Advertisement

ಒಂಟಿ ಕಾಲಲ್ಲಿ 5 ಕಿ.ಮೀ.ಓಡಿದ!

11:51 PM Feb 04, 2020 | Lakshmi GovindaRaj |

ಮಂಗಳೂರು: ಸಾಧನೆ, ಸಾಹಸಕ್ಕೆ ಅಂಗ ಊನತೆ ನೆಪವಲ್ಲ ಎಂಬುದನ್ನು ಮಹಾರಾಷ್ಟ್ರ ಮೂಲದ ಸಾಹಸಿಗರೊಬ್ಬರು ಮಂಗಳೂರಿನ ನೆಲದಲ್ಲಿ ತೋರಿಸಿಕೊಟ್ಟಿದ್ದಾರೆ. ಕೈಯಲ್ಲಿ ಊರು ಗೋಲು ಹಿಡಿದು ಒಂಟಿ ಕಾಲಿನಲ್ಲಿ 5 ಕಿ.ಮೀ. ಓಡುವ ಮೂಲಕ ಸಾಹಸ ಮೆರೆದಿದ್ದಾರೆ. ದಕ್ಷಿಣ ಕನ್ನಡ ಅಥ್ಲೆಟಿಕ್‌ ಅಸೋಸಿ ಯೇಶನ್‌ ವತಿಯಿಂದ ಫಿಟ್‌ ಇಂಡಿಯಾ ಥೀಂ ನಡಿ ಇತ್ತೀಚೆಗೆ ಸಹ್ಯಾದ್ರಿ 10ಕೆ ರನ್‌ ಮಂಗಳೂರು’ ಮೆಗಾ ಮ್ಯಾರಾಥಾನ್‌ ನಡೆಸಲಾಗಿತ್ತು.

Advertisement

ಮಹಾರಾಷ್ಟ್ರದ ಲೋನರ್‌ನ ಜಾವೇದ್‌ ಚೌದರಿ ಅವರೂ ಭಾಗವಹಿಸಿದ್ದರು. ಆದರೆ, ಅಪಘಾತದಲ್ಲಿ ಬಲಗಾಲನ್ನು ಕಳೆದುಕೊಂಡಿದ್ದ ಅವರಿಗೆ ನಡೆದಾಡುವುದಕ್ಕೆ ಎಡಗಾಲೇ ಆಸರೆ. ಆದರೂ, ಮರುಗದೆ, ಮಂಗಳೂರಿಗೆ ಆಗಮಿಸಿ ಕೈಯಲ್ಲಿ ಊರುಗೋಲು ಹಿಡಿದು ಎಡಗಾಲಿನಲ್ಲೇ ಓಡಿ 5 ಕಿ.ಮೀ. ದೂರ ಕ್ರಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next