ಕಾಬೂಲ್: ಪಾಕಿಸ್ತಾನದ ಗಡಿ ಪ್ರದೇಶವಾದ ಪೂರ್ವ ಅಫ್ಘಾನಿಸ್ತಾನದ ಪರ್ವತಶ್ರೇಣಿ ಪ್ರದೇಶದ ಸಮೀಪ ಬುಧವಾರ (ಜೂನ್ 22) ಸಂಭವಿಸಿದ ಪ್ರಬಲ ಭೂಕಂಪದಲ್ಲಿ 900ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 600 ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ಪೂರ್ವ ಅಫ್ಘಾನಿಸ್ತಾನದಲ್ಲಿ ನಸುಕಿನ ವೇಳೆ ಸಂಭವಿಸಿದ ತೀವ್ರ ಭೂಕಂಪದಲ್ಲಿ 250ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ ಎಂದು ಪ್ರಾಥಮಿಕ ವರದಿ ತಿಳಿಸಿತ್ತು.
ಇದನ್ನೂ ಓದಿ:ಮಂಗಳೂರಿನಿಂದ ಉಡುಪಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಬಂದ ಬಾಣಸಿಗ
ರಿಕ್ಟರ್ ಮಾಪಕದಲ್ಲಿ 6.1ರಷ್ಟು ತೀವ್ರತೆ ದಾಖಲಾಗಿರುವುದಾಗಿ ಅಮೆರಿಕದ ಭೂಗರ್ಭ ಸಮೀಕ್ಷೆ ವರದಿ ತಿಳಿಸಿದೆ. ಸಾವು-ನೋವಿನ ನಿಖರ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ ಎಂದು ವರದಿ ಹೇಳಿದೆ. ಭೂಕಂಪವು ಪಾಕಿಸ್ತಾನದ ಗಡಿ ಸಮೀಪ ಇರುವ ಖೋಸ್ಟ್ ನಗರದಿಂದ ಸುಮಾರು 44 ಕಿಲೋ ಮೀಟರ್ ದೂರದಲ್ಲಿ ಸಂಭವಿಸಿದೆ.
ಭೂಕಂಪ ಕೇವಲ ಅಫ್ಘಾನಿಸ್ತಾನ ಮಾತ್ರವಲ್ಲ ಪಾಕಿಸ್ತಾನದ ಲಾಹೋರ್, ಮುಲ್ತಾನ್, ಕ್ವೆಟ್ಟಾ ಸೇರಿದಂತೆ ಹಲವೆಡೆ ಭೂಕಂಪ ಸಂಭವಿಸಿದೆ. ಕೆಲವು ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ್ದ ಪರಿಣಾಮ ಜನರು ಹೆದರಿ ಮನೆಯಿಂದ ಹೊರ ಓಡಿಹೋಗುತ್ತಿರುವ ದೃಶ್ಯ ಕಂಡು ಬಂದಿರುವುದಾಗಿ ವರದಿ ವಿವರಿಸಿದೆ.
ಭೂಕಂಪದಲ್ಲಿ 150ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 450ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಭೂಕಂಪದಿಂದ ಎಷ್ಟು ಮನೆಗಳು, ಅಂಗಡಿ, ಮುಂಗಟ್ಟುಗಳು ನಾಶವಾಗಿದೆ ಎಂಬ ವಿವರ ಇನ್ನಷ್ಟೇ ತಿಳಿದು ಬರಬೇಕಾಗಿದೆ ಎಂದು ವರದಿ ತಿಳಿಸಿದೆ.
ಘಟನೆಯಲ್ಲಿ ಗಾಯಗೊಂಡವರನ್ನು ರಕ್ಷಿಸುವ ಕಾರ್ಯ ಮುಂದುವರಿದಿದ್ದು, ಜನರು ಭಯ, ಭೀತಗೊಂಡಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಶೇಷಗಳಡಿ ಸಿಲುಕಿದ ಶವಗಳನ್ನು ಹೊರತೆಗೆಯಲಾಗುತ್ತಿದೆ ಎಂದು ವಿವರಿಸಿದ್ದಾರೆ.