Advertisement
ಮೀರಾರೋಡ್ ಪೂರ್ವದ ಮೀರಾ-ಭಾಯಂದರ್ ರೋಡ್, ನ್ಯೂ ಪೆಟ್ರೋಲ್ ಬಂಕ್ ಎದುರುಗಡೆಯ ಸಾಯಿಬಾಬಾ ನಗರದಲ್ಲಿರುವ ಸೈಂಟ್ ಥಾಮಸ್ ಚರ್ಚ್ ಸಭಾಗೃಹದಲ್ಲಿ ಮಾ. 6ರಂದು ಸಂಜೆ ನಡೆದ ಯಕ್ಷಪ್ರಿಯ ಬಳಗ ಮೀರಾ-ಭಾಯಂದರ್ ಇದರ 5ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಕ್ಷಗಾನದ ರಕ್ಷಣೆ ಮಾಡುತ್ತಿರುವ ನಗರದ ಅಪೂರ್ವ ಹವ್ಯಾಸಿ ಸಂಘಟಕ ಯಕ್ಷಗುರು ನಾಗೇಶ್ ಪೊಳಲಿ ಅವರಲ್ಲಿ ಬಡತನವಿದ್ದರೂ ಕಲೆಯ ಸಿರಿವಂತಿಕೆಯಿದೆ. ಪೌರಾಣಿಕ, ಐತಿಹಾಸಿಕ ಕಥೆಗಳೊಂದಿಗೆ ಯಕ್ಷಗಾನವನ್ನು ಉಳಿಸಿ-
Related Articles
Advertisement
ಅತಿಥಿಯಾಗಿ ಆಗಮಿಸಿದ ವಸಾಯಿ ಶ್ರೀ ಮಣಿಕಂಠ ಸೇವಾ ಸಮಿತಿಯ ಗೌರವಾಧ್ಯಕ್ಷ ಕರ್ನೂರು ಶಂಕರ ಆಳ್ವ ಮಾತನಾಡಿ, ಹೆಜ್ಜೆಯೊಂದಿಗೆ ಗೆಜ್ಜೆಗಳ ನಾದವನ್ನು ಪಸರಿಸಿದ ಅಂಗ್ಲ ಮಾಧ್ಯಮದ ವಿದ್ಯಾರ್ಥಿಗಳು ಕಲಾ ಸಂಸ್ಕೃತಿಯ ಭದ್ರ ಭುನಾದಿಯಾಗಿದ್ದಾರೆ ಎಂದರು.
ಸಮಾರಂಭದಲ್ಲಿ ಯಕ್ಷಗಾನ ಕಲಾವಿ ದರಾದ ಪ್ರವೀಣ್ ಆರ್. ಶೆಟ್ಟಿ, ಹರೀಶ್ ಎನ್. ಶೆಟ್ಟಿ, ರಾಘವದಾಸ್ ಮತ್ತು ವಸಂತಿ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಉದ್ಯಮಿ ಐಕಳ ಅನಂದ ಶೆಟ್ಟಿ, ಗ್ಲೋ ಬಲ್ ಕ್ಯಾರಿಯರ್ ಸರ್ವಿಸ್ ಪ್ರೈ. ಲಿ.ನ ಎಂಬಿಆರ್ ವಿಜಯ ಬಾಲಕೃಷ್ಣ ರಾವ್,ಮೀರಾ-ಭಾಯಂದರ್ ಬಿಜೆಪಿ ಉಪಾ ಧ್ಯಕ್ಷ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿ ಗುತ್ತು, ವಸಾಯಿ ಶ್ರೀದೇವಿ ಯಕ್ಷಕಲಾ ನಿಲಯದ ಅಧ್ಯಕ್ಷ ಶಶಿಧರ ಶೆಟ್ಟಿ ಇನ್ನಂಜೆ, ವಸಾಯಿ ಜೀವದಾನಿ ಯಕ್ಷ ಕಲಾವೇದಿಕೆಯ ಅಧ್ಯಕ್ಷ ಮಂಜುನಾಥ ಶೆಟ್ಟಿ ಶುಭ ಹಾರೈಸಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯಕ್ಷ ಪ್ರಿಯ ಬಳಗದ ಸದಸ್ಯರಿಂದ ಕೋಟಿ -ಚೆನ್ನಯ ಮತ್ತು ಬಪ್ಪನಾಡು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಯಕ್ಷ ಗುರು, ಕಾರ್ಯಕ್ರಮದ ಆಯೋಜಕ ನಾಗೇಶ್ ಪೊಳಲಿ ಸ್ವಾಗತಿಸಿ, ಗಣ್ಯರನ್ನು ಗೌರವಿಸಿದರು. ರಂಗಭೂಮಿ ಕಲಾವಿದ ಜಿ. ಕೆ. ಕೆಂಚನ ಕೆರೆ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ಸಾಣೂರು ಸತೀಶ್, ಸದಾನಂದ ಶೆಟ್ಟಿ, ದಿನೇಶ್ ಪಿ. ಶೆಟ್ಟಿ ಕಾಪು ಕಲ್ಯ, ರಾಜೇಶ್ ಶೆಟ್ಟಿ ಕಾಪು, ದೇವರಾಜ್ ಶೆಟ್ಟಿ, ಗುಣ ಕಾಂತ್ ಶೆಟ್ಟಿ ಕರ್ಜೆ, ಭಾಸ್ಕರ್ ಎಂ. ಮೂಲ್ಯ, ಸುರೇಶ್ ಇರ್ವತ್ತೂರು, ಪ್ರವೀಣ್ ಶೆಟ್ಟಿ ಕಣಂಜಾರು ಮತ್ತು ಶ್ರೀ ಶನೀಶ್ವರ ಸೇವಾ ಸಮಿತಿ ಮೀರಾರೋಡ್ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಚೌಕಿಯಿಂದ ರಂಗಸ್ಥಳವರೆಗಿನ ಅನುಭವ ಹೊಂದಿದ ಯಕ್ಷಗುರು ನಾಗೇಶ್ ಪೊಳಲಿ ಸರ್ವಗುಣ ಸಂಪನ್ನರಾಗಿದ್ದಾರೆ. –ವಾಸುದೇವ ಶೆಟ್ಟಿ ಮಾರ್ನಾಡು ಯಕ್ಷಗಾನ ಕಲಾವಿದರು
ಸಂಸ್ಕೃತಿಯೊಂದಿಗೆ ಬೆಸೆದುಕೊಂ ಡಿರುವ, ನಮ್ಮ ಆಚರಣೆ ಸಂಪ್ರದಾಯವನ್ನು ಮೈವೆತ್ತಿರುವ ಶ್ರೇಷ್ಠ ಸಂಸ್ಥೆ ಯಕ್ಷ ಪ್ರಿಯ ಬಳಗವಾಗಿದೆ. –ಸಿಎ. ಸುರೇಂದ್ರ ಕೆ. ಶೆಟ್ಟಿ ಉಪಾಧ್ಯಕ್ಷರು, ಬಾಂಬೆ ಬಂಟ್ಸ್ ಅಸೋಸಿಯೇಶನ್
ಪರೀಕ್ಷೆಯ ಒತ್ತಡ, ಕೊರೊನಾ ನಿರ್ಬಂಧಗಳ ಪಾಲನೆಯೊಂದಿಗೆ ಯಕ್ಷಗಾನ ಯಶಸ್ವಿಯಾಗಿ ಪ್ರದರ್ಶನವಾಗಿವೆ. ಸಂಸ್ಕೃತಿಯ ಬೆಳವಣಿಗೆಯಲ್ಲಿ ಯಕ್ಷಗಾನದ ಕೊಡುಗೆ ಮಹತ್ತರವಾಗಿದೆ.–ರವೀಂದ್ರ ಶೆಟ್ಟಿ ಕೊಟ್ರಪಾಡಿ ಬಳುRಂಜೆ ಗುತ್ತು ಗುತ್ತಿನಾರ್ ಸಮಾಜ ಸೇವಕರು
ಪೌರಾಣಿಕ ಕಥೆಗಳ ಯಕ್ಷಗಾನವು ಸಂಸ್ಕೃತಿ, ಸಂಸ್ಕಾರ ನೀಡುವ ವೇದಿಕೆ ಯಾಗಿದೆ. ಮಾನಸಿಕ ಬೆಳವಣಿಗೆಗೆ ಪೂರಕವಾಗಿವೆ.-ಗಣೇಶ್ ಸುವರ್ಣಕಾರ್ಯಾಧ್ಯಕ್ಷರು, ಬಿಲ್ಲವರ ಅಸೋಸಿಯೇಶನ್ –ವಿರಾರ್ ಸ್ಥಳೀಯ ಕಚೇರಿ
ತುಳುನಾಡಿನ ಕಾರಣಿಕ ಪುರುಷರ ಮತ್ತು ಬಪ್ಪನಾಡು ಕ್ಷೇತ್ರ ಮಹಾತೆ¾ ಧರ್ಮಗಳ ತಿರುಳನ್ನು ಸೂಕ್ಷ್ಮವಾಗಿ ವಿವರಿಸಿದೆ. –ವಸಂತಿ ಶೆಟ್ಟಿ, ಉಪಕಾರ್ಯಾಧ್ಯಕ್ಷೆ, ಬಂಟರ ಸಂಘ ಮಹಿಳಾ ವಿಭಾಗ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿ
–ಚಿತ್ರ –ವರದಿ: ರಮೇಶ ಅಮೀನ್