಲ: ಮುಂದಿನ ಹಣಕಾಸು ಆರ್ಥಿಕ ವರ್ಷದಲ್ಲಿ ಕರ್ನಾಟಕ ರಾಜ್ಯಕ್ಕೆ ವಿಶೇಷ ಅನುದಾನ ನೀಡಬಹುದು ಎಂಬ 15ನೇ ಹಣಕಾಸು ಆಯೋಗದ ಶಿಫಾರಸನ್ನು ಕೇಂದ್ರ ಸರ್ಕಾರ ತಿರಸ್ಕರಿಸಿರುವ ಕುರಿತು ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಅಯ್ದ ಉತ್ತರಗಳು ಇಲ್ಲಿವೆ
ಚಿ. ಮ. ವಿನೋದ್ ಕುಮಾರ್. ಕನ್ನಡಿಗರಿಗೆ ಉದ್ಯೋಗದಲ್ಲೂ ಖೋತ. ಕರ್ನಾಟಕಕ್ಕೆ ಅನುದಾನದಲ್ಲೂ ಖೋತ. ಕನ್ನಡಿಗ ಮತದಾರ ಕೂಡಾ ಸೋತ.
ಉಮೇಶ್ ಬಲಿ: ಕೇಂದ್ರ ಸರಕಾರದ ಉತ್ತಮ ನಿರ್ಧಾರ. ಈಗಾಲಾದರೂ ಯಾರಿಗೆ ಮತ ಹಾಕೆಂದು ಕನ್ನಡಿಗರು ತಿಳಿಸುಕೊಳ್ಳಬೇಕು. ಅಂಧ ಭಕ್ತರು ಇರುವವರೆಗೆ ಮೋದಿ ಕರ್ನಾಟಕದ ಕಡೆಗೆ ನೋಟ ಹರಿಸುವುದಿಲ್ಲ.
ತ್ರಿವೇಣಿ ರಾಜೇಂದ್ರ ಟಿಎಸ್: ಅವರು ಬೇಕಂತಲೇ ಕರ್ನಾಟಕವನ್ನು ಕಡೆಗಣಿಸುತ್ತಿದ್ದಾರೆ. ಬೇರೆ ರಾಜ್ಯಗಳಂತೆ ನಾವು ಕೂಡ ಅವರನ್ನು ಕಡೆಗಣಿಸಬೇಕು. ನಮ್ಮ ಸಂಸದರು ಯಾವಾಗಲೂ ಯಾಕೆ ಸುಮ್ಮನಿರುತ್ತಾರೆ ಗೊತ್ತಿಲ್ಲ